ನವ ಮನ್ವಂತರಕ್ಕೆ ಮುನ್ನುಡಿ ಬರೆದ ಸಚಿವ ಡಾ.ಹೆಚ್.ಸಿಮಹದೇವಪ್ಪ   

ಮಣಿಕಂಠ ಜನತಾ ರಾಯಭಾರಿ
6 Min Read

ಸಮಾಜ ಕಲ್ಯಾಣ ಇಲಾಖೆಯು ಪರಿಶಿಷ್ಟ ಜಾತಿಯ ನಿಮ್ನ ವರ್ಗಗಳ ಅಭಿವೃದ್ಧಿಗೆ ಸ್ಥಾಪಿತವಾದ ಇಲಾಖೆಯಾಗಿದೆ. ಪರಿಶಿಷ್ಟ ವರ್ಗಗಳಲ್ಲಿ ಕಂಡು ಬರುವ 101 ವರ್ಗಗಳ ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕ ಪ್ರಗತಿಯನ್ನು ಸಾಧಿಸುವುದು ಸಮಾಜ ಕಲ್ಯಾಣ ಇಲಾಖೆಯ ಮುಖ್ಯ ಉದ್ದೇಶವಾಗಿದೆ. ಈ ಇಲಾಖೆಯನ್ನು 1956ರಲ್ಲಿ ಅಂದಿನ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಸ್ಥಾಪನೆ ಮಾಡಿ ಅವರೇ ಇಲಾಖೆಯ ಜವಬ್ದಾರಿಯನ್ನು ವಹಿಸಿಕೊಂಡಿದ್ದರು, ಆ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯನ್ನು ನಿಮ್ನ ವರ್ಗಗಳ ಕಲ್ಯಾಣ ಇಲಾಖೆ ಎಂದು ಕರೆಯುತ್ತಿದ್ದರು. ತದ ನಂತರ 1958ರಲ್ಲಿ ಎನ್ ರಾಚಯ್ಯ ಅವರು ಮಂತ್ರಿಯಾದಾಗ ಸಮಾಜ ಕಲ್ಯಾಣ ಇಲಾಖೆ ಎಂದು ಮರುನಾಮಕರಣ ಮಾಡಲಾಯಿತು.

ಡಾ.ಹೆಚ್.ಸಿ ಮಹದೇವಪ್ಪ ನವರು 2023ರಲ್ಲಿ ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯ ಮಂತ್ರಿಯಾಗಿ ಅಧಿಕಾರವಹಿಸಿಕೊಂಡು ಮೂರು ವಸಂತಗಳನ್ನು ಪೂರೈಸಿ, ಕೆಲವು ಇತಿಹಾಸಿಕ ನಿರ್ಣಯಗಳಿಗೆ ಮುನ್ನುಡಿ ಬರೆದಿದ್ದಾರೆ.

