ಕರ್ನಾಟಕದ ಮಾಮಣ್ಣನ್ ಆಗ್ತಾರಾ ಎಚ್.ಸಿ.ಮಹದೇವಪ್ಪ? 

ಮಣಿಕಂಠ ಜನತಾ ರಾಯಭಾರಿ
1 Min Read

ಮೈಸೂರು: ರಾಜ್ಯದ ಪ್ರಬಲ ಒಕ್ಕಲಿಗೆ ಸಮುದಾಯದ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ. ಈ ನಡುವೆ ದಲಿತ ಸಮುದಾಯದ ಪ್ರಬಲ ರಾಜಕಾರಣಿ ಡಾ.ಎಚ್.ಸಿ.ಮಸದೇವಪ್ಪ ಅವರು ಕರ್ನಾಟಕದ ಮಾಮಣ್ಣನ್ ಆಗ್ತಾರಾ ಎಂಬ ಪ್ರಶ್ನೆ ಎದುರಾಗಿದೆ.

ಅಯ್ಯೋ ಇದ್ಯಾರು ಮಾಮಣ್ಣನ್ ಎಂದು ನೀವು ಕೇಳಬಹುದು! ತಮಿಳುನಾಡಿನ ಖ್ಯಾತ ನಿರ್ದೇಶಕ ಮಾರಿಸೆಲ್ವರಾಜ್ ಅವರ “ಮಾಮಣ್ಣನ್” ಸಿನಿಮಾವನ್ನು ನೋಡಿದವರಿಗೆ ಮಾಮಣ್ಣನ್ ಯಾರು ಎಂಬುದನ್ನು ವಿಸ್ತಾರವಾಗಿ ಹೇಳುವ ಅಗತ್ಯವಿಲ್ಲ ಎಂದುಕೊಳ್ಳುತ್ತೇನೆ. ಕರ್ನಾಟಕದ ಪ್ರಸ್ತುತ ರಾಜಕೀಯ ಪಲ್ಲಟಗಳು ಅಂತಹ ಒಂದು ಅವಕಾಶವನ್ನು ತಂದೊಗುತ್ತದೆಯೋ ಎಂಬ ಚರ್ಚೆ ಸಾರ್ವಜನಿಕ ವಲಯದಲ್ಲಿ ಜೋರಾಗಿದೆ‌.

ಹೌದು ವಿಧಾನಸಭೆಯ ಸ್ಪೀಕರ್ ಆಗಿರುವ ಯು.ಟಿ.ಖಾದರ್ ಅವರು ಸಂಭಾವ್ಯ ಸಚಿವರ ಪಟ್ಟಿಯಲ್ಲಿ ಸ್ಥಾನವನ್ನು ಪಡೆದಿದ್ದು, ಮುಂದಿನ ಸ್ಪೀಕರ್ ಯಾರಾಗುತ್ತಾರೆ ಎಂಬುದಕ್ಕೆ ಎಚ್.ಕೆ. ಪಾಟೀಲ್ ಮತ್ತು ಡಾ.ಎಚ್.ಸಿ.ಮಹದೇವಪ್ಪ ಅವರ ಹೆಸರು ಮುಂಚೂಣಿಯಲ್ಲಿ ಕೇಳಿಬರುತ್ತಿದೆ. ಅನುಭವದ ಆಧಾರದ ಮೇಲೆ ಮಹದೇವಪ್ಪ ಅವರ ಹೆಸರು ಪ್ರಬಲವಾಗಿ ಕೇಳಿಬರುತ್ತಿದ್ದು, ಒಂದು ವೇಳೆ ಕರ್ನಾಟಕ ವಿಧಾನಸಭೆಯ ಸ್ಪೀಕರ್ ಆದರೇ ಕರ್ನಾಟಕದ ಮಾಮಣ್ಣನ್ ಎಂಬ ಖ್ಯಾತಿಯನ್ನು ಗಳಿಸಲಿದ್ದಾರೆ. ಆದರೆ ಸಚಿವರಂತೆಯೇ ಸ್ಪೀಕರ್ ಯಾರಾಗುತ್ತಾರೆ ಎಂಬುದು ವ್ಯಾಪಕವಾಗಿ ಚರ್ಚೆಯಾಗುತ್ತಿದೆ.

ಜೂ. 3ರ ಪ್ರಮಾಣವಚನಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಮೊದಲ ಹಂತದಲ್ಲಿ ಅನುಭವಿ-ಹೊಸಬರ ಮಿಶ್ರಣದ ಸಂಪುಟ ರಚನೆಗೆ ಡಿಕೆಶಿ ಮುಂದಾಗಿದ್ದಾರೆ. ಪ್ರಾದೇಶಿಕ, ಜಾತಿ ಸಮತೋಲನಕ್ಕೆ ಆದ್ಯತೆ ನೀಡಿದ್ದು, ಸ್ಪೀಕರ್ ಸ್ಥಾನದ ಆಯ್ಕೆಯೂ ಕೂಡ ಕುತೂಹಲ ಮೂಡಿಸಿದೆ.

Share this Article
Leave a comment