ಗುಂಡ್ಲುಪೇಟೆ: ತಾಲ್ಲೂಕಿನ ಚನ್ನಾಜಯ್ಯನಹುಂಡಿ ಗ್ರಾಮದಲ್ಲಿ ಸರ್ವೆ ನಂ 138 ರಲ್ಲಿ ಒತ್ತುವರಿಯಾಗಿದ್ದ ಸುಮಾರು 18 ಎಕರೆ.38 ಗುಂಟೆ ಜಾಗವನ್ನು ಗ್ರಾಮದ ಅನೇಕರು ಒತ್ತುವರಿ ಮಾಡಿಕೊಂಡು ಜಮೀನು ಶೆಡ್ ನಿರ್ಮಿಸಿಕೊಂಡಿದ್ದಾರೆ ಇದನ್ನು ತೆರವುಗೊಳಿಸಿ ಎಂದು ಅರ್ಜಿ ನೀಡಿ ಅಳತೆ ಕಾರ್ಯ ನಡೆಸಲಾಗಿತ್ತು ಇದರಂತೆ ಗುರುವಾರ ಒತ್ತುವರಿ ಕಾರ್ಯ ಆರಂಭವಾಗಿತ್ತು. ಆದರೆ ಒತ್ತುವರಿ ಮಾಡಿಕೊಂಡವರು ತೆರವು ಮಾಡಲು ಅವಕಾಶ ನಿಡುವುದಿಲ್ಲ ಎಂದು ಪಟ್ಟು ಹಿಡಿದು ಕೈ ಕೈ ಮಿಲಾಯಿಸುವ ಹಂತ ತಲುಪಿತ್ತು ಹಾಗಾಗಿ ಸರ್ಕಲ್ ಇನ್ಸ್ ಪೆಕ್ಟರ್ ಜಯಕುಮಾರ ಮತ್ತು ತಹಶೀಲ್ದಾರ್ ಎಂ ಎಸ್ ತನ್ಮಯ್ ರವರು ಜನರನ್ನು ಸಮಾಧಾನಪಡಿಸಿ ಮತ್ತೊಂದು ದಿನ ಸಭೆ ಕರೆದು ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಇದಕ್ಕೆ ಕೆಲವರು ಒಪ್ಪದೆ ಮೂರು ತಿಂಗಳಿಂದ ಅರ್ಜಿ ನೀಡಿ ಸರ್ವೆ ಗುರುತು ಮಾಡಿದ್ದು ಇನ್ನೂ ತೆರವು ಮಾಡಲು ಮೀನಾವೇಷ ಯಾಕೆ ಕೆಲವರು ಒತ್ತುವರಿ ತೆರವುಮಾಡುವಂತೆ ಪಟ್ಟು ಹಿಡಿದರು.
ಕೆಲವರು ತೆರವು ಮಾಡಲು ಬಿಡಲ್ಲ ನಾವು ಅನೇಕ ವರ್ಷದಿಂದ ಇಲ್ಲಿ ಜಮೀನು ಮಾಡುತಿದ್ದೇವೆ, ಹಾಗೂ ಶೆಡ್ ನಿರ್ಮಿಸಿದ್ದೇವೆ ಎಂದು ಮಾತಿನ ಚಕಮುಕಿ ನಡೆಸಿದರು ನಂತರ ತಹಶೀಲ್ದಾರ್ ಇನ್ನೊಂದು ದಿನ ತೆರವು ಕಾರ್ಯದ ಬಗ್ಗೆ ಸಬೆ ನಡೆಸಲಾಗುವುದು ಮಾನವೀಯ ದೃಷ್ಠಿಯಿಂದ ಕಾಲಾವಕಾಶ ನೀಡಿ ನಂತರ ತೆರವು ಮಾಡುವುದಾಗಿ ತಿಳಿಸಿದರು.
ಗ್ರಾಮದ ಮಲ್ಲು ಮಾತನಾಡಿ, ಗ್ರಾಮಕ್ಕೆ ಗೋಮಾಳವಿಲ್ಲ, ಸ್ಮಶಾನ ವಿಲ್ಲ, ಆಟದ ಮೈದಾನ ವಿಲ್ಲ, ಸರ್ಕಾರಿ ಗೋಮಾಳ ವಶಪಡಿಸಿಕೊಂಡಿದ್ದರು, ತಹಶೀಲ್ದಾರ್ ತೆರವು ಮಾಡಲು ಆದೇಶ ಮಾಡಿ ಮತ್ತೆ ತಡೆ ಹಿಡಿದಿದ್ದಾರೆ ಇದು ಸರಿಯಲ್ಲ ಹತ್ತು ಜನರ ಅನುಕೂಲಕ್ಕಾಗಿ ಇಡೀ ಗ್ರಾಮಕ್ಕೆ ಅನುಕೂಲವಾಗುವುದನ್ನು ತಪ್ಪಿಸುತಿದ್ದಾರೆ ಎಂದು ಆರೋಪಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ತನ್ಮಯ್, ಸರ್ಕಲ್ ಇನ್ಸ್ ಪೆಕ್ಟರ್ ಜಯಕುಮಾರ್, ರಾಜಸ್ವ ನಿರೀಕ್ಷಕ ,ಹಾಗೂ ಗ್ರಾಮ ಲೆಕ್ಕಾಧಿಕಾರಿ ಮತ್ತಿತರರಿದ್ದರು.