ಅಂತರ್ಜಾತಿ ವಿವಾಹಕ್ಕೆ ಕಾನೂನಿನ ಬಲ:- (‘ಇವ ನಮ್ಮವ ಇವ ನಮ್ಮವ ಕಾಯ್ದೆ) ಜಾತಿಯನ್ನು ಕಟ್ಟೆಯನ್ನು ಒಡೆದು, ಪ್ರೀತಿಸಿ ಮದುವೆಯಾಗಿ ಬದುಕನ್ನು ಕಟ್ಟಿಕೊಳ್ಳಬೇಕು ಎಂಬ ಮಹತ್ವಾಕಾಂಕ್ಷೆಯನ್ನು ಹೊಂದಿರುವ ನವ ಜೋಡಿಗೆ ಕುಟುಂಬದ ಅಥವಾ ಯಾವುದೇ ಅನ್ಯ ವ್ಯಕ್ತಿಗಳಿಂದ ಮರ್ಯಾದೆಯ ಹೆಸರಿನಲ್ಲಿ ಹಲ್ಲೆ ಅಥವಾ ಹತ್ಯೆ ಮಾಡುವಂತಹ ವಿಕೃತ ಮನಸ್ಸುಗಳಿಗೆ ‘ಇವ ನಮ್ಮವ ಇವ ನಮ್ಮವ’’ ಎಂಬ ಕಾಯ್ದೆಯನ್ನು ರೂಪಿಸಿ, ಕಾನೂನನ್ನು ಜಾರಿಗೆ ತಂದು ಯುವ ಮನಸ್ಸುಗಳಿಗೆ ರಕ್ಷಣೆಯನ್ನು ನೀಡುವ ಮೂಲಕÀ ಸಮಾಜ ಕಲ್ಯಾಣ ಇಲಾಕೆಯ ಸಚಿವರಾಧ ಡಾ. ಹೆಚ್.ಸಿ ಮಹದೇವಪ್ಪ ಅವರು ಜಾತಿ ರಹಿತ ಸಮ ಸಮಾಜವನ್ನು ನಿರ್ಮಾಣ ಮಾಡವ ಕನಸ್ಸನ್ನು ನನಸು ಮಾಡಲು ಪಣತೊಟ್ಟಿ ನಿಂತಿದ್ದಾರೆ ಎಂದು ಹೇಳಿದರೆ ತಪ್ಪಾಲಾರದು.

ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂಬ ತತ್ವದ ಅಡಿಯಲ್ಲಿ ಸಂವಿದಾನದ 14ನೇ ವಿಧಿಯು ತಿಳಿಸುತ್ತದೆ. 15 ನೇ ವಿಧಿಯು ಯಾವುದೇ ವ್ಯಕ್ತಿಯನ್ನು ಲಿಂಗ, ಜಾತಿ, ಜನಾಂಗ ಮತ್ತು ಧರ್ಮದ ಆಧಾರದ ಮೇಲೆ ತಾರತಮ್ಯ ಮಾಡುವಂತಿಲ್ಲ, 16 ನೇ ವಿಧಿಯು ಸಾರ್ವಜನಿಕ ಹುದ್ದೆ ಪಡೆಯಲು ಎಲ್ಲರೂ ಸಮಾನರು ಎಂಬ ತತ್ವವನ್ನು ಹೊಂದಿದೆ, 17ನೇ ವಿಧಿಯು ಅಸ್ಪೃಶ್ಯತೆ ಆಚರಣೆ ನಿಷೇಧ, 19 ಸಾತಂತ್ರ್ಯದ ಹಕ್ಕು 19ಎ ವಿಧಿಯು ವಾಕ್ ಮತ್ತು ಅಭಿಪ್ರಾಯವನ್ನು ವ್ಯಕ್ತಪಡಿಸುವ ಹಕ್ಕು ಮತ್ತು 21 ನೇ ವಿಧಿಯು ಜೀವಿಸುವ ಹಕ್ಕು ಅಂದರೆ ತನಗೆ ಇಷ್ಟ ಪಟ್ಟಂತೆ, ಇಷ್ಟ ಪಡುವವರ ಜೊತೆ ಬದುಕುವ ಹಕ್ಕನ್ನು ರಕ್ಷಣೆ ಮಾಡುವುದು ಈ ಕಾಯ್ದೆಯ ಮುಖ್ಯ ಉದ್ದೇಶವಾಗಿದೆ.

ದೇಶದಲ್ಲಿ 18 ವರ್ಷದ ತುಂಬಿದ ಹುಡುಗಿ 21 ವರ್ಷದ ತುಂಬಿದ ಹುಡುಗ ತಾನು ಇಷ್ಟಪಟ್ಟ ಹುಡುಗಿ ಅಥವಾ ಹುಡುಗಿಯ ಜೊತೆ ಜಾತಿ, ಸಂಪ್ರದಾಯ, ಸಂಸ್ಕೃತಿ ಮತ್ತು ಆಚಾರ ಮತ್ತು ವಿಚಾರ ಕಾರಣಕ್ಕೆ ಯಾಕೆ ದೂರವಾಗಬೇಕು. ಎಂದು ಮನಗಂಡು ಡಾ.ಹೆಚ್.ಸಿ ಮಹದೇವಪ್ಪ ನವರು ತಾವು ಇಷ್ಟಪಟ್ಟ ಸಂಗಾತಿ ಜೊತೆ ಜೀವನ ನಡೆಸಬೇಕು ಎಂದವರಿಗೆ ಈ ಕಾನೂನನ್ನು ರೂಪಿಸಲಾಗಿದೆ.

