ಡಾ.ಬಿ.ಆರ್.ಅಂಬೇಡ್ಕರ್ ಅವರ 135 ನೇ ಜನ್ಮದಿನಾಚರಣೆ, 135 ಸಾಧಕರಿಗೆ ಸನ್ಮಾನ 

ಮಣಿಕಂಠ ಜನತಾ ರಾಯಭಾರಿ
4 Min Read

ಚಾಮರಾಜನಗರ: ದಲಿತ ಸಂಘಟನೆಗಳ ಸಮನ್ವಯ ಸಮಿತಿ ವತಿಯಿಂದ ಜು.2 ರಂದು ಡಾ.ಬಿ.ಆರ್.ಅಂಬೇಡ್ಕರ್ ಅವರ 135 ನೇ ಜನ್ಮದಿನಾಚರಣೆ ಅಂಗವಾಗಿ 135 ಸಾಧಕರಿಗೆ ಸನ್ಮಾನ ಸಮಾರಂಭ, ದಲಿತ ಕವಿ ಸಿದ್ಧಲಿಂಗಯ್ಯ ಹಾಗೂ ಮುಳ್ಳೂರು ನಾಗರಾಜ್ ಅವರ ನೆನಪು ಹಾಗೂ ದಲಿತ ಚಳುವಳಿ ಸಾಹಿತ್ಯ ಕುರಿತು ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ನಗರದ ವರನಟ ಡಾ.ರಾಜ್ ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಬೆಳಗ್ಗೆ 10 ಗಂಟೆಗೆ ಪ್ರಾರಂಭವಾಗುವ ಕಾರ್ಯಕ್ರಮದಲ್ಲಿ ಮೈಸೂರು ಉರಿಲಿಂಗ ಪೆದ್ದಿ ಮಠದ ಪೀಠಾಧ್ಯಕ್ಷ ಶ್ರೀ ಜ್ಞಾನ ಪ್ರಕಾಶ ಸ್ವಾಮೀಜಿ ಸಾನಿಧ್ಯ ವಹಿಸುವರು. ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸುವರು. ಮಾಜಿ ಸಚಿವ ಬಿ.ಸೋಮಶೇಖರ್ ಅವರು ಉದ್ಘಾಟನೆ ನೆರವೇರಿಸುವರು. ಹಿರಿಯ ದಲಿತ ಮುಖಂಡ ವೆಂಕಟರಮಣಸ್ವಾಮಿ (ಪಾಪು) ಅವರು ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಸಾಹಿತಿಗಳಾದ ಸೋಮಶೇಖರ್ ಬಿಸಲವಾಡಿ, ಮಂಜು ಕೋಡಿಉಗನೆ, ಯುವ ಚಿಂತಕ ಬಸವಣ್ಣ ಮೂಕಳ್ಳಿ, ಗುರುರಾಜ್ ಯರಗನಹಳ್ಳಿ, ಪ್ರಗತಿಪರ ಚಿಂತಕ ಅರಕಲವಾಡಿ ನಾಗೇಂದ್ರ ಹಾಗೂ ಮಲ್ಕುಂಡಿ ಮಹಾದೇವ ಸ್ವಾಮಿ ಅವರು ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಅಭ್ಯಾಸಿ ಟ್ರಸ್ಟ್ ವತಿಯಿಂದ ಗೀತಗಾಯನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

