ಕೇರಳಂಗೆ ಮುಂಗಾರು ಪ್ರವೇಶ; ಕರ್ನಾಟಕದ ಈ ಜಿಲ್ಲೆಗಳಲ್ಲಿ ಭಾರಿ ಮಳೆ ಸಾಧ್ಯತೆ 

ಮಣಿಕಂಠ ಜನತಾ ರಾಯಭಾರಿ
1 Min Read

ತಿರುವನಂತಪುರಂ: ದೇಶದ ಆರ್ಥಿಕತೆಯ ಜೀವನಾಡಿಯಾಗಿರುವ ನೈಋತ್ಯ ಮುಂಗಾರು ಮಾರುತಗಳು 3 ದಿನ ತಡವಾಗಿಯಾದರೂ ಕೇರಳವನ್ನು ಅಧಿಕೃತವಾಗಿ ಪ್ರವೇಶಿಸಿವೆ ಎಂದು ಭಾರತೀಯ ಹವಾಮಾನ ಇಲಾಖೆ ಪ್ರಕಟಿಸಿದೆ.

ಕೇರಳಂಗೆ ಮುಂಗಾರು ಆಗಮನದ ಹಿನ್ನೆಲೆಯಲ್ಲಿ ಕೇರಳದಲ್ಲಿ ಭಾರಿ ಮಳೆಯಾಗುತ್ತಿದ್ದು, ಹವಾಮಾನ ಇಲಾಖೆ ರಾಜ್ಯಾದ್ಯಂತ ‘ಆರೆಂಜ್ ಅಲರ್ಟ್’ ಘೋಷಿಸಿದೆ. ತಿರುವನಂತಪುರದಲ್ಲಿ ಇಂದು ಗುಡುಗು ಸಹಿತ 85% ರಿಂದ 94% ರಷ್ಟು ಮಳೆಯಾಗುವ ಸಾಧ್ಯತೆ ಇದೆ.

ಕೇರಳಕ್ಕೆ ಮುಂಗಾರು ಪ್ರವೇಶಿಸಿದ ಬೆನ್ನಲ್ಲೇ ಕರ್ನಾಟಕದ ಕರಾವಳಿ ಭಾಗದಲ್ಲಿ ಮಳೆ ವಾತಾವರಣ ನಿರ್ಮಾಣವಾಗಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಹಾಗೂ ಮಲೆನಾಡಿನ ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಿಗೆ ಮುಂದಿನ 2-3 ದಿನಗಳಲ್ಲಿ ಮುಂಗಾರು ಪ್ರವೇಶ ಆಗಲಿದೆ.

ಭಾರತದ ಒಟ್ಟಾರೆ ಮಳೆಯ ಶೇ.70ಕ್ಕಿಂತ ಹೆಚ್ಚು ನೈಋತ್ಯ ಮುಂಗಾರಿನಿಂದಲೇ ಸಿಗುತ್ತದೆ. ಆದರೆ ಈ ವರ್ಷ ಮಳೆ ಪ್ರಮಾಣ ದೀರ್ಘಾವಧಿ ಸರಾಸರಿ LPAಯ ಶೇಕಡಾ 90ರಷ್ಟು ಇರಲಿದೆ ಎಂದು IMD ಅಂದಾಜಿಸಿದೆ. LPAಗಿಂತ 90% ಕಡಿಮೆಯಾದರೆ ಅದು ಕೊರತೆಯ ಮಳೆ ಎನ್ನಲಾಗುತ್ತದೆ. ಒಟ್ಟಾರೆಯಾಗಿ ಮೇ 26ಕ್ಕೆ ಕೇರಳ ತಲುಪಬೇಕಿದ್ದ ಮುಂಗಾರು ದುರ್ಬಲವಾಗಿದ್ದರಿಂದ ವಿಳಂಬವಾಗಿತ್ತು. ಈಗ ಜೂನ್ ಮೊದಲ ವಾರದಲ್ಲೇ ಆರಂಭವಾಗಿರುವುದರಿಂದ ಕೃಷಿ ಚಟುವಟಿಕೆಗಳಿಗೆ ಚಾಲನೆ ಸಿಕ್ಕಂತಾಗಿದೆ.

Share this Article
Leave a comment