1.50 ಕೋಟಿ ರೂ, ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಚಾಲನೆ 

ಮಣಿಕಂಠ ಜನತಾ ರಾಯಭಾರಿ
1 Min Read

 *ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರಿಂದ ಭೂಮಿಪೂಜೆ

*ಜಾಲಹಳ್ಳಿಹುಂಡಿ, ಕುಲುಮೆ ರಸ್ತೆ ಅಭಿವೃದ್ದಿಗೆ ಗುದ್ದಲಿಪೂಜೆ 

ಚಾಮರಾಜನಗರ: ನಗರದ ಜಾಲಹಳ್ಳಿಹಳ್ಳಿಹುಂಡಿ, ಹಾಗೂ ರಾಮಸಮುದ್ರದ ಕುಲುಮೆ ರಸ್ತೆಗೆ ಸಂಪರ್ಕ ಕಲ್ಪಿಸುವ, 1.50 ಕೋಟಿ ರೂ. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಭೂಮಿಪೂಜೆ ನೆರವೇರಿಸಿದರು.

ಬಳಿಕ ಶಾಸಕ ಪುಟ್ಟರಂಗಶೆಟ್ಟಿ ಮಾತನಾಡಿ, ಎಸ್.ಎಫ್.ಸಿ ವಿಶೇಷಾನುದಡಿಯಲ್ಲಿ ಜಾಲಹಳ್ಳಿಹುಂಡಿಯಿಂದ ಮೂಡ್ಲುಮೋಳೆ ಗ್ರಾಮಕ್ಕೆ ಹೋಗುವ ರಸ್ತೆ ಅಭಿವೃದ್ಧಿಗೆ 80 ಲಕ್ಷ ರೂ, ಹಾಗೂ ಸುಮಾರು 70 ಲಕ್ಷ ರೂ, ವೆಚ್ಚದಲ್ಲಿ ಪುಟ್ಟಮ್ಮಣ್ಣಿ ಉದ್ಯಾನದಿಂದ ವಿ.ಎಚ್.ಪಿ ಶಾಲೆ ಮಾರ್ಗವಾಗಿ ರಾಮಸಮುದ್ರದ ಕುಲುಮೆ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ದಿಗೆ ಕಾಮಗಾರಿಗಳನ್ನು ಒಳಗೊಂಡಂತೆ ಒಟ್ಟು 1.50 ಕೋಟಿ ರೂ. ಮಂಜೂರಾಗಿದೆ ಎಂದು ತಿಳಿಸಿದರು.

ಈ ಮೇಲ್ಕಂಡ ಎರಡು ರಸ್ತೆಗಳು ತುಂಬ ಹದಗೆಟ್ಟಿದ್ದು, ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗಿತ್ತು. ಬಡಾವಣೆಗೆ ಭೇಟಿನೀಡಿ, ಪರಿಶೀಲಿಸಿ, ಸುಸಜ್ಜಿತ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಗಿದೆ. ವಾರ್ಡಿನ ನಿವಾಸಿಗಳು ಗುಣಮಟ್ಟದ ರಸ್ತೆ ನಿರ್ಮಿಸಿಕೊಳ್ಳುವಂತೆ ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಜಾಲಹಳ್ಳಿ ಹುಂಡಿ ಗ್ರಾಮದಲ್ಲಿ ೫೦ ಲಕ್ಷ ರೂ, ವೆಚ್ಚದಲ್ಲಿ ಉಪ್ಪಾರ ಸಮುದಾಯ ಭವನ ಕಾಮಗಾರಿಗೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಭೂಮಿ ಪೂಜೆ ನೆರವೇರಿಸಿದರು.

ಈ ವೇಳೆ ಯಜಮಾನರಾದ ಸಿದ್ದರಾಜು, ಮಹದೇವು, ಗುರುಸಿದ್ದಶೆಟ್ಟಿ, ಮಹದೇವಶೆಟ್ಟಿ, ರಾಜೇಶ್, ಶಿವಣ್ಣ, ರಾಜು, ಗುಂಡು, ನಗರಸಭೆ ಆಯುಕ್ತ ಪರಶುರಾಮ್ ಛಲವಾದಿ, ಎಇಇ ಪ್ರಕಾಶ್, ಜೆಇ ರಾಜು, ಆರೋಗ್ಯಧಿಕಾರಿ ಮಂಜು, ಗುತ್ತಿಗೆದಾರ ನಾರಾಯಣ್ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.

Share this Article
Leave a comment