ಮೈಸೂರು: ಅಖಿಲ ಭಾರತ ಕಾಂಗ್ರೆಸ್ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆ ಉಪಾಧ್ಯಕ್ಷ ಸೂರಜ್ ಹೆಗ್ಡೆ ಅವರ ಹಠಾತ್ ನಿಧಾನವೂ ಪಕ್ಷಕ್ಕೆ ತುಂಬಲಾರದ ನಷ್ಟ ಎಂದು ಕೆಪಿಸಿಸಿ ಸಂಯೋಜಕ ಎನ್.ಭಾಸ್ಕರ್ ತಿಳಿಸಿದ್ದಾರೆ.
ಮೃತರ ಅಂತಿಮ ದರ್ಶನ ಪಡೆದು ನಾಲ್ಕೂವರೆ ದಶಕಗಳ ಒಡನಾಟವನ್ನು ಸ್ಮರಿಸಿರುವ ಎನ್.ಭಾಸ್ಕರ್ ಅವರು ಕಂಬನಿ ಮಿಡಿದಿದ್ದಾರೆ. ಸೋಮವಾರ ದೆಹಲಿಯಲ್ಲಿ ನಡೆಯಲಿರುವ ಪಕ್ಷದ ಸಭೆಯಲ್ಲಿ ಭಾಗವಹಿಸಲು ವಿಮಾನ ಟಿಕೆಟ್ ಬುಕ್ ಮಾಡಿದ್ದರು. ಆದರೆ, ವಿಧಿ ಅವರನ್ನು ಬಾರದ ಲೋಕಕ್ಕೆ ಕರೆದುಕೊಂಡು ಹೋಗಿದೆ ಎಂದು ದುಃಖ ವ್ಯಕ್ತಪಡಿಸಿದ್ದಾರೆ.

ಸೂರಜ್ ಹೆಗ್ಡೆ ಕಾಂಗ್ರೆಸ್ ಪಕ್ಷಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದರು.ಪಕ್ಷ ದ ಸಂಘಟನೆಯಲ್ಲಿ ನಿರಂತರವಾಗಿ ಕೆಲಸ ಮಾಡುತ್ತಿದ್ದರು. ವಿಧಾನ ಪರಿಷತ್ ಸದಸ್ಯ ಸ್ಥಾನ ಸಿಕ್ಕಾಗ ತಿರಸ್ಕರಿಸಿ ಪಕ್ಷದ ಸಂಘಟನೆಯ ಜವಾಬ್ದಾರಿ ಕೇಳಿದರು ಆಗ ಆ ಸ್ಥಾನ ರಿಜ್ವಾನ್ ಹರ್ಷದ್ ಗೆ ಸಿಕ್ಕಿತು ೨೦೨೪ರ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಟಿಕೆಟ್ ಅನ್ನು ಮೈಸೂರಿನಿಂದ ಕೇಳಿದರು. ಟಿಕೆಟ್ ಕೈ ತಪ್ಪಿತು. ತದ ನಂತರ ಎಂಎಲ್ಸಿ ಟಿಕೆಟ್ ಕೇಳಿದರು. ಅದು ಕೂಡ ಲಭಿಸಲಿಲ್ಲ. ಪಕ್ಷದ ನಿಷ್ಠಾವಂತನಿಗೆ ಸೂಕ್ತಸ್ಥಾನ ಮಾನ ದೊರೆಯದಿದ್ದು ಅತೀವ ಬೇಸರವನ್ನುಂಟು ಮಾಡಿದೆ ಎಂದು ಹೇಳಿದ್ದಾರೆ.
ಸೂರಜ್ ಹೆಗ್ಡೆ ಪುತ್ರ ರಾಷ್ಟಿಯ ಯುವ ಕಾಂಗ್ರೆಸ್ ವಕ್ತರರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಮುಂಬರುವ ದಿನಗಳಲ್ಲಿ ಇವರಿಗೆ ಸೂಕ್ತ ಸ್ಥಾನ ಮಾನ ನೀಡಿ ದೇವರಾಜ ಅರಸ್ ಕುಟುಂಬದ ಕುಡಿಗೆ ಅವಕಾಶ ಕಲ್ಪಿಸಿಕೊಟ್ಟು ಮೃತರ ಆತ್ಮಕ್ಕೆ ಶಾಂತಿ ಸಿಗುವಂತೆ ಮಾಡಬೇಕು ಎಂದು ಕಾಂಗ್ರೆಸ್ ಹೈಕಮಾಂಡ್ ಅನ್ನು ಒತ್ತಾಯಿಸಿದ್ದಾರೆ.
ಕೆಪಿಸಿಸಿ ಸಂಯೋಜಕ ಶಿವನಾಗಪ್ಪ, ಮೈಸೂರು ಜಿಲ್ಲಾ ಕಾಂಗ್ರೆಸ್ ಕಿಸಾನ್ ಘಟಕದ ಅಧ್ಯಕ್ಷ ಜಿ ಮಹದೇವ, ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿ ಮೈಸೂರು ನಗರಧ್ಯಕ್ಷ ಜೆ ಪ್ರಭು ಅಂತಿಮ ದರ್ಶನ ಪಡೆದು ಗೌರವ ಸಲ್ಲಿಸಿದರು.