ಸಂವಿಧಾನ ಪೀಠಿಕೆ ಓದು :- ಕರ್ನಾಟಕ ರಾಜ್ಯ ಸರ್ಕಾರವು ಸಂವಿಧಾನದ ಆಶಯನ್ನು ಮನೆ ಮನೆಗೆ ತಲುಪಿಸಿ ಜಾಗೃತಿ ಮೂಡಿಸುವ ಉದ್ದೇಶದಿಂದ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಮನೆ ಮನೆಗೆ ಸಂವಿಧಾನ ಪೀಠಿಕೆ ಓದು ಕಾರ್ಯಕ್ರಮವನ್ನು ಜಾರಿಗೆ ತಂದರು. ಸೆಪ್ಟೆಂಬರ್ 15 ರಂದು ಅಂತಾರಾಷ್ಟ್ರೀಯ ಪ್ರಜಾ ಪ್ರಭುತ್ವದ ದಿನಾಚರಣೆಯ ಅಂಗವಾಗಿ ವ್ಯಾಪಕವಾಗಿ ಶಾಲಾ-ಕಾಲೇಜುಗಳಲ್ಲಿ ಪ್ರಚಾರ ಕೈಗೊಂಡಿತ್ತು.

2023 ಸೆಪ್ಟೆಂಬರ್ 15ರಂದು ಅಂತಾರಾಷ್ಟ್ರೀಯ ದಿನಾಚರಣೆಯ ಅಂಗವಾಗಿ ಕರ್ನಾಟಕ ರಾಜ್ಯಾದ್ಯಾಂತ 2 ಕೋಟಿ 40 ಲಕ್ಷ ಜನರು ಏಕ ಕಾಲದಲ್ಲಿ ಸಂವಿಧಾನ ಪೀಠಿಕೆ ಓದುವ ಮೂಲಕ ಬುಕ್ ಆಫ್ ರೆಕಾರ್ಡ್ ಲಂಡನ್ ದಾಖಲಿಸುವ ಮೂಲಕ ಕರ್ನಾಟಕ ರಾಜ್ಯವೊಂದು ಇತಿಹಾಸಿಕ ನಿರ್ಣಯಕ್ಕೆ ಸಾಕ್ಷಿಯಾಯಿತು.

ಪಿ.ಟಿ.ಸಿ.ಎಲ್ ಕಾಯ್ದೆಯ ಸಮಸ್ಯೆ ನಿವಾರಣೆ :- ಹಲವು ವರ್ಷಗಳಿಂದ ಪಿ.ಟಿ.ಸಿ.ಎಲ್ ಕಾಯ್ದೆಗೆ ಕಾನೂನಿನ ತೊಡಕಾಗಿದ್ದನ್ನು ಸಮಾಜ ಕಲ್ಯಾಣ ಸಚಿವರು ನಿವಾರಿಸಿದರು. 1978ರ ಕಾಯ್ದೆಯ ಅನ್ವಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯದವರ ಭೂಮಿಯನ್ನು ರಕ್ಷಿಸುವ ಮುಖ್ಯ ಉದ್ದೇಶವಾಗಿದೆ. ಯಾವುದೇ ವ್ಯಕ್ತಿಯು ಅನಧಿಕೃತವಾಗಿ ವರ್ಗಾವಣೆಯಾದ ಭೂಮಿಯನ್ನು ಮೂಲ ವಾರಸುದಾರರಿಗೆ ಹಿಂದಿರುಗಿಸುವ ಕಾನೂನನ್ನು ಸಮಾಜ ಕಲ್ಯಾಣ ಇಲಾಖೆವತಿಯಿಂದ ಡಾ.ಹೆಚ್.ಸಿ ಮಹದೇವಪ್ಪನವರು ಕಾನೂನಿನ ಮೂಲಕ ಬಲಪಡಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.