135 ಸಾಧಕರಿಗೆ ಸನ್ಮಾನ: ಹಿರಿಯ ದಲಿತ ಹೋರಾಟಗಾರ ವೆಂಕಟರಮಣಸ್ವಾಮಿ (ಪಾಪು) ಅವರ ನೇತೃತ್ವದಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ 135 ಸಾಧಕರನ್ನು ಸನ್ಮಾನ ಮಾಡುತ್ತಿರುವುದು ವಿಶೇಷವಾಗಿದೆ. ನಿವೃತ್ತ ಪ್ರಾಧ್ಯಾಪಕ ಪ್ರೊ.ಎ.ಎಂ.ಶಿವಸ್ವಾಮಿ, ಹಿರಿಯ ರಂಗಕರ್ಮಿ ಘಟಂ ಕೃಷ್ಣ, ತಾ.ಪಂ ಮಾಜಿ ಅಧ್ಯಕ್ಷ ಆರ್.ಮಹದೇವ್, ಜಿ.ಪಂ ಮಾಜಿ ಅಧ್ಯಕ್ಷ ಅಯ್ಯನಪುರ ಶಿವಕುಮಾರ್, ಸಾಹಿತಿ ಡಾ.ನಂಜರಾಜು ಹೊಂಗನೂರು, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಪುಟ್ಟಸ್ವಾಮಿ ರಾಮಸಮುದ್ರ, ವಕೀಲರಾದ ಶಶಿಕಲಾ, ಮುಖಂಡ ಸೋಮೇಶ್ ನಲ್ಲೂರು, ಸಾಹಿತಿ ಡಾ.ಚಿನ್ನಸ್ವಾಮಿ ಬ್ಯಾಡ್ಲಮೂಡ್ಲು, ಮುಖಂಡ ಮೂಡ್ನಾಕೂಡು ಪ್ರಕಾಶ್, ಪ್ರಸೂತಿ ತಜ್ಞರಾದ ಡಾ.ಹೇಮಲತಾ, ಡಾ.ಸುಗಂಧರಾಜು, ಗ್ರಂಥಪಾಲಕ ಡಾ.ರಾಘವೇಂದ್ರ, ಕವಯಿತ್ರಿ ಡಾ.ಪ್ರೇಮಾ, ಸಾಹಿತಿ ಡಾ.ಶಿವಕುಮಾರ್ ನಂಜಾಮೇಸ್ತ್ರಿ, ವಕೀಲ ಬಿ.ಪ್ರಸನ್ನಕುಮಾರ್, ಪ್ರಾಧ್ಯಾಪಕ ಡಾ.ಮಲ್ಲಿಕಾರ್ಜುನಸ್ವಾಮಿ, ಡಾ.ಮಹೇಶ್ ಕೋಡಿಉಗನೆ, ಗುತ್ತಿಗೆದಾರರಾದ ಕೆರೆಹಳ್ಳಿ ಮಹದೇವಸ್ವಾಮಿ, ಮಲ್ಲೇದೇವರು, ಹೋರಾಟಗಾರ ದೊಡ್ಡಿಂದುವಾಡಿ ಸಿದ್ದರಾಜು, ನಗರಸಭೆ ಮಾಜಿ ಸದಸ್ಯ ನಂಜುಂಡಸ್ವಾಮಿ, ನಾಗಯ್ಯ ನಾಗವಳ್ಳಿ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗುತ್ತಿದೆ.

