ಚಾಮರಾಜನಗರ: ಅವಧಿ ಮೀರಿರುವ ಮತ್ತು ಮಾನವ ಸೇವನೆಗೆ ಯೋಗ್ಯವಲ್ಲದ ಸುಮಾರು 1.88 ಲಕ್ಷ ರೂ, ಮೌಲ್ಯದ ಮದ್ಯವನ್ನು ನಾಶ ಮಾಡಲಾಗಿದೆ.
ನಗರದ ಹೊರ ವಲಯದ ಬದನಗುಪ್ಪೆ-ಕೆಲ್ಲಂಬಳ್ಳಿ ಕೆಐಎಡಿಬಿ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಪಾನೀಯ ನಿಗಮದ ಅವರಣದಲ್ಲಿ ಅಬಕಾರಿ ಅಧೀಕ್ಷಕರಾದ ಕೆ.ಟಿ. ವಿಜಯಕುಮಾರ್ ಅಬಕಾರಿ ನಿರೀಕ್ಷಕ ಕೆ. ತನ್ನೀರ್, ಮಳಿಗೆ ವ್ಯವಸ್ಥಾಪಕ ಜಿ.ಮಹದೇವಸ್ವಾಮಿ ಅವರ ಸಮ್ಮುಖದಲ್ಲಿ 1.88 ಲಕ್ಷ ರೂ, ಮೌಲ್ಯದ ಮದ್ಯವನ್ನು ನೆಲಕ್ಕೆ ಸುರಿದು ನಾಶಪಡಿಸಲಾಯಿತು.

ಈ ಸಂದರ್ಭದಲ್ಲಿ ಅಬಕಾರಿ ನಿಗಮದ ಸಹಾಯಕ ವ್ಯವಸ್ಥಾಪಕ ದಿನೇಶ್, ಗ್ರಾಮ ಆಡಳಿತಾಧಿಕಾರಿಗಳಾದ ಜಯರಾಮು, ಎಂ.ಮಹೇಶ್ಕುಮಾರ್, ರಾಜೇಶ್ನಾಯಕ ಇತರರು ಇದ್ದರು.