ಎಸ್.ಸಿ ಎಸ್.ಪಿ ಹಣ ವರ್ಗಾವಣೆ ಆಗದಂತೆ ತಡೆಯಲು 7ಡಿ ರದ್ದು ;- ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಹಣ ನೇರವಾಗಿ ಜನರಿಗೆ ಲಾಭವಾಗದೇ ರಸ್ತೆ, ಸೇತುವೆ, ಕಟ್ಟಡ ಮತ್ತು ಅನ್ಯ ಕಾರ್ಯಗಳಿಗೆ ಬಳಕೆ ಯಾಗದ್ದನ್ನು ತಪ್ಪಿಸಲು, 7ಡಿಯನ್ನು ರದ್ದು, ಪಡಿಸಿ ಜನಸಂಖ್ಯೆಗೆ ಅನುಗುಣವಾಗಿ 24% ಹಣವನ್ನು ಬಜೆಟ್‌ನಲ್ಲಿ ನಿಗದಿಪಡಿಸಲಾಯಿತು.

ಕ್ರೈಸ್ಟ್ ವಸತಿ ಶಾಲೆಗಳಿಗೆ ನವಚೈತನ್ಯ :-ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿ ಕಂಡು ಬರುವ ರೆಸಿಡೆಂನ್ಸಿಯಲ್, ವಸತಿ ಶಾಲೆಗಳನ್ನು ನವೀಕರಣ ಗೊಳಿಸಲಾಯಿತು. ಪ್ರತಿಯೊಂದು ವಸತಿ ಶಾಲೆಯ ಹಾಸ್ಟೆಲ್‌ನಲ್ಲಿ ಮಕ್ಕಳಿಗೆ ನೀಡುವ ಊಟದ ಮೆನುವಿನ ಗುಣಮಟ್ಟವನ್ನು ಪರಿಶೀಲಿಸಿ, ಮೇಲಾಧಿಕಾರಿಗಳಿಗೆ ಜಿ.ಪಿ.ಎಸ್ ಆಧಾರಿತ ಪೋಟೋವನ್ನು ಪರಿಶೀಲಿಸುವ ವ್ಯವಸ್ಥೆಯನ್ನು ದೇಶದಲ್ಲಿಯೇ ಮೊದಲಬಾರಿಗೆ ಜಾರಿಗೆ ತರಲಾಯಿತು. ವಸತಿ ಶಾಲೆಗೆ ಬೇಕಾದ ಮೂಲ ಸೌಕರ್ಯವನ್ನು ಹೆಚ್ಚಿನದಾಗಿ ಕಲ್ಪಿಸಲಾಯಿತು.

