ಅಕ್ರಮವಾಗಿ ಪಡಿತರ ಅಕ್ಕಿಯನ್ನು ಸಾಗಣಿಕೆ, ಪ್ರತ್ಯೇಕ 2 ಪ್ರಕರಣ ದಾಖಲು

ಮಣಿಕಂಠ ಜನತಾ ರಾಯಭಾರಿ
1 Min Read

ಚಾಮರಾಜನಗರ: ಅಕ್ರಮವಾಗಿ ಪಡಿತರ ಅಕ್ಕಿಯನ್ನು ಸಾಗಾಣಿಕೆ ಮಾಡುತ್ತಿದ್ದ ವ್ಯಕ್ತಿಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದು, ವಾಹನ ಮತ್ತು ಅಕ್ಕಿಯನ್ನು ವಶಪಡಿಸಿಕೊಂಡು 2 ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬೇಗೂರು ಪೊಲೀಸ್ ಠಾಣೆಯ ಆರಕ್ಷಕ ಉಪ ನಿರೀಕ್ಷಕ ಎಚ್.ಕೆ.ನವೀನ್ ಅವರು ತಮಗೆ ದೊರೆತ ಮಾಹಿತಿ ಮೇರೆಗೆ, ಠಾಣಾ ಸಿಬ್ಬಂದಿಗಳೊಂದಿಗೆ ಸರಹದ್ದಿನ ಸಂಪಿಗೆ ಪುರ ಕ್ರಾಸ್ ಬಳಿ ಗುಂಡ್ಲುಪೇಟೆ ಕಡೆಯಿಂದ ವಾಹನದಲ್ಲಿ ಪಡಿತರ ಅಕ್ಕಿ ಇರುವ ಮೂಟೆಗಳನ್ನು ಅಕ್ರಮವಾಗಿ ಸಾಗಣಿಕೆ ಮಾಡಿಕೊಂಡು ಬರುತ್ತಿದ್ದ ಮೊಹಮ್ಮದ್ ಜಿಯಾ ಉಲ್ಲ ಬಿನ್ ಕಲಿಲ್, 29 ವರ್ಷ, ಕಲ್ಕುಣಿ ಗ್ರಾಮ, ಮಳವಳ್ಳಿ ತಾಲ್ಲೂಕು, ಮಂಡ್ಯ ಜಿಲ್ಲೆ, ಎಂಬಾತನ ಮೇಲೆ ದಾಳಿ ನಡೆಸಿ. ಆರೋಪಿಯಿಂದ 30,000 ರೂ, ಮೌಲ್ಯದ 20 ಕ್ವಿಂಟಾಲ್ ಪಡಿತರ ಅಕ್ಕಿಯನ್ನು ಮತ್ತು ಗೂಡ್ಸ್ ವಾಹನವನ್ನು ವಶಕ್ಕೆ ಪಡೆದು ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಅದಲ್ಲದೇ ಗುಂಡ್ಲುಪೇಟೆ ಪೊಲೀಸ್ ಠಾಣೆಯ ಆರಕ್ಷಕ ನಿರೀಕ್ಷಕ ಎನ್.ಜಯ ಕುಮಾರ್ ರವರಿಗೆ ದೊರೆತ ಖಚಿತ ಮಾಹಿತಿ ಮೇರೆಗೆ, ಠಾಣಾ ಸಿಬ್ಬಂದಿಗಳಿಗೆ ನೀಡಿದ ಸೂಚನೆ ಮೇರೆಗೆ ಠಾಣಾ ವ್ಯಾಪ್ತಿಯ ಮಹದೇವಪ್ರಸಾದ್‌ ನಗರದ ನಿವೇಶನ ಸಂಖ್ಯೆ: 425 ರಲ್ಲಿ ದಾಳಿ ಮಾಡಿ ಅಕ್ರಮವಾಗಿ ಸಂಗ್ರಹಣೆ ಮಾಡಿದ್ದ 32 ಕ್ವಿಂಟಾಲ್ (3200 ಕೆಜಿ) ಪಡಿತರ ಅಕ್ಕಿಯನ್ನು ವಶಕ್ಕೆ ಪಡೆದು ನಿವೇಶನ ಸಂಖ್ಯೆ: 425 ರ ಮಾಲೀಕನ ಮೇಲೆ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Share this Article
Leave a comment