ಭೀಕರ ಕಾರು ಅಪಘಾತದಲ್ಲಿ ಓರ್ವ ಮೃತ, ಇಬ್ಬರ ಸ್ಥಿತಿ ಗಂಭೀರ

ಮಣಿಕಂಠ ಜನತಾ ರಾಯಭಾರಿ
1 Min Read

ಯಳಂದೂರು: ತಾಲೂಕಿನ ಕಂದಹಳ್ಳಿ ಗ್ರಾಮದಲ್ಲಿ ತಡರಾತ್ರಿಯಲ್ಲಿ ಲೈಟು ಕಂಬಕ್ಕೆ ಕಾರೊಂದು ಡಿಕ್ಕಿಯೊಡೆದ ಪರಿಣಾಮ ಸ್ಥಳದಲ್ಲೇ ಓರ್ವ ಮೃತಪಟ್ಟರೇ, ಇಬ್ಬರ ಸ್ಥಿತಿ ಗಂಭೀರವಾಗಿದೆ.

ಯಳಂದೂರು ಪಟ್ಟಣದ ನಿವಾಸಿ ಪ್ರಸಾದ್ (31) ಎಂಬ ಯುವಕ ಮೃತಪಟ್ಟವನು. ಆತನ ಜೊತೆಗೆ ಪ್ರಯಾಣ ಮಾಡುತ್ತಿದ್ದ ಸುರೇಶ್, ಶಶಿ ಮತ್ತು ಚೇತನ್ ಎಂಬ ಯುವಕರಿಗೂ ತೀವ್ರವಾದ ಪೆಟ್ಟಾಗಿದೆ. ತಡರಾತ್ರಿಯಲ್ಲಿ ಯಳಂದೂರಿನಿಂದ ಸಂತೇಮರಹಳ್ಳಿಗೆ ಚಲಿಸುತ್ತಿದ್ದ ಕಾರು ಏಕಾಏಕಿ ಕಂದಹಳ್ಳಿ ಗ್ರಾಮದಲ್ಲಿ ಲೈಟು ಕಂಬಕ್ಕೆ ಡಿಕ್ಕಿಯೊಡೆದ ಪರಿಣಾಮವಾಗಿ ಪ್ರಸಾದ್ ತಲೆಗೆ ತೀವ್ರ ಪೆಟ್ಟಾದ ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಅಪಘಾತದ ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಯಳಂದೂರು ಠಾಣೆಯ ಪೊಲೀಸರು, ಮೃತದೇಹ ಮತ್ತು ಗಾಯಾಳುವನ್ನು ಸಿಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ. ಸದ್ಯ ಮೂವರು ಯುವಕರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದ್ದು, ಓರ್ವನ ಪ್ರಾಣಕ್ಕೆ ಯಾವುದೇ ಅಪಾಯವಿಲ್ಲ ಎಂದು ಯಳಂದೂರು ಪೊಲೀಸ್ ಠಾಣೆಯ ಪಿಎಸ್ಐ ಆಕಾಶ್ ಅವರು “ಜನತಾ ರಾಯಭಾರಿ” ಗೆ ಮಾಹಿತಿ ನೀಡಿದರು.

Share this Article
Leave a comment