ಜಿಲ್ಲಾವಾರು ಡಿ.ಸಿ.ಆರ್.ಇ ಪೊಲೀಸ್ ಠಾಣೆ ಸ್ಥಾಪನೆ:ರಾಜ್ಯದಲ್ಲಿ ಪರಿಶಿಷ್ಟ ಜಾತಿ ಸಮುದಾಯದ ಮೇಲೆ ದೌರ್ಜನ್ಯವನ್ನು ತಡೆಯಲು ಜಿಲ್ಲಾವಾರು ಪ್ರತ್ಯೇಕವಾಗಿ 31 ಜಿಲ್ಲೆಗಳಲ್ಲಿ ಡಿ.ಸಿ.ಆರ್.ಇ ಪೊಲೀಸ್ ಠಾಣೆ ಸ್ಥಾಪನೆಯನ್ನು ಮಾಡುವುದಾಗಿ ಸಚಿವ ಸಂಪುಟದಲ್ಲಿ ಅನುಮೋದನೆ ಗೊಂಡಿದ್ದು, ಇದೊಂದು ಐತಿಹಾಸಿಕ ಹೆಜ್ಜೆಯಾಗಿದೆ. ಪರಿಶಿಷ್ಟ ಜಾತಿ ಸಮುದಾಯದ ದೌರ್ಜನ್ಯ ಪ್ರಕರಣವನ್ನು ತ್ವರಿತವಾಗಿ ದಾಖಲಿಸುವುದು, ತನಿಖೆಯನ್ನು ಚುರುಕುಗೊಳಿಸಿ ಮತ್ತು ತ್ವರಿತವಾಗಿ ನ್ಯಾಯ ದೊರಕಿಸಿ ಕೊಡುವುದು. ಇದು ಸರ್ಕಾರಿ ರಜೆಯ ದಿನಗಳಲ್ಲಿಯೂ ಕಾರ್ಯನಿರ್ವಹಿಸುತ್ತದೆ.

ವಿದೇಶಿ ಶಿಕ್ಷಣಕ್ಕೆ ನೆರವು :-ಶಿಕ್ಷಣ ಎಂಬುದು ಹುಲಿಯ ಹಾಲಿನಂತೆ ಅದನ್ನು ಕುಡಿದವ ಘರ್ಜಿಸಲೇ ಬೇಕು ಎಂಬ ಡಾ.ಬಿ.ಆರ್ ಅಂಬೇಡ್ಕರ್ ಅವರ ಆಶಯದಂತೆ ಸಮಾಜ ಕಲ್ಯಾಣ ಇಲಾಖೆಯು ಪರಿಶಿಷ್ಟ ವರ್ಗಗಳಲ್ಲಿ ಕಂಡು ಬರುವ 101 ವರ್ಗಗಳ ಮಕ್ಕಳಿಗೂ ವಿದ್ಯಾಭ್ಯಾಸಕ್ಕಾಗಿ ವಿದೇಶಿ ಶೈಕ್ಷಣಕ್ಕೆ ನೆರವನ್ನು ನೀಡಿದೆ. ಪ್ರಬುದ್ಧ ಯೋಜನೆಯಲ್ಲಿ ಪ್ರತಿ ವರ್ಷ 300ಕ್ಕೂ ಹೆಚ್ಚಿನ ಮಂದಿಗೆ ವಿದೇಶಿ ಶೈಕ್ಷಣಕ್ಕೆ ನೆರವು ನೀಡಲಾಗಿದೆ. ಇದು ವರ್ಷದಿಂದ ವರ್ಷಕ್ಕೆ ಗಣನೀಯವಾಗಿ ನಿಮ್ನ ವರ್ಗಗಳ ಮಕ್ಕಳು ಹೆಚ್ಚಿನ ಒಲವನ್ನು ತೋರುತ್ತಿದ್ದಾರೆ.

ಪ್ರತಿ ವರ್ಷವೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವಸತಿ ಶಾಲೆಗಳಲ್ಲಿ ಪ್ರತಿ ವರ್ಷವೂ 250ಕ್ಕೂ ಹೆಚ್ಚು ಮಂದಿ ಇಂಜಿನಿಯರ್ ಕೋರ್ಸ್ಗಳಿಗೆ, 100 ಮಂದಿ ವೈದ್ಯಕೀಯ ಕೋರ್ಸ್ಗಳಿಗೆ ಹಾಗೂ 100ಕ್ಕೂ ಹೆಚ್ಚು ಮಂದಿ ಐ.ಐ.ಟಿಯಂತಹ ಸಂಸ್ಥೆಗಳಿಗೆ ಪ್ರವೇಶಾತಿ ಪಡೆಯುತ್ತಿರುವ ನಿದರ್ಶನವನ್ನು ನೋಡಬಹುದಾಗಿದೆ. ಪ್ರತಿ ವರ್ಷವೂ ವಸತಿ ನಿಲಯದಲ್ಲಿ ಉತ್ತಮ ಅಂಕಗಳಿಸಿದ ಮಕ್ಕಳಿಗೆ ನಗದು ಪುರಸ್ಕಾರ ನೀಡುವ ಪದ್ದತಿಯನ್ನು ಮಾನ್ಯ ಸಚಿವರಿಂದ ಚಾಲನೆ ನೀಡಲಾಗುತ್ತದೆ ಇದು ಮಕ್ಕಳಿಗೆ ಸಾಧನೆ ಮಾಡಲು ಪ್ರೋತ್ಸಾಹ ಸ್ಫೂರ್ತಿ ನೀಡುವ ಸಂಗತಿಯಾಗಿದೆ.