ಯುವ ಮುಖಂಡ ರಾಜೇಂದ್ರ ಹೊಂಡರಬಾಳು, ಬಾಬು ರಾಮಸಮುದ್ರ, ಹೋರಾಟಗಾರ ಶಾ.ಮುರುಳಿ, ಮಹದೇವಸ್ವಾಮಿ ನಲ್ಲೂರು, ಉದ್ಯಮಿ ರವಿ, ಗಾಯಕ ಸುರೇಶ್‌ನಾಗ್, ಡಾ.ಶಿವಲಿಂಗು, ದಸಂಸ ಜಿಲ್ಲಾಧ್ಯಕ್ಷ ಶಿವಣ್ಣ, ಸಾಹಿತಿ ಡಾ.ಶಿವರಾಜು, ಮುಖಂಡ ರಂಗನಾಥ್, ವೀರಭದ್ರ ಹೆಬ್ಬಸೂರು, ವಕೀಲ ದಲಿತ್ ರಾಜ್, ಸಂಶೋಧಕ ಡಾ.ಕುಮಾರ್ ಚಿಕ್ಕಹೊಳೆ, ರಂಗಸ್ವಾಮಿ ಹೆಬ್ಬಸೂರು, ಗುತ್ತಿಗೆದಾರ ಎಂ.ಎಸ್.ಮಾದಯ್ಯ, ಮೂರ್ತಿ ಮುತ್ತಿಗೆ, ಪ್ರಕಾಶ್ ಮುತ್ತಿಗೆ, ಮಯೂರ, ಕವಿ ಶಿವು, ಎಚ್.ಮಹದೇವು, ಹೋರಾಟಗಾರ ಚಾ.ರಂ.ಶ್ರೀನಿವಾಸ್‌ಗೌಡ, ರಾಜಣ್ಣ ಚಂದಕವಾಡಿ, ನಿಜಧ್ವನಿ ಗೋವಿಂದರಾಜು, ಕೆಂಪರಾಜು ಹೆಗ್ಗವಾಡಿ, ಕಿವಿ ಹಾಗೂ ಪತ್ರಕರ್ತ ಆ.ಸಿ.ಮ, ಚಿತ್ರ ಕಲಾವಿದ ಹೆಚ್.ಮಹದೇವ, ಕೆ.ಇ.ಬಿ ನಾಗೇಶ್, ಮುಖಂಡ ರಾಜು ದೇಶವಳ್ಳಿ, ಉಮ್ಮತ್ತೂರು ಬಸವರಾಜು, ದ್ವಾರಕನಾಥ್, ಕೆರೆಹಳ್ಳಿ ಬಸವರಾಜು, ಸ್ವಯಂಪ್ರೇರಣೆ ಪತ್ರಿಕೆ ಸಂಪಾದಕ ಸಿದ್ದಪ್ಪಾಜಿ, ಜಯಶೇಖರ್ ಆಲ್ಕೆರೆಅಗ್ರಹಾರ, ಸಮಾಜ ಸೇವಕರಾದ ಸುರೇಶ್ ಗೌಡ ಅವರನ್ನು ಗೌರವಿಸಲಾಗುತ್ತಿದೆ.

ಚಿತ್ರ ಕಲಾವಿದ ಮಹಮ್ಮದ್ ಗೌಸ್, ಹೋರಾಟಗಾರ ಕಂದಹಳ್ಳಿ ನಾರಾಯಣ, ರೈತಪರ ಹೋರಾಟಗಾರ ರಂಗಸ್ವಾಮಿ ಕರಗಯ್ಯ, ಪುಟ್ಟ ಮಹದೇವ, ಗೋವಿಂದರಾಜು ಸಿದ್ದಯ್ಯನಪುರ, ಅಹಿಂದ ಮಹೇಶ್, ನಾಗು ರಮೇಶ್ ಯಡಿಯೂರು, ಮಹೇಶ್ ಡೊಳ್ಳು,ಗುರುಮಲ್ಲಯ್ಯ ಹುಲಿವೇಶ ಕಲಾವಿದ, ಶಿವಮಲ್ಲೇಗೌಡ, ಆರಾಧ್ಯ, ಸೋಮಣ್ಣ ವೆಂಕಟಯ್ಯನಛತ್ರ, ಅಸ್ಲಾಂ ಮುಕ್ಕಡಹಳ್ಳಿ, ಬದನಗುಪ್ಪೆ ಮಹೇಶ್, ಸಿ.