ಗಿಡಗಳ ಪೋಷಣೆಗೆ ಮುಂದಾದ ಎ.ಆರ್.ಕೆ ಅಭಿಮಾನಿಗಳು 

ಮಣಿಕಂಠ ಜನತಾ ರಾಯಭಾರಿ
1 Min Read

ಯಳಂದೂರು: ಪಟ್ಟಣದ ಸರ್ಕಾರಿ ಆಸ್ಪತ್ರೆ ಹಾಗೂ ಬೈಪಾಸ್ ರಸ್ತೆಯಲ್ಲಿ ನೆಟ್ಟಿರುವ ಗಿಡಗಳಿಗೆ ನೀರು ಹಾಕುವ ಮೂಲಕ ಶಾಸಕ ಎ.ಆರ್.ಕೃಷ್ಣಮೂರ್ತಿ ಅಭಿಮಾನಿ ಬಳಗದವರು ಗಿಡಗಳ ಪೋಷಣೆಗೆ ಮುಂದಾಗಿದ್ದಾರೆ.

ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಅವರಣ ಹಾಗೂ ಬೈಪಾಸ್ ರಸ್ತೆಯಲ್ಲಿ ಪರಿಸರ ಪ್ರೇಮಿ ವೆಂಕಟೇಶ್ ಅವರು ಸಾರ್ವಜನಿಕ ಆಸ್ಪತ್ರೆ ಹಾಗೂ ಕೆನರಾ ಬ್ಯಾಂಕ್ ಸಹಯೋಗದಿಂದ ನೆಟ್ಟಿರುವ ಸಾಲು ಗಿಡಗಳು ಮಳೆ ಇಲ್ಲದ ಕಾರಣ ಒಣಗುತ್ತಿದ್ದವು. ಗಿಡಗಳ ಸುತ್ತಲೂ ಕಳೆ ಬೆಳೆದುಕೊಂಡು ಸೊರಗಿದ್ದವು. ಇದನ್ನು ಮನಗಂಡ ಎ.ಆರ್.ಕೃಷ್ಣಮೂರ್ತಿ ಅಭಿಮಾನಿ ಬಳಗದ ವತಿಯಿಂದ ಗಿಡಗಳ ಸುತ್ತಲೂ ಕಳೆಯನ್ನು ಸ್ವಚ್ಛಗೊಳಿಸಿ, ನೀರು ಹಾಕುವ ಮೂಲಕ ಗಿಡಗಳ ಪೋಷಣೆಗೆ ಮುಂದಾದರು.

ಈ ಸಂದರ್ಭದಲ್ಲಿ ಆರೋಗ್ಯ ಸಮಿತಿ ಸದಸ್ಯರಾದ ದುಗ್ಗಹಟ್ಟಿ ಜಿ.ಮಾದೇಶ್ ಮಾತನಾಡಿ, ಗಿಡಗಳ ಪೋಷಣೆಗೆ ಸರಿಯಾದ ನೀರು, ಸೂರ್ಯನ ಬೆಳಕು, ಪೋಷಕಾಂಶಗಳು ಮತ್ತು ನಿಯಮಿತ ನಿರ್ವಹಣೆ ಅತ್ಯಗತ್ಯ. ಮಣ್ಣಿನ ತೇವಾಂಶ, ಗಿಡದ ಪ್ರಕಾರಕ್ಕೆ ಅನುಗುಣವಾದ ಬಿಸಿಲು ಮತ್ತು ಸಾವಯವ ಗೊಬ್ಬರದ ಬಳಕೆಯು ಗಿಡಗಳು ಹುಲುಸಾಗಿ ಬೆಳೆಯಲು ಸಹಕಾರಿಯಾಗುತ್ತದೆ. ಮಳೆಗಾಲ ಬಂದಾಗಷ್ಟೇ ನಾವು ಪರಿಸರ ಎನ್ನಬಾರದು. ವರ್ಷಪೂರ್ತಿ ಪರಸರ ಪ್ರಜ್ಞೆಯಿಂದ, ನೆಟ್ಟ ಗಿಡಗಳ ಪೋಷಣೆ ಮಾಡುತ್ತ ಇರಬೇಕು ಎಂದರು.

ಪರಿಸರ ಉಳಿದರೆ ಮಾತ್ರ ನಾವು ಎನ್ನುವ ಸೂಕ್ಷ್ಮವನ್ನು ಅರಿತುಕೊಳ್ಳಬೇಕು. ಪ್ರತಿಯೊಬ್ಬರು ಒಂದೊಂದು ಗಿಡಗಳನ್ನು ನೆಟ್ಟು ಪೋಷಣೆ ಮಾಡಿದಾಗ ಉತ್ತಮ ಪರಿಸರ ಕಾಪಾಡಲು ಸಾಧ್ಯವಾಗಲಿದೆ. ಆ ನಿಟ್ಟಿನಲ್ಲಿ ಅಭಿಮಾನಿ ಬಳಗದ ವತಿಯಿಂದ ಗಿಡಗಳ ಪೋಷಣೆಗೆ ಮುಂದಾಗಿದ್ದೇವೆ ಎಂದರು.

 

ಈ ವೇಳೆ ಆಸ್ಪತ್ರೆ ವೈದ್ಯಧಿಕಾರಿ ಡಾ.ಶ್ರೀಧರ್, ಶಾಸಕ ಎ.ಆರ್.ಕೃಷ್ಣಮೂರ್ತಿ ಅಭಿಮಾನಿ ಬಳಗದ ಹೊನ್ನೂರು ರಾಘವೇಂದ್ರ ಪ್ರಸಾದ್, ಕಂದಹಳ್ಳಿ ಕುಮಾರ್, ರೇವಣ್ಣ, ಜಮೀರ್, ಈರಣ್ಣ, ಎನ್.ಶಂಕರ್, ರೂಪೇಶ್ ಇತರರು ಹಾಜರಿದ್ದರು.

Share this Article
Leave a comment