ಪೌರ ಕಾರ್ಮಿಕ ಮತ್ತು ಅಲೆಮಾರಿ ಮಕ್ಕಳಿಗೆ 50% ಸೀಟು ಮೀಸಲು :- ಸಮಾಜ ಕಲ್ಯಾಣ ಇಲಾಖೆವತಿಯಿಂದ ಈ ಇಲಾಖೆಯ ಅಡಿಯಲ್ಲಿ ಬರುವ ಎಲ್ಲಾ ವಸತಿ ಶಾಲೆಗಳಲ್ಲಿ ಸುಮಾರು 50% ಸೀಟುಗಳನ್ನು ಪೌರ ಕಾರ್ಮಿಕ ಮಕ್ಕಳಿಗೆ, ಅಲೆಮಾರಿ, ಅರೆ ಅಲೆಮಾರಿ, ಮಾಜಿ ದೇವದಾಸಿಯರು ಮತ್ತು ಮಾಜಿ ಸೈನಿಕರ ಮಕ್ಕಳಿಗೆ ಅವಕಾಶ ಕಲ್ಪಿಸಿದ್ದು, ಇದೊಂದು ಮಹತ್ವದ ಹೆಜ್ಜೆಯಾಗಿದೆ.

ಅಂಬೇಡ್ಕರ್ ಅವರ ಥೀಮ್ ಪಾರ್ಕ್ ನಿರ್ಮಾಣ :-ಡಾ.ಬಿ.ಆರ್ ಅಂಬೇಡ್ಕರ್ ಅವರ ವಿಚಾರವನ್ನು ಮುಂದಿನ ಪೀಳಿಗೆ ತಲುಪಿಸುವ ಸಲುವಾಗಿ ಮೈಸೂರಿನಲ್ಲಿ 10 ಎಕರೆ ಪ್ರದೇಶದಲ್ಲಿ ಅಂಬೇಡ್ಕರ್ ಥೀಮ್ ಪಾರ್ಕ್ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ದೇಶ ವಿದೇಶಗಳಲ್ಲಿ ಬಾಬಾ ಸಾಹೇಬರ ವಿಚಾರ ಮತ್ತು ಬದುಕಿಗೆ ಸಂಬಂಧಿಸಿದ ಪ್ರಕಟಣೆಗಳನ್ನು ಅನುವಾದ ಮಾಡುವ ಕೆಲಸಕ್ಕೆ ಸಮಾಜ ಕಲ್ಯಾಣ ಇಲಾಖೆಯು ಕೈ ಹಾಕಿದೆ.

