ಮೇ 22 ಶ್ರೀ ಬಸವೇಶ್ವರರ ಜಯಂತೋತ್ಸವ ಪ್ರಚಾರ ಸಭೆಗೆ ಚಾಲನೆ 

ಮಣಿಕಂಠ ಜನತಾ ರಾಯಭಾರಿ
2 Min Read

ಚಾಮರಾಜನಗರ: ಜಿಲ್ಲಾ ಕೇಂದ್ರದಲ್ಲಿ ನಡೆಯುವ ಜಿಲ್ಲಾ ಮಟ್ಟದ ಬಸವ ಜಯಂತೋತ್ಸವ ಮೇ 22 ರಂದು ನಡೆಯಲಿದ್ದು, ಪ್ರತಿ ಹಳ್ಳಿ ಹಳ್ಳಿಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಬಂಧುಗಳು ಹಾಗೂ ಬಸವಣ್ಣನವರ ಅನುಯಾಯಿಗಳು ಆಗಮಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡಬೇಕೆಂದು ಬಸವ ಬಳಗದ ಒಕ್ಕೂಟದ ಅಧ್ಯಕ್ಷ ಹಾಗೂ ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ ಮನವಿ ಮಾಡಿದರು.

ತಾಲೂಕಿನ ಸಂತೇಮರಹಳ್ಳಿ ಶ್ರೀ ಶಿವಕುಮಾರ ಸ್ವಾಮಿ ವೃತ್ತದಲ್ಲಿ ಹೋಬಳಿ ವ್ಯಾಪ್ತಿಯ ಪ್ರಚಾರಕ್ಕೆ ಮಂಗಳವಾರ ಬೆಳಗ್ಗೆ ಚಾಲನೆ ನೀಡಿ ಅವರು ಮಾತನಾಡಿದರು.

ಚಾಮರಾಜನಗರದ ಶ್ರೀಸಿದ್ದಮಲ್ಲೇಶ್ವರ ವಿರಕ್ತ ಮಠ ಹಾಗೂ ಬಸವ ಬಳಗದ ಒಕ್ಕೂಟದ ವತಿಯಿಂದ ಮೇ 22 ರಂದು ನಡೆಯಲಿರುವ ಕರ್ನಾಟಕ ಸಾಂಸ್ಕೃತಿಕ ನಾಯಕ, ವಿಶ್ವಗುರು, ಜಗಜ್ಯೋತಿ ಬಸವೇಶ್ವರರ ಜಯಂತೋತ್ಸವ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತಿದೆ. ಈ ಕಾರ್ಯಕ್ರಮಗಳಿಗೆ ಆಹ್ವಾನ ನೀಡಲು ಜಿಲ್ಲೆಯ ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೂ ಒಕ್ಕೂಟದ ಪದಾಧಿಕಾರಿಗಳು ಖುದ್ದ ಭೇಟಿ ನೀಡಿ, ಆಹ್ವಾನಿಸಲಾಗುತ್ತಿದೆ. ಒಂದು ವಾರಗಳ ಕಾಲ ಐದು ತಾಲೂಕುಗಳಲ್ಲಿ ಪ್ರಚಾರ ನಡೆಸಲಾಗುತ್ತದೆ. ಹೀಗಾಗಿ ಗ್ರಮದ ಮುಖಂಡರು ಸಕ್ರಿಯವಾಗಿ ಈ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ಅಖಿಲ ಭಾರತೀಯ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಮೂಡ್ಲುಪುರ ನಂದೀಶ್ ಮಾತನಾಡಿ, ಶ್ರೀ ಸಿದ್ದಮಲ್ಲೇಶ್ವರ ಮಠ, ಬಸವ ಬಳಗದ ಒಕ್ಕೂಟ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಬಸವ ಜಯಂತಿ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ಸುತ್ತೂರು ಶ್ರೀಗಳು ಹಾಗೂ ಜಿಲ್ಲೆಯ ಎಲ್ಲಾ ಮಠಾಧಿಪತಿಗಳ ನೇತೃತ್ವದಲ್ಲಿ ನಡೆಯಲಿದ್ದು, ಜಿಲ್ಲೆಯ ಬಸವ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.

