ಚಾಮರಾಜನಗರ: ತಾಲೂಕಿನ ಪುಣ್ಯದ ಹುಂಡಿ ಗ್ರಾಮದಲ್ಲಿ ಚಿರತೆ ದಾಳಿಯಿಂದ ಹಸುವೊಂದು ಮೃತಪಟ್ಟಿದೆ.
ಪುಣ್ಯದಹುಂಡಿ ಗ್ರಾಮದ ನಿವಾಸಿ ಚರಣ್ ಎಂಬುವವರಿಗೆ ಸೇರಿದ್ದ ಹಸುವನ್ನು ತೋಟದಲ್ಲಿ ಕಟ್ಟಿ ಹಾಕಲಾಗಿತ್ತು. ಮಂಗಳವಾರ ಬೆಳಗ್ಗೆ ಚಿರತೆ ದಾಳಿ ನಡೆಸಿದ ಪರಿಣಾಮ ಹಸು ಮೃತಪಟ್ಟಿದೆ. ಹಸುವಿನ ಮೇಲೆ ದಾಳಿ ನಡೆಸುವುದನ್ನು ಸಮೀಪದಲ್ಲಿ ಇದ್ದವರು ನೋಡಿದ್ದು, ಕಿರುಚಿಕೊಂಡದ್ದರಿಂದ ಹಸುವನ್ನು ಬಿಟ್ಟು ಹೋಗಿದೆ.

ಈ ಸಂಬಂಧ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಇದು ಖಚಿತವಾಗಿಯೂ ಚಿರತೆ ದಾಳಿ ಎಂದು ತಿಳಿಸಿದ್ದಾರೆ. ಈ ಭಾಗದಲ್ಲಿ ವರ್ಷದ ಹಿಂದೆ ಇದೇ ರೀತೀ ಚಿರತೆ ದಾಳಿ ನಡೆಸಿ ಹಸುವನ್ನು ಬಲಿ ಪಡೆದಿತ್ತು. ಈಗ ಮತ್ತೆ ಇದು ಮರುಕಳಿಸಿದೆ.
ಈ ನಿಟ್ಸೂಟಿನಲ್ಲಿ ರೈತರಿಗೆ ಸೂಕ್ತ ಪರಿಹಾರ ನೀಡಬೇಕು. ಅದಲ್ಲದೇ ಬೋನ್ ಇರಿಸಿ ಚಿರತೆಯನ್ನು ಶೀಘ್ರವಾಗಿ ಸೆರೆ ಹಿಡಿಯಬೇಕು. ಇಲ್ಲವಾದರೇ ಮುಂದಿನ ದಿನಗಳಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.