ಸುಪ್ರೀಂ ಕೋರ್ಟ್‌ನಲ್ಲಿ ದರ್ಶನ್‌ಗೆ ದೊಡ್ಡ ಹಿನ್ನಡೆ

ಮಣಿಕಂಠ ಜನತಾ ರಾಯಭಾರಿ
1 Min Read

ದೆಹಲಿ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ತೂಗುದೀಪ ಅವರಿಗೆ ಸುಪ್ರೀಂಕೋರ್ಟ್ ಜಾಮೀನು ನಿರಾಕರಿಸಿದ್ದು, ನಟ ದರ್ಶನ್ ಗೆ ದೊಡ್ಡ ಹಿನ್ನಡೆಯಾಗಿದೆ.

2024ರ ಜೂನ್‌ನಲ್ಲಿ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ಸೇರಿ ಹಲವರು ಬಂಧನವಾಗಿದ್ದರು. 2024ರ ಅಕ್ಟೋಬರ್‌ನಲ್ಲಿ ಹೈಕೋರ್ಟ್ ಜಾಮೀನು ನೀಡಿತ್ತು. ಆದರೆ 2025ರ ಆಗಸ್ಟ್ 14ರಂದು ಸುಪ್ರೀಂ ಕೋರ್ಟ್ ಅದನ್ನು ರದ್ದು ಮಾಡಿ, ಎಲ್ಲಾ ಆರೋಪಿಗಳು ಶರಣಾಗಲು ಸೂಚಿಸಿತ್ತು. 273 ಸಾಕ್ಷಿಗಳ ಪೈಕಿ ಕೇವಲ 15 ಸಾಕ್ಷಿಗಳ ವಿಚಾರಣೆಯಷ್ಟೇ ಮುಗಿದಿದ್ದು, 8 ತಿಂಗಳು ಕಳೆದರೂ ವಿಚಾರಣೆ ಮುಕ್ತಾಯವಾಗಿಲ್ಲ ಎಂದು ದರ್ಶನ್ ಪರ ವಕೀಲ ಮುಕುಲ್ ರೋಹ್ಟಗಿ ಸುಪ್ರೀಂ ಕೋರ್ಟ್ ನಲ್ಲಿ ವಾದಿಸಿದ್ದರು. ಮೇ 4ರ ವಿಚಾರಣೆಯಲ್ಲಿ, ಟ್ರಯಲ್ ಮುಗಿಯಲು ಎಷ್ಟು ದಿನ ಬೇಕು, ದರ್ಶನ್‌ಗೆ ಕನಿಷ್ಠ ಸೌಲಭ್ಯ ಇದೆಯೇ ಎಂದು 1 ವಾರದಲ್ಲಿ ವರದಿ ನೀಡಲು 57 ನೇ ಸಿಸಿಎಚ್ ಕೋರ್ಟ್‌ಗೆ ಸುಪ್ರೀಂ ಸೂಚಿಸಿತ್ತು. ದರ್ಶನ್ ಪರ ವಕೀಲರು ದರ್ಶನ್ ಅವರಿಗೆ ಮೂಲಭೂತ ಸವಲತ್ತು ನೀಡುತ್ತಿಲ್ಲ ವಾದಿಸಿದ್ದರು. ಶುಕ್ರವಾರ ನಡೆದ ವಿಚಾರಣೆಯಲ್ಲಿ ಸುಪ್ರೀಂ ಕೋರ್ಟ್ ಜಾಮೀನು ನೀಡದೆ, ವಿಚಾರಣೆಯನ್ನು ಪ್ರತಿದಿನ ನಡೆಸಿ 2027ರ ಮೇ 15ರೊಳಗೆ ಮುಗಿಸಲು ಸೂಚಿಸಿದೆ. ಹೀಗಾಗಿ ದರ್ಶನ್‌ಗೆ ಇನ್ನೊಂದು ವರ್ಷ ಜೈಲುವಾಸ ನಿಶ್ಚಿತವಾಗಿದೆ.

ಕೋರ್ಟ್ ಏನು ಹೇಳಿದೆ?: ಸದ್ಯಕ್ಕೆ ದರ್ಶನ್‌ಗೆ ಜಾಮೀನು ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿದೆ. ಸಾಕ್ಷಿ ವಿಚಾರಣೆಗೆ 1 ವರ್ಷ ಕಾಲಾವಧಿ ನೀಡಲಾಗಿದೆ. ಹೀಗಾಗಿ ದರ್ಶನ್ ಅವರಿಗೆ ಇನ್ನೊಂದು ವರ್ಷ ಪರಪ್ಪನ ಅಗ್ರಹಾರ ಜೈಲುವಾಸ ಖಾಯಂ ಆದಂತಾಗಿದೆ. ಅದಲ್ಲದೇ 2027ರ ಮೇ 15ರೊಳಗೆ ವಿಚಾರಣೆ ಮುಗಿಸಲು ಗಡುವು ನೀಡಿದೆ. ಜೈಲಿನಲ್ಲಿ ದರ್ಶನ್‌ಗೆ ಮೂಲ ಸೌಲಭ್ಯ ಒದಗಿಸಲು ಸೂಚಿಸಿದೆ. ಸಾಕ್ಷಿ ವಿಚಾರಣೆಯಲ್ಲಿ ವಿಳಂಬವಾದರೆ ಮತ್ತೆ ಅರ್ಜಿ ಸಲ್ಲಿಸಬಹುದು ಎಂದು ಕೋರ್ಟ್ ಹೇಳಿದೆ.

Share this Article
Leave a comment