ಒಳ ಮೀಸಲಾತಿ ಹಂಚಿಕೆ :-ಹಲವು ದಶಕಗಳಿಂದ ಒಳ ಮೀಸಲಾತಿ ಜಾರಿಗೆ ಇದ್ದ ಬೇಡಿಕೆಯನ್ನು ಇಂದು ರಾಜ್ಯ ಸರ್ಕಾರವು ಜಾರಿ ಗೊಳಿಸುವುದರ ಮೂಲಕ ಸಾಮಾಜಿಕ ನ್ಯಾಯವನ್ನು ಎತ್ತಿಹಿಡಿದಿದೆ. ಇದು ಹಲವಾರು ವರ್ಷಗಳಿಂದ ಜ್ವಲಂತ ಸಮಸ್ಯೆಯಾಗಿ ಕಗ್ಗಂಟಾಗಿ ಪರಿಣಮಿಸಿತು, ನಾಗ ಮೋಹನ್ ದಾಸ್ ಅವರ ವರದಿಯನ್ನು ತುಲನಾತ್ಮಕವಾಗಿ ಅಧ್ಯಯನಮಾಡಿ ಎ,ಬಿ,ಸಿ ಎಂದು ವಿಂಗಡಿಸಿ 15% ಮೀಸಲಾತಿಯಲ್ಲಿ ಎ ವರ್ಗದ ಎಡಗೈ ಸಂಬAಧಿತ ಜಾತಿಗಳಿಗೆ 5.25% ಬಿ ವರ್ಗದ ಬಲ ಸಂಬಂಧಿತ ಜಾತಿಗಳಿಗೆ 5.25% ಮತ್ತು ಸಿ ವರ್ಗದ ಕೊಲೊಂಬೋ ಮತ್ತು ಅಲೆ ಮಾರಿ ಸಮುದಾಯಗಳಿಗೆ 4.5%, ನೀಡುವ ಮೂಲಕ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ತತ್ವದ ಅಡಿಯಲ್ಲಿ ಹಂಚಿಕೆ ಮಾಡಲಾಗಿದ್ದು, ಸಿದ್ದರಾಮಯ್ಯನವರ ಸರ್ಕಾರ ಒಳ ಮೀಸಲಾತಿಯನ್ನು ಜಾರಿಗೆ ತಂದು ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆದಿದೆ.

ಒಟ್ಟಿನಲ್ಲಿ ಸಮಾಜ ಕಲ್ಯಾಣ ಇಲಾಖೆಯಲ್ಲಿ ಸಚಿವರಾದ ಡಾ.ಹೆಚ್ ಮಹದೇವಪ್ಪನವರು ಮರ್ಯಾದ್ಯೆ ಗೇಡು ಹತ್ಯೆ, ಒಳ ಮೀಸಲಾತಿಯಂತಹ ಕಾನೂನುನ್ನು ಜಾರಿಗೆ ತಂದು ಬುದ್ದ, ಬಸವ ಅಂಬೇಡ್ಕರ್ ಅವರ ಆಶಯದಂತೆ ಕಲ್ಯಾಣ ಕ್ರಾಂತಿಯನ್ನೇ ಮಾಡಿದ್ದಾರೆ ಎಂದು ಹೇಳಿದರೆ ತಪ್ಪಾಗಲಾರದು. ಮುಂದಿನ ದಿನಗಳಲ್ಲಿ ಇಲಾಖೆಯು ಪರಿಶಿಷ್ಠ ಸಮುದಾಯದ ಏಳಿಗೆಗೆ ಹಲವು ವಿನೂತನ ಯೋಜನೆಗಳನ್ನು ಜಾರಿಗೆ ತಂದು ಅವರ ಕಲ್ಯಾಣಕ್ಕಾಗಿ ದುಡಿಯಬೇಕು. ಹಾಸ್ಟಲ್, ವಸತಿ ಶಾಲೆ ಮತ್ತು ಸಾಲ ಸೌಲಭ್ಯವನ್ನು ಹೆಚ್ಚಿನದಾಗಿ ಕಲ್ಪಿಸಿ ಪರಿಶಿಷ್ಠ ಸಮುದಾಯಗಳು ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಅಭಿವೃದ್ದಿ ಹೊಂದಿ ಸ್ವಾವಲಂಬನೆಯಿಂದ ಬದುಕು ಕಾಯಕವಾಗಬೇಕು ಎಂಬುದು ಬಹುಜನರ ಆಶಯವಾಗಿದೆ.

 

 

 

ಲೇಖಕರು: ಮಹೇಶ್ ಮುಡಿಗುಂಡ 

Share this Article
Leave a comment