ಹನೂರು: ಅಪರಿಚಿತ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಐದು ಕುರಿ ಮರಿಗಳು ಸ್ಥಳದಲ್ಲೇ ಮೃತ ಪಟ್ಟಿದ್ದು ಕಾರು ಚಾಲಕ ನಿಲ್ಲಿಸದೆ ಪರಾರಿಯಾಗಿರುವ ಘಟನೆ ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಧುವನಹಳ್ಳಿ ಗ್ರಾಮದ ಸಮೀಪ ನಡೆದಿದೆ.
ಕೊಳ್ಳೇಗಾಲ ಹನೂರು ಬೈಪಾಸ್ ರಸ್ತೆಯಲ್ಲಿ ಗುರುವಾರ ಮದ್ಯಾಹ್ನ 12 ಗಂಟೆಯ ವೇಳೆಯಲ್ಲಿ ಹನೂರು ಕಡೆಯಿಂದ ಕೊಳ್ಳೇಗಾಲದ ಕಡೆಗೆ ತೆರಳುತ್ತಿದ್ದ ಕಾರೊಂದು ಮಧುವನಹಳ್ಳಿ ನರೀಪುರ ಬೈ ಪಾಸ್ ರಸ್ತೆಯಲ್ಲಿ ಕುರಿಗಳಿಗೆ ಡಿಕ್ಕಿ ಹೊಡೆದುಕೊಂಡು ಹೋಗಿದೆ. ಪರಿಣಾಮವಾಗಿ ವೃದ್ಧ ದಂಪತಿಗಳ 5 ಕುರಿಗಳು ಸಾವನ್ನಪ್ಪಿದೆ.
ಮಧುವನಹಳ್ಳಿ ಗ್ರಾಮದ ವೃದ್ಧ ದಂಪತಿಗಳಾದ ಮಾದಯ್ಯ ಮತ್ತು ಬೋರಮ್ಮ ಅವರು ಕುರಿ ಮೇಯಿಸಿ ಜೀವನ ನಡೆಸುತ್ತಿದ್ದು, ತಮ್ಮ ಐದು ಕುರಿಗಳ ಮೇಲೆ ಅಪರಿಚಿತ ಕಾರು ಅಪಘಾತ ನಡೆಸಿ ಪರಾರಿಯಾಗಿರುವುದರಿಂದ ವೃದ್ಧ ದಂಪತಿಗಳು ತಮ್ಮ ಅಳಲನ್ನು ತೋಡಿಕೊಂಡರು. ನಮ್ಮ ಜೀವನಕ್ಕೆ ಆಧಾರವಾಗಿದ್ದ ಕುರಿ ಮರಿಗಳು ಸಾವನಪ್ಪಿವೆ ಅಪಘಾತವೆಸಗಿ ಪರಾರಿಯಾಗಿರುವವರನ್ನು ಪೊಲೀಸ್ ಇಲಾಖೆ ಕಂಡು ಹಿಡಿದು ನಮಗೆ ಪರಿಹಾರ ಕೊಡಿಸಬೇಕೆಂದು ಅಂಗಲಾಚಿ ಬೇಡಿಕೊಂಡರು.
ಅಪಘಾತ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದರು.