ಚಾಮರಾಜನಗರ: ರಾಜ್ಯದಲ್ಲಿ ಶಿಕ್ಷಕರ ಡಿಜಿಟಲ್ ಹಾಜರಾತಿ ಕುರಿತು ಚರ್ಚೆಯಾಗುತ್ತಿರುವ ಬೆನ್ನಲ್ಲೇ, ಮಂಗಳವಾರ ಬೆಳ್ಳಂಬೆಳಿಗ್ಗೆ ಕಾಡಂಚಿನ ಗ್ರಾಮದ ಸರ್ಕಾರಿ ಶಾಲೆಗೆ ಹೋಗುತ್ತಿದ್ದ ಶಿಕ್ಷಕರು ಆನೆ ದಾಳಿಗೆ ತುತ್ತಾಗಿದ್ದು, ಕಿ.ಮೀ ಗಟ್ಟಲೇ ಓಡಿ ಶಿಕ್ಷಕರು ಪ್ರಾಣ ಉಳಿಸಿಕೊಂಡಿದ್ದಾರೆ.
ಚಾಮರಾಜನಗರ ತಾಲೂಕಿನ ಕೋಳಿಪಾಳ್ಯ ಕ್ಲಸ್ಟರ್ ನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮೂಕನಪಾಳ್ಯ ಶಿಕ್ಷಕರಾದ ಮಂಟೇನಾಯಕ್ ಹಾಗೂ ಬಾಲು ಎಂಬುವವರು ಆನೆ ದಾಳಿಯಿಂದ ಪಾರಾದವರು. ಇವರು ಮಂಗಳವಾರ ಶಾಲಾ ಕರ್ತವ್ಯಕ್ಕೆ ಬರುವ ಮಾರ್ಗದಲ್ಲಿ ಆನೆಯು ದಾಳಿ ಮಾಡಿ ಶಿಕ್ಷಕರ ದ್ವಿಚಕ್ರ ವಾಹನವನ್ನು ಜಖಂಗೊಳಿಸಿದೆ.
ಈ ಸಂದರ್ಭದಲ್ಲಿ ಆನೆ ಶಿಕ್ಷಕರ ಮೇಲೆ ದಾಳಿ ಮಾಡಲು ಯತ್ನಿಸಿದ್ದು, ಶಿಕ್ಷಕರು ಕಾಡಿನಲ್ಲೇ ಸುಮಾರು 2 ಕೀ ಮೀ ಓಡಿ ತಮ್ಮ ಪ್ರಾಣವನ್ನು ಉಳಿಸಿಕೊಂಡಿದ್ದಾರೆ.