ಎಂ.ಶಿವಕುಮಾರ್, ಕೆಂಪರಾಜು ಹೊಂಗನೂರು, ಶಾಂತರಾಜು, ಹಂಡರಕಳ್ಳಿ ಮಹದೇವ, ಕುಮಾರ್ ಕೆಲ್ಲಂಬಳ್ಳಿ, ಅಂಕಣಕಾರ ಲಕ್ಷ್ಮಿ ನರಸಿಂಹ, ನಾಗಲಕ್ಷ್ಮಿ ಸಿಂಗನಲ್ಲೂರು, ಮಹದೇವಯ್ಯ ಸೇನಾಪತಿ, ಶಂಕರ್‌ ಮೂಕನಪಾಳ್ಯ, ಕವಿ ಯೋಗೇಶ್ ಗುಂಡ್ಲುಪೇಟೆ, ಶಿಕ್ಷಕ ಹರದನಹಳ್ಳಿ ನಟರಾಜು, ನಾಗಮಹದೇವ್, ಪರಮೇಶಿ ಮಂಗಲ, ರಾಜು ಪಣ್ಯದಹುಂಡಿ, ರಾಜ್‌ಕುಮಾ‌ರ್ ಕೆರೆಹಳ್ಳಿ, ಕವಿ ಸುಂದರ್ ಕಲಿವೀರ್, ಮಧುಸೂದನ್‌ ಹೊಸಳ್ಳಿ, ಗಾಯಕ ಮುತ್ತುರಾಜ್, ನಾಗರಾಜು ಯಡಿಯೂರು, ಕೆಇಬಿ ಜೆಇ ಚಂದ್ರ ನಾಯಕ್, ಕವಯಿತ್ರಿ ದೀಪಾಬುದ್ದೆ, ರೇವಣ್ಣ ಕುದೇರು ಅವರನ್ನು ಸನ್ಮಾನಿಸಲಾಗುತ್ತಿದೆ.

ಜಾನಪದ ಕಲಾವಿದೆ ಚಿನ್ನಮ್ಮ ರಾಮಸಮುದ್ರ, ಮುಖಂಡ ರಾಜಶೇಖರ್ ಬಸವನಪುರ, ಕವಿ ಕಮರವಾಡಿ ಮಹದೇವಸ್ವಾಮಿ, ಹೋರಾಟಗಾರ ಸುರೇಶ್ ಜನಶಕ್ತಿ, ಎಸ್.ಪಿ.ಬಿ ಸಂಘದ ಅಧ್ಯಕ್ಷ ಶಿವಣ್ಣ, ಮುರುಡೇಶ್ವರ ಮೂರ್ತಿ, ನಮ್ಮೂರ ಸುದ್ದಿ ಪತ್ರಿಕೆ ಸಂಪಾದಕ ಗಂಗಾಧರ್, ಪತ್ರಕರ್ತ ಲಕ್ಕೂರು ಪ್ರಸಾದ್, ಮುಖಂಡ ಅಡುಗೆ ಕೃಷ್ಣ, ಸಿ.ಡಿ.ಪ್ರಕಾಶ್, ಕವಿ ಬಳೆಪೇಟೆ ಪ್ರಕಾಶ್, ನರಸಿಂಹ, ಆಲೂರು ನಾಗೇಂದ್ರ, ಉಮೇಶ್ ಜಿಂಕೆ, ನಂಜುಂಡಸ್ವಾಮಿ ಸೋಮವಾರಪೇಟೆ, ಸಿದ್ದರಾಜು ಕೆಬ್ಬೇಪುರ, ಕಾವೇರಿ ಶಿವಕುಮಾರ್, ಸೋಬಾನೆ ಕಲಾವಿದೆ ಹೊನ್ನಮ್ಮ, ಶಂಕರ ಗೊರವರ, ಬಾಲು ಗೊರವರ ಕಲಾವಿದ, ಶಿವಣ್ಣ ಕಂದೇಗಾಲ, ರವಿ ಮಾದಾಪುರ, ರಾಜೇಶ್ ಭೋಗಾಪುರ, ಕೆಇಬಿ ಜೆಇ ಮಹದೇವಸ್ವಾಮಿ, ಬ್ಯಾಡ್ಲಮೂಡ್ಲು ಬಸವಣ್ಣ, ಗಜ ನಾಗೇಂದ್ರ, ಜಗ್ಗು ಜಾದುಗಾರ್, ರಾಮಣ್ಣ ಕೆಲ್ಲಂಬಳ್ಳಿ, ಕೂಡ್ಲಪುರ ಮಹದೇವಯ್ಯ, ಸಮಾಜ ಸೇವಕ ಎಲ್.