ಪಿ.ಮರಿಸ್ವಾಮಿ ನಿಧನಕ್ಕೆ ಪತ್ರಕರ್ತರ ಸಂಘದಿಂದ ಸಂತಾಪ

ಮಣಿಕಂಠ ಜನತಾ ರಾಯಭಾರಿ
1 Min Read

ಚಾಮರಾಜನಗರ: ಗೊರುಕನ ಪತ್ರಿಕೆಯ ಪುಟ ವಿನ್ಯಾಸಕ ಪಿ.ಮರಿಸ್ವಾಮಿ ನಿಧನ ಹಿನ್ನೆಲೆಯಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಸೋಮವಾರ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಭಾಂಗಣದಲ್ಲಿ ಪಿ.ಮಹದೇವಸ್ವಾಮಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಬಳಿಕ ಮೌನಾಚರಣೆ ಮಾಡುವ ಮೂಲಕ ಮೃತರಿಗೆ ಸಂತಾಪ ಸೂಚಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಆ‌ರ್.ಎನ್.ಸಿದ್ದಲಿಂಗಸ್ವಾಮಿ ಮಾತನಾಡಿ, ಪಿ.ಮಹದೇವಸ್ವಾಮಿ ಅವರು ಕಳೆದ 12 ವರ್ಷಗಳಿಂದಲೂ ಗೊರುಕನ ಪತ್ರಿಕೆಯಲ್ಲಿ ಪುಟ ವಿನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅವರ ಅಕಾಲಿಕ ನಿಧನದಿಂದ ತುಂಬಲಾರದ ನಷ್ಟ ಉಂಟಾಗಿದೆ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದರು.

ಈ ಸಂದರ್ಭದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಲಕ್ಕೂರು ಪ್ರಸಾದ್, ಪತ್ರಕರ್ತರಾದ ಎಸ್.ಎಂ.ನಂದೀಶ್, ಫಾಲಲೋಚನಾ ಆರಾಧ್ಯ, ಲಿಂಗಪ್ಪ, ಬದನಗುಪ್ಪೆ ಮಲ್ಲಣ್ಣ, ಬಸವಣ್ಣ, ಚಂದ್ರಶೇಖರ್, ನಂಜುಂಡನಾಯಕ, ವಿಜಯ್, ಬಸವರಾಜು, ರವಿಕುಮಾರ್, ಮಂಜುಕುಮಾ‌ರ್, ಚರಣ್ ಹಾಗೂ ಇತರರು ಹಾಜರಿದ್ದರು.

Share this Article
Leave a comment