ಪ್ರತಿಯೊಬ್ಬರು ಶಿಕ್ಷಣಕ್ಕೆ ಒತ್ತು ನೀಡಿ- ಎ.ಆರ್.ಕೃಷ್ಣಮೂರ್ತಿ

ಮಣಿಕಂಠ ಜನತಾ ರಾಯಭಾರಿ
1 Min Read

ಯಳಂದೂರು: ಉಪ್ಪಾರ ಸಮುದಾಯದ ಪ್ರತಿಯೊಬ್ಬ ವಿದ್ಯಾರ್ಥಿಯೂ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ ಸಲಹೆ ನೀಡಿದರು.

ಪಟ್ಟಣದ ವಾಲ್ಮೀಕಿ ಭವನದಲ್ಲಿ ಉಪ್ಪಾರ ಸೇನಾ ಸಮಿತಿ ಮತ್ತು ತಾಲ್ಲೂಕು ಉಪ್ಪಾರರ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ 2025-26 ನೇ ಸಾಲಿನ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಪ್ರತಿಯೊಬ್ಬ ಪಾಲಕರು ತಮ್ಮ ಮಕ್ಕಳಿಗೆ ಮೊದಲು ಶಿಕ್ಷಣವನ್ನು ಕೊಡಿಸಬೇಕು. ಉಪ್ಪಾರ ಸಮುದಾಯದ ಮಕ್ಕಳು ಉನ್ನತ ಶಿಕ್ಷಣದ ಕಡೆ ಹೆಚ್ಚಿನ ಗಮನ ಹರಿಸಬೇಕು. ಸರ್ಕಾರದ ಸವಲತ್ತುಗಳನ್ನು ಬಳಸಿಕೊಂಡು ಉತ್ತಮ ಬದುಕು ಕಟ್ಟಿಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ  ಎಸ್.ಎಸ್.ಎಲ್.ಸಿ ಮತ್ತು ಪಿಯುಸಿಯಲ್ಲಿ ಅತ್ಯುನ್ನತ ಸ್ಥಾನದ ಪಡೆದ ತಾಲ್ಲೂಕಿನ 62 ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿ, ನಿಮ್ಮ ಮುಂದಿನ ವಿದ್ಯಾಬ್ಯಾಸ ಉತ್ತಮವಾಗಿರಲಿ ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ಅಯ್ಯನಸರಗೂರು ಮಠದ ಮಹದೇವಸ್ವಾಮೀಜಿ, 88 ಗಡಿಮನೆ ಪೀಠದ ಮಂಜುನಾಥಸ್ವಾಮೀಜಿ, ಡಿ.ಜಗನ್ನಾಥ್, ತಾಲ್ಲೂಕು ಪ್ರತಿಭಾ ಪುರಸ್ಕಾರ ಸಮಿತಿ ಅಧ್ಯಕ್ಷರಾದ ಕುಸುಮರಾಜ್, ಜಿಪಂ ಮಾಜಿ ಉಪಾಧ್ಯಕ್ಷ ಜೆ.ಯೋಗೇಶ್, ನಿವೃತ್ತ‌ ಪ್ರಾಂಶುಪಾಲರಾದ ಸೋಮಣ್ಣ, ಉಪ್ಪಾರ ಸೇನಾ ಸಮಿತಿ ಅಧ್ಯಕ್ಷ ಪ್ರದೀಪ್, ಪ್ರಧಾನ ಕಾರ್ಯದರ್ಶಿ ಕೆಸ್ತೂರು ಸಿದ್ದಪ್ಪಸ್ವಾಮಿ, ಗೌಡಹಳ್ಳಿ ಮಹೇಶ್ ,ಶಿವಕುಮಾರ್, ದುಗ್ಗಹಟ್ಟಿ ಮಾದೇಶ್, ಕಂದಹಳ್ಳಿ ನಂಜುಂಡಸ್ವಾಮಿ, ಉಪಾಧ್ಯಕ್ಷ ಶಿವರಾಜ್ ನಂಜರಾಜ್, ನವೀನ್,  ಶಿವು, ಮಂಜುಕುಮಾರ್ ,ಗೋವಿಂದ್,ಅನಂತು ಮತ್ತಿತರರು ಉಪಸ್ಥಿತರಿದ್ದರು.

Share this Article
Leave a comment