ಪರಿಸರಪ್ರೇಮಿ ಬಿಇಓ ಸ್ವಾಮಿ ಅವರಿಗೆ ಕಾವಲುಪಡೆಯಿಂದ ಸನ್ಮಾನ

ಮಣಿಕಂಠ ಜನತಾ ರಾಯಭಾರಿ
1 Min Read

ಗುಂಡ್ಲುಪೇಟೆ : ಕ್ಷೇತ್ರ ಶಿಕ್ಷಣಾಧಿಕಾರಿ ಸ್ವಾಮಿರವರ ಪರಿಸರದ ಮೇಲಿನ ಕಾಳಜಿಯನ್ನ ಪರಿಗಣಿಸಿದ ಕರ್ನಾಟಕ ಕಾವಲು ಪಡೆ ಸಂಘಟನೆ ಪದಾಧಿಕಾರಿಗಳು ಸನ್ಮಾನಿಸಿ ಅಭಿನಂದನೆ ಸಲ್ಲಿಸಿದರು.

ತಮ್ಮ ಅಧಿಕಾರವಧಿಯಲ್ಲಿ ಶಾಲಾ ಮಕ್ಕಳ ವಿದ್ಯಾರ್ಜನೆಗೆ ಪೂರಕ ವಾತಾವರಣ ನಿರ್ಮಾಣ ಮಾಡುವ ಜೊತೆಗೆ ಪರಿಸರ ಸಂರಕ್ಷಣೆಯಲ್ಲೂ ತಮ್ಮನ್ನ ತಾವು ತೊಡಗಿಸಿಕೊಂಡು ಸರಿಸುಮಾರು 1200 ಕ್ಕೂ ಹೆಚ್ಚು ತೆಂಗಿನ ಗಿಡಗಳನ್ನ ಕ್ಷೇತ್ರದ ಬಹುತೇಕ ಶಾಲೆಗಳಿಗೆ ವಿತರಿಸಿ ಪೋಷಿಸುವ ಮಹತ್ಕಾರ್ಯಕ್ಕೆ ಮುಂದಾಗಿದ್ದ ತೆರೆಮರೆಯ ಸೇವೆಯನ್ನ ಪರಿಗಣಿಸಿ ಕಿರು ಸನ್ಮಾನ ಮಾಡಲಾಗಿದೆ ಎಂದು ಸಂಘಟನೆ ತಾಲೂಕು ಅಧ್ಯಕ್ಷ ಅಬ್ದುಲ್ ಮಾಲೀಕ್ ತಿಳಿಸಿದರು.

ಈ ಸಂಧರ್ಭದಲ್ಲಿ ಕನ್ನಡಪರ ಹಿರಿಯ ಹೋರಾಟಗಾರ ಬ್ರಹ್ಮಾನಂದ್, ರಾಮೇಗೌಡ, ತಾಲ್ಲೂಕು ಕಾರ್ಯದರ್ಶಿ ಮುಬಾರಕ್, ಟೌನ್ ಉಪಾಧ್ಯಕ್ಷ ಸಾಧಿಕ್ ಪಾಷಾ, ಸಂಚಾಲಕ ಮಿಮಿಕ್ರಿರಾಜು ಸೇರಿದಂತೆ ಹಲವರು ಹಾಜರಿದ್ದರು.

Share this Article
Leave a comment