ಚಾಮರಾಜನಗರ: ರಾಯಚೂರಿನ ಬೆಳಕು ಸಂಸ್ಥೆ ಕೊಡಮಾಡುವ ಇಂಟರ್ ನ್ಯಾಷನಲ್ ಜಸ್ಟಿಸ್ ಅವಾರ್ಡ್ ಅನ್ನು ಚಾಮರಾಜನಗರದ ಜಿಲ್ಲಾ ವಕೀಲರ ಸಂಘದ ಮಾಜಿ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್ ಅವರಿಗೆ ನೀಡಿ ಗೌರವಿಸಲಾಗಿದೆ.
ಬಳ್ಳಾರಿಯ ಜೋಳದರಾಶಿ ಸಿದ್ಧನಗೌಡ ರಂಗ ಮಂದಿರದಲ್ಲಿ ಇತ್ತೀಚೆಗೆ ನಡೆದ ಗಡಿನಾಡು ಸಮ್ಮೇಳನದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ಡಾ.ಅಮರೇಶ್ ನುಡುಗೋಣಿ ಅವರು ಇಂದು ಶೇಖರ್ ಅವರಿಗೆ ಪ್ರಶಸ್ತಿ ವಿತರಣೆ ಮಾಡಿದರು.
ಜಿಲ್ಲಾ ವಕೀಲರ ಸಂಘದಲ್ಲಿ ನಾಲ್ಕು ಬಾರಿ ಅಧ್ಯಕ್ಷರಾಗಿ ನೂರಾರು ಕಾನೂನು ಅರಿವು ಕಾರ್ಯಕ್ರಮಗಳನ್ನು ನೀಡಿರುವುದನ್ನು ಗುರುತಿಸಿ ಈ ಅವಾರ್ಡ್ ನೀಡಲಾಗಿದೆ. ಈ ಸಂದರ್ಭದಲ್ಲಿ ಗಡಿನಾಡು ಸಮ್ಮೇಳನದ ಅಧ್ಯಕ್ಷ ಯಲ್ಲನಗೌಡ ಶಂಕರ ಬಂಡಿ, ಡಾ.ಮಲ್ಲಿಕಾರ್ಜುನ್ ಹಿರೇಮಠ್, ಸಾಹಿತಿ ಡಾ.ಮುನಿರಾಜು, ಡಾ.ಎಸ್.ಎಸ್.ಪಾಟೀಲ್, ಬೆಳಕು ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಅಣ್ಣಪ್ಪ ಮೇಟಿಗೌಡ, ಬಳ್ಳಾರಿ ಪತ್ರಕರ್ತರ ಸಂಘದ ಅಧ್ಯಕ್ಷ ಎನ್.ವೀರಭದ್ರೇಗೌಡ, ಡಾ.ವಿಷ್ಣು ಎಂ.ಶಿಂಧೆ, ಜಾನಪದ ಗಾಯಕ ಜ.ಸುರೇಶ್ ನಾಗ್ ಹಾಗೂ ಇತರರು ಉಪಸ್ಥಿತರಿದ್ದರು.