ನಾಗಮಲೆಯಲ್ಲಿ ಮತ್ತೆ ಚಿರತೆ ದಾಳಿ; ಬೆಚ್ಚಿದ ಜನರು 

ಮಣಿಕಂಠ ಜನತಾ ರಾಯಭಾರಿ
0 Min Read

ಚಾಮರಾಜನಗರ: ಇಂಡಿಗನತ್ತದಲ್ಲಿ ಚಿರತೆ ಸೆರೆ ಬೆನ್ನಲ್ಲೇ ನಾಗಮಲೆಯಲ್ಲಿ ಭಾನುವಾರ ತಡರಾತ್ರಿ 1.30 ರ ವೇಳೆ ಚಿರತೆಯೊಂದು ದಾಳಿ ನಡೆಸಿದ್ದು, ಮೇಕೆಯನ್ನು ಬಲಿ ಪಡೆದಿದೆ.

ತಾಲೂಕಿನ ಮಲೆಮಹದೇಶ್ವರ ಬೆಟ್ಟದ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿರುವ ಇಂಡಿಗನತ್ತದಲ್ಲಿ ಭಾನುವಾರ ಹೆಣ್ಣು ಚಿರತೆ ಸೆರೆಯಾದ ಬೆನ್ನಲ್ಲೆ ಜನರು ನಿಟ್ಟುಸಿರು ಬಿಟ್ಟಿದ್ದರು. ಆದರೆ ಭಾನುವಾರ ತಡರಾತ್ರಿ ನಾಗಮಲೆಯ ಪುಟ್ಟೇಗೌಡ ಎಂಬುವವರ ಮೇಕೆಯ ಮೇಲೆ ಚಿರತೆ ದಾಳಿ ನಡೆಸಿ ಬಲಿ ಪಡೆದಿದೆ.

ನಾಗಮಲೆಯಲ್ಲಿ ಚಿರತೆ ದಾಳಿಯಿಂದ ಜನರು ಬೆಚ್ಚಿ ಬಿದ್ದಿದ್ದು, ಇಂಡಿಗನತ್ತದಲ್ಲಿ ಸೆರೆ ಹಿಡಿದ ಹಾಗೆ ನಾಗಮಲೆಯಲ್ಲೂ ಕಾರ್ಯಾಚರಣೆ ನಡೆಸಿ ಚಿರತೆಯನ್ನು ಸೆರೆ ಹಿಡಿಯಲು ಜನರ ಒತ್ತಾಯಿಸಿದ್ದಾರೆ.

 

Share this Article
Leave a comment