ಚಾಮರಾಜನಗರ: ಅಹಿಂದ ನಾಯಕ ಸಿದ್ದರಾಮಯ್ಯ ಅವರು ಕೊಟ್ಟ ಮಾತಿಗೆ ಬದ್ಧರಾದವರು, ಈ ನಿಟ್ಟಿನಲ್ಲಿ ಅವರ ಮಾತಿಗೆ ನಾವು ಬದ್ಧರಾಗಿ ಸಾಗುತ್ತೇವೆ ಎಂದು ಅಹಿಂದ ಸಂಘಟನೆ ಜಿಲ್ಲಾಧ್ಯಕ್ಷ ಕೆರೆಹಳ್ಳಿ ರೇವಣ್ಣ ತಿಳಿಸಿದರು.
ರಾಜ್ಯದಲ್ಲಿ ನಡೆಯುತ್ತಿರುವ ಅಧಿಕಾರ ಬದಲಾವಣೆ ವಿಚಾರವಾಗಿ ಜನತಾ ರಾಯಭಾರಿಯೊಂದಿಗೆ ಅವರು ಮಾತನಾಡಿ, ಒಂದು ವೇಳೆ ಕಾಂಗ್ರೆಸ್ ಹೈಕಮಾಂಡ್ ಮತ್ತು ರಾಹುಲ್ ಗಾಂಧಿ ಅವರೊಂದಿಗೆ ಅಧಿಕಾರ ಹಂಚಿಕೆ ಚರ್ಚೆಯಾಗಿದ್ದರೇ, ಅವರು ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಾರೆ. ಇಲ್ಲವಾದರೇ ಕುಮಾರಸ್ವಾಮಿ ಅವರು ಕುರ್ಚಿ ಬಿಟ್ಟು ಕೊಡದೇ ಮೋಸ ಮಾಡಿದಂತೆ ಆಗುತ್ತದೆ. ಈ ನಿಟ್ಟಿನಲ್ಲಿ ನಮಗೆ ಸಿದ್ದರಾಮಯ್ಯ ಅವರು ಕೊಟ್ಟ ಮಾತಿಗೆ ಬದ್ಧರಾಗಿರುತ್ತಾರೆ. ನಾವು ಕೂಡ ಅವರ ಮಾತಿಗೆ ನಿಷ್ಠರಾಗಿರುತ್ತೇವೆ ಎಂದರು.

ಅಧಿಕಾರ ಹಂಚಿಕೆ ಚರ್ಚೆಗಳು ನಡೆದಿದ್ದರೇ, ಅಧಿಕಾರ ಬಿಟ್ಟು ಕೊಡಬೇಕಾಗುತ್ತದೆ. ಈಗಷ್ಟೇ ನಮಗೆ ಚರ್ಚೆಯ ವಿಷಯ ಗೊತ್ತಾಗುತ್ತಿದೆ. ಮುಂದಿನ ದಿನಗಳಲ್ಲಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರು ಉಪಮುಖ್ಯಮಂತ್ರಿಯಾಗುತ್ತಾರೆ ಎಂಬ ಮಾತುಗಳು ನಡೆದಿದ್ದು, ಪಕ್ಷದ ಹಿತದೃಷ್ಟಿಯಿಂದ ಎಲ್ಲವನ್ನೂ ಅಹಿಂದ ಸಂಘಟನೆ ಸ್ವಾಗತಿಸುತ್ತದೆ ಎಂದು ಹೇಳಿದರು.