ಬಸವ ಜಯಂತಿ ಅಂಗವಾಗಿ ಗಮನಸೆಳೆದ ಕಾರು ರ್ಯಾಲಿ

ಮಣಿಕಂಠ ಜನತಾ ರಾಯಭಾರಿ
1 Min Read

ಚಾಮರಾಜನಗರ: ನಗರದಲ್ಲಿ ಮೇ 21 ಮತ್ತು 22 ರಂದು ನಡೆಯಲಿರುವ ಬಸವ ಜಯಂತಿ ಅಂಗವಾಗಿ ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ಯುವ ಘಟಕದ ವತಿಯಿಂದ ಇದೇ ಮೊದಲ ಬಾರಿಗೆ ಆಯೋಜಿಸಿದ್ದ ಕಾರು ರ್ಯಾಲಿ ಗಮನಸೆಳೆಯಿತು.

ನಗರದ ಜಿಲ್ಲಾಡಳಿತ ಭವನದಲ್ಲಿರುವ ಜಗಜ್ಯೋತಿ ಶ್ರೀಬಸವೇಶ್ವರರ ಪುತ್ಥಳಿಗೆ‌ ಮಾಲಾರ್ಪಣೆ ಮಾಡುವ ಮೂಲಕ ಕಾರು ರ್ಯಾಲಿಗೆ ಶ್ರೀ ಚನ್ನಬಸವ ಸ್ವಾಮೀಜಿ ಚಾಲನೆ ನೀಡಿದರು. ಬಳಿಕ ನಗರದ ಪ್ರಮುಖ ಬೀದಿಗಳಲ್ಲಿ ರ್ಯಾಲಿ ನಡೆಯಿತು.

ಜಿಲ್ಲಾಡಳಿತ ಭವನ, ಬಿ.ರಾಚಯ್ಯ ಜೋಡಿ ರಸ್ತೆ, ರಾಮಸಮುದ್ರ, ಡಿವೈಎಪಿ ವೃತ್ತ, ಪಚ್ಚಪ್ಪ ವೃತ್ತ, KSRTC ಬಸ್ ನಿಲ್ದಾಣ, ಗುಂಡ್ಲುಪೇಟೆ ವೃತ್ತ, ದೊಡ್ಡ ಅಂಗಡಿ ಬೀದಿ, ಚಿಕ್ಕ ಅಂಗಡಿ ಬೀದಿ, ಸಂತೆಮರಳ್ಳಿ ವೃತ್ತ, ಡಿವಿಜನ್ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ರ್ಯಾಲಿ ನಡೆದು ನಗರದ ಶ್ರೀ ಸಿದ್ಧ ಮಲ್ಲೇಶ್ವರ ವಿರಕ್ತ ಮಠದಲ್ಲಿ ಅಂತ್ಯವಾಯಿತು. ರ್ಯಾಲಿಯಲ್ಲಿ ನೂರಕ್ಕೂ ಹೆಚ್ಚು ಕಾರುಗಳು ಭಾಗವಹಿಸಿದ್ದವು.

ಕಾರ್ಯಕ್ರಮದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಮೂಡ್ಲುಪುರ ನಂದೀಶ್, ಬಸವ ಒಕ್ಕೂಟದ ಅಧ್ಯಕ್ಷ ಪಿ.ಮರಿಸ್ವಾಮಿ, ಯುವ ಘಟಕದ ರಾಜ್ಯ ಕಾರ್ಯದರ್ಶಿ ಪ್ರಣಯ್, ಜಿಲ್ಲಾ ಕಾರ್ಯದರ್ಶಿ ವಿಜಯ್, ಉಪಾಧ್ಯಕ್ಷ ಹರಿಪ್ರಸಾದ್, ರಾಜು, ಮಹಾಸಭೆ ತಾಲ್ಲೂಕು ಅಧ್ಯಕ್ಷ ಬಾಲಚಂದ್ರ ಮೂರ್ತಿ, ಗುಂಡ್ಲುಪೇಟೆ ತಾಲ್ಲೂಕು ಅಧ್ಯಕ್ಷ ರಾಜಣ್ಣ, ಜಿಲ್ಲಾ ನಿರ್ದೇಶಕರಾದ ಯುವ ಗಿರೀಶ್, ಕಾವುದವಾಡಿ ಗುರು, ಬಿಸಲವಾಡಿ ಉಮೇಶ್, ಪುಣಜನೂರು ಗಿರೀಶ್, ಮುಖಂಡರಾದ ಆಲೂರು ಪ್ರದೀಪ್, ಬಿ.ಕೆ‌.ರವಿಕುಮಾರ್, ಕರಿನಂಜನಪುರ ವೀರಭದ್ರಸ್ವಾಮಿ, ಪ್ರಭುಸ್ವಾಮಿ, ಹೊಸೂರು ಜಗದೀಶ್, ಉತ್ತಳ್ಳಿ ಮಹೇಶ್ ಹಾಗೂ ಇತರರು ಭಾಗಿಯಾಗಿದ್ದರು.

Share this Article
Leave a comment