ಸುರೇಶ್, ಮನೋಹರ ಗಂಗವಾಡಿ, ನಂಜುಂಡಸ್ವಾಮಿ(ಮಾವ), ಬಸವಯ್ಯ ಹೊಮ್ಮ, ಮಹದೇವಸ್ವಾಮಿ(ಸೌಂಡ್), ಮಿಮಿಕ್ರಿ ಮಲ್ಲಣ್ಣ, ಗೋವಿಂದರಾಜು ಸಿರಿಗನ್ನಡ, ವಕೀಲರಾದ ಕಾಳಸ್ವಾಮಿ,  ನಗರಸಭೆ ಮಾಜಿ ಸದಸ್ಯ ಮಹೇಶ್‌ ಗಾಳಿಪುರ, ಗೌರಿಶಂಕರ್ ರಾಮಸಮುದ್ರ, ಅಡುಗೆ ಪ್ರಕಾಶ್ ಅವರನ್ನು ಗೌರವಿಸಲಾಗುತ್ತಿದೆ.

ಕವಯತ್ರಿ ಪದ್ಮಾಕ್ಷಿ, ಕಾವುದವಾಡಿ ಗುರು, ರವಿ ಮಾದಾಪುರ, ದಸಂಸ ಮುಖಂಡ ಬೆಳ್ಳಿಯಪ್ಪ, ತತ್ವಪದ ರಾಚಯ್ಯ, ರಾಮಚಂದ್ರ ಮಾದಾಪುರ, ಕಲಾವಿದ ದೊಡ್ಡಗವಿ ಬಸಪ್ಪ, ಅಮ್ಮಸಂದ್ರ ಸುರೇಶ್, ಸಾಹಿತಿ ನಿಂಗಶೆಟ್ಟಿ, ಕೀಬೋರ್ಡ್ ವಾದಕ ನಾಗ ಲಿಂಗಾಚಾರ್, ಮಂಜು ಅಶ್ವಿನ್, ಅರ್ಜುನ್, ನಾಗಶೆಟ್ಟಿ ಅಡಿಕೆ, ಮಹೇಶ್‌ ಮಹಂತಾಳಪುರ, ಹಂಡ್ರಕಳ್ಳಿ ರಾಮಣ್ಣ, ಶತಾಯುಷಿ ಕಣ್ಣೇಗಾಲ ಮಹದೇವ್, ಗಂಗವಾಡಿ ನಟರಾಜು, ಕಲೆ ನಟರಾಜು, ಮಹದೇವಸ್ವಾಮಿ, ಶಿಕ್ಷಕ(ಶಾಸಕ), ಕಾಳಿಂಗಸ್ವಾಮಿ ಗುಂಡ್ಲುಪೇಟೆ, ಕಲಾವಿದರಾದ ಗೋಪಾಲ ರಾಮಸಮುದ್ರ, ಮಹೇಶ್ ನಂಜರಾಜಪುರ, ಶ್ರೀಕಂಠ ರಾಮಸಮುದ್ರ, ಗುರುರಾಜು ತಮ್ಮಡಹಳ್ಳಿ, ಶಾಂತಪ್ಪ ವೆಂಕಟಯ್ಯನಛತ್ರ, ಯುವ ಕಲಾವಿದ ಶಿವಶಂಕರ್ ಚಟ್ಟು, ಗಾಯಕ ಆಲೂರು ದೊರೆ, ವಕೀಲರಾದ ಮಹೇಂದ್ರ ಅವರ ಸಾಧನೆಯನ್ನು ಗುರುತಿಸಿ ಸನ್ಮಾನಿಸಲಾಗುತ್ತಿದೆ.

Share this Article
Leave a comment