ಶಾಸಕ ಮಂಜುನಾಥ್ ಅವರಿಂದ ಮಧ್ಯರಂಗನಾಥ ದೇವಾಲಯ ಕಾಮಗಾರಿ ಪರಿಶೀಲನೆ

ಮಣಿಕಂಠ ಜನತಾ ರಾಯಭಾರಿ
1 Min Read

ಕೊಳ್ಳೇಗಾಲ: ತಾಲೂಕಿನ ಶಿವನ ಸಮುದ್ರದಲ್ಲಿರುವ ಸುಪ್ರಸಿದ್ದ ಮಧ್ಯರಂಗನಾಥ ದೇವಾಲಯ ಲೋಕಾರ್ಪಣೆಗೆ ಸಿದ್ಧತೆಗೊಂಡಿರುವ ಹಿನ್ನೆಲೆಯಲ್ಲಿ ಹನೂರು ಶಾಸಕ ಎಂ.ಆರ್.ಮಂಜುನಾಥ್ ಶನಿವಾರ ಭೇಟಿನೀಡಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಸೂಚನೆ ನೀಡಿದರು.

ತಾಲ್ಲೂಕಿನ ಶಿವನಸಮುದ್ರದ ಜಗನ್ಮೋಹನ ರಂಗನಾಥಸ್ವಾಮಿ ದೇವಾಲಯದ ಜೀರ್ಣೋದ್ಧಾರ ಕಾಮಗಾರಿ ಪ್ರಾಚ್ಯವಸ್ತು ಇಲಾಖೆ ವತಿಯಿಂದ 2.58 ಕೋಟಿ ರೂ, ವೆಚ್ಚದಲ್ಲಿ ನಡೆಯುತ್ತಿದೆ. ದೇವಾಲಯದ ಸುತ್ತುಗೋಡೆ ದುರಸ್ತಿ, ಗರ್ಭಗುಡಿ ಚಪ್ಪರ ನಿರ್ಮಾಣ, ದರ್ಶನಕ್ಕೆ ನಿಲ್ಲುವ ಭಕ್ತರ ಕ್ಯೂ ಲೈನ್ ನಿರ್ಮಾಣಕ್ಕೆ ಸ್ಟೇನ್ಲೆಸ್ ಸ್ಟೀಲ್ ಅಳವಡಿಕೆ, ದೇವಾಲಯದಲ್ಲಿ ಅಳವಡಿಸಲಾಗಿರುವ ಕಲ್ಲುಗಳಿಗೆ ಸ್ಯಾನ್ ಬ್ಲಾಸ್ಟ್ ಮಾಡಿಸುವ ಮೂಲಕ ಕಾಮಗಾರಿಗೆ ಆಧುನಿಕ ಸ್ಪರ್ಶ ನೀಡಲಾಗುತ್ತಿದೆ.

ಪ್ರಾಚ್ಯವಸ್ತು ಇಲಾಖೆ ಹಾಗೂ ದಾನಿಗಳ ನೆರವಿನಿಂದ ಸುಮಾರು 5.38 ಕೋಟಿ ರೂ, ಅಧಿಕ ವೆಚ್ಚದಲ್ಲಿ ಜೀರ್ಣೋದ್ಧಾರ ಹಾಗೂ ಪುನರ್ ನಿರ್ಮಾಣವಾಗಿರುವ ದೇವಾಲಯಗಳಲ್ಲಿ ಸಣ್ಣಪುಟ್ಟ ಕೆಲಸ ಬಿಟ್ಟರೆ, ಈ 2 ದೇವಾಲಯಗಳ ಕಾಮಗಾರಿ ಈಗಾಗಲೇ ಬಹುತೇಕ ಮುಕ್ತಾಯ ಅಂತದಲ್ಲಿದ್ದು, ಶ್ರೀಘ್ರವಾಗಿ ಇನ್ನುಳಿದ ಕಾಮಗಾರಿಗಳನ್ನು ಮುಕ್ತಾಯ ಗೊಳಿಸುವಂತೆ ಶಾಸಕ ಮಂಜುನಾಥ್ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಕೊಳ್ಳೇಗಾಲ ಉಪ ವಿಭಾಗಾಧಿಕಾರಿ ದಿನೇಶ್ ಕುಮಾರ್ ಮೀನಾ, ತಹಸೀಲ್ದಾರ್ ಬಸವರಾಜು,
ಲೋಕೋಪಯೋಗಿ ಎಇಇ ಪುರುಷೋತ್ತಮ್, ಸರ್ವೇ ಇಲಾಖೆಯ ನಟರಾಜು, ಧಾರ್ಮಿಕ ದತ್ತಿ ಇಲಾಖೆಯ ಸುರೇಶ್, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಲ್ಲೇಶ್, ಪ್ರಭುಸ್ವಾಮಿ, ಶಾಂತರಾಜು, ನಾಗರಾಜು, ಜಮೀರ್, ಗುಲಾಬಿ, ಲಿಂಗರಾಜು, ರವಿ, ಮಂಟ್ಯಾ,ಗೋವಿಂದ,ಚನ್ನಲಿಂಗನಹಳ್ಳಿ ವೆಂಕಟೇಶ್, ಹಾಗೂ ಇನ್ನಿತರ ಅಧಿಕಾರಿಗಳು ಮುಖಂಡರು ಹಾಜರಿದ್ದರು.

Share this Article
Leave a comment