ಮಕ್ಕಳು ಸೃಜನಶೀಲತೆಯನ್ನು ಮೈಗೂಡಿಸಿಕೊಳ್ಳಿ- ಅಹಿಂದ ಜವರಪ್ಪ 

ಮಣಿಕಂಠ ಜನತಾ ರಾಯಭಾರಿ
1 Min Read

ಮೈಸೂರು: ಸಾಮಾಜಿಕ ಜಾಲತಾಣಗಳು ಎಲ್ಲಾ ಸ್ತರಗಳನ್ನು ಆವರಿಸಿಕೊಂಡಿರುವ ಈ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳು ಅದಕ್ಕೆ ಹೆಚ್ಚು ಅಂಟಿಕೊಳ್ಳದೆ ಸೃಜಶೀಲತೆಯನ್ನು ಮೈಗೂಡಿಸಿಕೊಂಡು ಕಲಾತ್ಮಕ ಮತ್ತು ಶೖಕ್ಷಣಿಕ ಜೀವನವನ್ನು ವೃದ್ಧಿಸಿಕೊಳ್ಳಬೇಕು ಎಂದು ಸಮಾಜ ಸೇವಕರು ಹಾಗೂ ಕಲಾಪೋಷಕರಾದ ಅಹಿಂದ ಜವರಪ್ಪ ಸಲಹೆ ನೀಡಿದರು.

ಮೈಸೂರಿನ ಅಲನಹಳ್ಳಿಯ ಶಾಶ್ವತ ಸೇವಾ ಶಾಲೆಯ ಆವರಣದಲ್ಲಿ ಪರಸ್ಪರ ಸಂಸ್ಥೆ ಹಾಗೂ ಶಾಶ್ವತ ಸೇವಾ ಶಾಲೆಯ ಸಹಯೋಗದಲ್ಲಿ ಆಯೋಜಿಸಿದ್ದ ಮೂರನೇ ವರ್ಷದ ಚಿಣ್ಣರ ಚೈತ್ರ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಕಾರ್ಯಕ್ರಮವನ್ನು ಉದ್ಘಾಟಸಿ ಮಾತನಾಡಿದರು.

ಬೇಸಿಗೆ ಶಿಬಿರಗಳು ಮಕ್ಕಳಲ್ಲಿ ಅಡಗಿರುವ ಸುಪ್ತಕಲೆಯನ್ನು ಹೊರತರುವ ವೇದಿಕೆಯಾಗಲಿವೆ, ಉದಯೋನ್ಮುಖ ಪ್ರತಿಭೆ ರಮೇಶ್ ತಾಯೂರು ಅವರ ನೇತೃತ್ವದಲ್ಲಿ ನಡೆಯುತ್ತಿರುವ ಈ ಶಿಬಿರವು ಅತ್ಯಂತ ಕ್ರಿಯಾಶೀಲವಾಗಿ ಮೂಡಿಬಂದಿದೆ ಎಂದು ಅಭಿಪ್ರಾಯ ಪಟ್ಟರು.

ರಂಗಭೂಮಿ ಮತ್ತು ಚಲನಚಿತ್ರ ಯುವ ನಟ ಅಂಕಿತ್ ರಾಜ್ ಮಾತನಾಡಿ, ಮಕ್ಕಳು ರಂಗಭೂಮಿ ಮತ್ತು ಸಾಂಸ್ಕೃತಿಕ, ಸಾಮಾಜಿಕ ಜಗತ್ತಿನಲ್ಲಿ ಉತ್ತಮ ಆಲೋಚನೆಗಳಿಂದ ಅತ್ಯುತ್ತಮ ಕಾರ್ಯಗಳಲ್ಲಿ ತೊಡಗಿ ಸನ್ಮಾರ್ಗದಲ್ಲಿ ಸಾಗಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಂಶುಪಾಲರಾದ ಕುಮಾರಸ್ವಾಮಿ, ಮುಖ್ಯ ಶಿಕ್ಷಕಿ ಎಚ್.ಪಿ.ಪವಿತ್ರ, ಕು. ತಾನ್ಯ ಚೌಧರಿ, ಪರಸ್ಪರ ಸಂಸ್ಥೆಯ ಸಂಸ್ಥಾಪಕರು ಹಾಗೂ ಶಿಬಿರದ ನಿರ್ದೇಶಕರಾದ ರಮೇಶ್ ತಾಯೂರು, ಮದನ್ ತೊರೆಮಾವು, ಬೋಧಕ ಬೋಧಕೇತರ ಸಿಬ್ಬಂದಿ ಹಾಗೂ ಮಕ್ಕಳು ಹಾಜರಿದ್ದರು. ಪ್ರಸಿದ್ಧ ಜನಪದ ಗಾಯಕ ವಿಶ್ವನಾಥ್ ಚಂಗಚಹಳ್ಳಿ ಮತ್ತು ಶಿವಕುಮಾರ್ ತಂಡದ ವತಿಯಿಂದ ಗೀತಗಾಯನ ನಡೆಯಿತು. ಶಿಬಿರದ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಸಂಶೋಧಕ ಅಭಿಷೇಕ್ ಪಾಳ್ಯಾಗಾರ್ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು.

Share this Article
Leave a comment