ಚಾಮರಾಜನಗರ: ಬಿ.ಆರ್.ಟಿ ಹುಲಿ ಸಂರಕ್ಷಿತ ಪ್ರದೇಶದ ಕೊತ್ತಲವಾಡಿ ಗ್ರಾಮದಲ್ಲಿ ವಿಷಪ್ರಾಶನ ಹಾಕಿ ಚಿರತೆ ಸಾವಿಗೆ ಕಾರಣರಾಗಿದ್ದವನನ್ನು ಬಂಧಿಸಲಾಗಿದೆ.
ತಾಲೂಕಿನ ಕೊತ್ತಲವಾಡಿ ಗ್ರಾಮದ ದೊಡ್ಡಸ್ವಾಮಿ (56) ಬಂಧಿತ ಆರೋಪಿ. ಈತ ಬಿ.ಆರ್.ಟಿ ಹುಲಿ ಸಂರಕ್ಷಿತ ಪ್ರದೇಶ ಚಾಮರಾಜನಗರ ಪ್ರಾದೇಶಿಕ ವಲಯದ ಕೊತ್ತಲವಾಡಿ ಗ್ರಾಮದಲ್ಲಿ 2025 ಜು.10 ರಂದು ವಿಷಪ್ರಾಶನ ಮಾಡಿದ್ದರಿಂದ ಚಿರತೆಯೊಂದು ಮೃತಪಟ್ಟಿತ್ತು.
ಈ ಸಂಬಂಧ ತನಿಖೆ ಕೈಗೊಂಡಿದ್ದ ಅರಣ್ಯ ಇಲಾಖೆ ಸಿಬ್ಬಂದಿಗಳು, ಕಳೆದ 10 ತಿಂಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.