ಡಾ.ಕೃಷ್ಣಮೂರ್ತಿ ಚಮರಂ ಅವರಿಗೆ ‘ಅಂಬೇಡ್ಕರ್ ಮಾರ್ಗಿ ಪತ್ರಕರ್ತ’ ಪ್ರಶಸ್ತಿ 

ಮಣಿಕಂಠ ಜನತಾ ರಾಯಭಾರಿ
1 Min Read

ಮೈಸೂರು: ಚಂದ್ರಶೇಖರ ಹೊಸಮನಿ ಅವರ ಹೆಸರಿನಲ್ಲಿ ಮೇ ಸಾಹಿತ್ಯ ಮೇಳದಲ್ಲಿ ಪ್ರತಿ ವರ್ಷ ಕೊಡಮಾಡುವ ‘ಅಂಬೇಡ್ಕರ್ ಮಾರ್ಗಿ ಪತ್ರಕರ್ತ ಪ್ರಶಸ್ತಿ’ಗೆ ಡಾ.ಕೃಷ್ಣಮೂರ್ತಿ ಚಮರಂ ಆಯ್ಕೆಯಾಗಿದ್ದಾರೆ.

60 ರ ದಶಕದಲ್ಲಿ ಸರ್ಕಾರಿ ಉನ್ನತ ಹುದ್ದೆಗೆ ಶರಣು ಎಂದು, ಉತ್ತರ ಕರ್ನಾಟಕ ಭಾಗದಲ್ಲಿ ಆರ್.ಪಿ.ಐ ಮೂಲಕ ಅಂಬೇಡ್ಕರ್ ಚಳುವಳಿಗೆ ತಮ್ಮನ್ನು ಸಮರ್ಪಿಸಿಕೊಂಡಿದ್ದ ಚಂದ್ರಶೇಖರ ಹೊಸಮನಿ ಅವರ ಹೆಸರಿನಲ್ಲಿ ಮೇ ಸಾಹಿತ್ಯ ಮೇಳದಲ್ಲಿ ಪ್ರತಿ ವರ್ಷ ಕೊಡಮಾಡುವ ‘ಅಂಬೇಡ್ಕರ್ ಮಾರ್ಗಿ ಪತ್ರಕರ್ತ ಪ್ರಶಸ್ತಿ’ಗೆ ಬಹುಜನ ಚಳವಳಿಯ ನೇತಾರ, ಸಮಾಜ ಪರಿವರ್ತನ ಪತ್ರಿಕೆಯ ಸಂಪಾದಕ, ಚಲನಚಿತ್ರ ನಿರ್ಮಾಪಕ, ನಿರ್ದೇಶಕ ಡಾ. ಕೃಷ್ಣಮೂರ್ತಿ ಚಮರಂ ಆಯ್ಕೆಯಾಗಿದ್ದಾರೆ.

ಮೇ ಸಾಹಿತ್ಯ ಮೇಳದ ಪ್ರಶಸ್ತಿ ಆಯ್ಕೆ ಸಮಿತಿಯು ಪ್ರತಿ ವರ್ಷ ಅತ್ಯಂತ ಪಾರದರ್ಶಕವಾಗಿ ಅರ್ಹರನ್ನು ಗುರುತಿಸುತ್ತ ಬರುತ್ತಿದೆ. ಈ ವರ್ಷ ಮೇ 16 ಮತ್ತು 17ರಂದು ಹುಬ್ಬಳ್ಳಿಯ ಆರ್.ಎನ್. ಶೆಟ್ಟಿ ಕಲ್ಯಾಣ ಮಂಟಪದಲ್ಲಿ ನಡೆಯಲಿರುವ 12 ನೇ ಮೇ ಸಾಹಿತ್ಯ ಮೇಳದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಈ ಪ್ರಶಸ್ತಿಯು 10,000 ರೂ. ನಗದು ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Share this Article
Leave a comment