ರಾಷ್ಟ್ರೀಯ ಕಾರ್ಯಕಾರಣಿ ಸದಸ್ಯ ಎನ್‌ರಿಎಚ್ ಮಹದೇವಸ್ವಾಮಿ ಮಾತನಾಡಿ, ಜಿಲ್ಲೆಯಲ್ಲಿ ಪ್ರಥಮವಾಗಿ ಎಲ್ಲಾ ವೀರಶೈವ ಲಿಂಗಾಯತ ಸಂಘಟನೆಗಳ ಸಹಭಾಗಿತ್ವದಲ್ಲಿ ಬಸವ ಬಳಗದ ಒಕ್ಕೂಟವನ್ನು ರಚನೆ ಮಾಡಿಕೊಂಡು ಜಿಲ್ಲಾ ಕೇಂದ್ರದಲ್ಲಿ ಮೇ 22 ರಂದು ಅದ್ದೂರಿಯಾಗಿ ನಡೆಯಲಿರುವ ಬಸವ ಜಯಂತಿ ಕಾರ್ಯಕ್ರಮ ಯಶಸ್ವಿಗೆ ಪ್ರತಿಯೊಬ್ಬರ ಪಾತ್ರ ಬಹಳ ಮುಖ್ಯವಾಗಿದೆ ಎಂದರು.

ಪ್ರತಿ ಮನೆಗೂ ಕರ ಪತ್ರವನ್ನು ತಲುಪಿಸುವ ಜೊತೆಗೆ ಅವರನ್ನು ಕಾರ್ಯಕ್ರಮಕ್ಕೆ ಬರುವಂತೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.

ಸಂತೇಮರಹಳ್ಳಿಯ ವ್ಯಾಪ್ತಿಯ ಸಂತೇಮರಹಳ್ಳಿ, ಬಸವಟ್ಟಿ, ಕಾವುದವಾಡಿ, ತೆಳ್ಳನೂರು, ಕಮರವಾಡಿ, ಬಾಣಹಳ್ಳೀ. ಬಾಗಳಿ, ಜನ್ನೂರು ಹೊಸೂರು, ಹಳ್ಳಿಕೆರೆಹುಂಡಿ, ನವಿಲೂರು, ಆಲ್ದೂರು, ಉಮ್ಮತ್ತೂರು, ದೇಮಹಳ್ಳಿ, ಕಮರವಾಡಿ, ಕುದೇರು, ಹೆಗ್ಗವಾಡಿಪುರ ಸೇರಿದಂತೆ ಸಂತೇಮಹರಳ್ಳಿ ವ್ಯಾಪ್ತಿಯ ಅನೇಕ ಗ್ರಾಮಗಳಿಗೆ ಸಮಿತಿಯ ಪದಾಧಿಕಾರಿಗಳು ಗ್ರಾಮದ ಮುಖಂಡರನ್ನು ಭೇಟಿ ಮಾಡಿ ಕರಪತ್ರ, ಪೊಸ್ಟರ್‌ಗಳನ್ನು ನೀಡಿ, ವ್ಯಾಪಕ ಪ್ರಚಾರ ಮಾಡಿ, ಗ್ರಾಮಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಬಸವ ಭಕ್ತರು ಆಗಮಿಸಬೇಕು ಎಂದು ಮನವಿ ಮಾಡಿದರು.

ಈ ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೊಡ್ಡರಾಯಪೇಟೆ ಗಿರೀಶ್, ಜಿಲ್ಲಾ ನಿರ್ದೇಶಕರಾದ ಕಾವುದವಾಡಿ ಗುರು, ಸುಧಾಮಲ್ಲಣ್ಣ, ಕೆ.ವೀರಭದ್ರಸ್ವಾಮಿ, ಮೂಡ್ಲೂಪುರ ನಂದೀಶ್, ಎಪಿಎಂಸಿ ನಿರ್ದೇಶಕ ಅಲೂರು ಪ್ರದೀಪ್, ಕೆಂಪನಪುರ ಶಿವಶಂಕರ್, ಡಿ.ಎಸ್.ಶಂಕರಮೂರ್ತಿ, ಹೊನ್ನೂರು ಬಸವಣ್ಣ, ಹೆಗ್ಗೋಠಾರ ವಿಜಯ್, ಆಲ್ದೂರು ರಾಜಶೇಖರ್, ರಮೇಶ್ ಬಾಬು, ಅಲೂರು ಬಾಬು, ವಕೀಲ ಪ್ರಥ್ವಿ, ಶ್ರೀಕಂಠಮೂರ್ತಿ, ಡೇರಿ ಅಧ್ಯಕ್ಷ ಉಮ್ಮತ್ತೂರು ಸಿದ್ದಪ್ಪ, ಮಹೇಶ್ ಹಾಗೂ ಇತರರು ಹಾಜರಿದ್ದರು.

 

Share this Article
Leave a comment