ಕಾಡುಪ್ರಾಣಿಗಳ ಬೇಟೆಗೆ ಉರುಳು ಹಾಕುತ್ತಿದ್ದವನ ಬಂಧನ 

ಮಣಿಕಂಠ ಜನತಾ ರಾಯಭಾರಿ
1 Min Read

ಚಾಮರಾಜನಗರ: ಬಿ.ಆರ್.ಟಿ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಜಿಂಕೆ, ಮೊಲ ಹಾಗೂ ಇನ್ನಿತರೆ ಕಾಡು ಪ್ರಾಣಿಗಳನ್ನು ಭೇಟಿಯಾಡುತ್ತಿದ್ದವನನ್ನು ಭಾನುವಾರ ಬಂಧಿಸಲಾಗಿದೆ.

ತಾಲೂಕಿನ ಎತ್ತೇಗೌಡನದೊಡ್ಡಿ ನಿವಾಸಿ ಸಣ್ಣ ಬಿನ್ ಮಾದೇಗೌಡ ಬಂಧಿತ ಆರೋಪಿ. ಈತ ಕೋಳಿಪಾಳ್ಯ ಗಸ್ತಿನ ಎತ್ತೇಗೌಡನದೊಡ್ಡಿ ಕೆರೆ ಡಿ-ಲೈನ್ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಜಿಂಕೆ ಮತ್ತು ಮೊಲಗಳನ್ನು ಬೇಟೆಯಾಡುವ ಉದ್ದೇಶದಿಂದ 06 ಸಂಖ್ಯೆಯ ಉರುಳುಗಳನ್ನು ಹಾಕಿದ್ದನು.

ಈ ಸಂಬಂಧ ಇತನನ್ನು ಬಂಧಿಸಿ ವನ್ಯಜೀವಿ (ಸಂರಕ್ಷಣಾ) ಕಾಯ್ದೆ 1972 ರ ಉಲ್ಲಂಘಣೆ ಅಡಿಯಲ್ಲಿ ಪುಣಜನೂರು ವನ್ಯಜೀವಿ ವಲಯದಲ್ಲಿ WLOR 04/2026-27 ಮೊಕದ್ದಮೆಯನ್ನು ದಾಖಲಿಸಿಕೊಂಡು ಆರೋಪಿಯನ್ನು ವಿಚಾರಣೆ ಮಾಡಿ ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗಿರುತ್ತದೆ ಎಂದು ಚಾಮರಾಜನಗರ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share this Article
Leave a comment