ಶಾಸಕ ಪುಟ್ಟರಂಗಶೆಟ್ಟಿ ಅವರಿಗೆ ಸಚಿವಸ್ಥಾನ ನೀಡುವಂತೆ ವಿಶೇಷ ಪೂಜೆ

ಮಣಿಕಂಠ ಜನತಾ ರಾಯಭಾರಿ
1 Min Read

ಯಳಂದೂರು: ತಾಲೂಕಿನ ಕಂದಹಳ್ಳಿ ಗ್ರಾಮದ ಶ್ರೀ ಮಹದೇಶ್ವರ ದೇವಸ್ಥಾನದಲ್ಲಿ ಉಪ್ಪಾರ ಸಮುದಾಯದ ಕಾಂಗ್ರೆಸ್ ಮುಖಂಡರುಗಳಿಂದ ಚಾಮರಾಜನಗರ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರಿಗೆ ಸಚಿವಸ್ಥಾನ ನೀಡಲಿ ಎಂದು ವಿಶೇಷ ಪೂಜೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮದ್ದೂರು ರಂಗಸ್ವಾಮಿ ಮಾತನಾಡಿ, ಜಿಲ್ಲೆಯಲ್ಲಿ ಸತತವಾಗಿ ನಾಲ್ಕು ಬಾರಿ ಶಾಸಕರಾಗಿರುವ ಪುಟ್ಟರಂಗ ಶೆಟ್ಟಿ ಅವರಿಗೆ ಕಾಂಗ್ರೆಸ್ ಸರ್ಕಾರ ಸಚಿವಸ್ಥಾನವನ್ನು ನೀಡಬೇಕು. ಒಂದುವೇಳೆ ಸರ್ಕಾರ ನಿರಾಕರಿಸಿದರೆ ಉಪ್ಪಾರ ಸಮುದಾಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟ ರೂಪಿಸಲಿದೆ ಎಂದರು.

ಮುಖಂಡರಾದ ವೈ.ಬಿ.ಮಹೇಶ್ ಮಾತನಾಡಿ, ಪುಟ್ಟರಂಗಶೆಟ್ಟಿ ಅವರು ಚಾಮರಾಜನಗರದಲ್ಲಿ ಘಟನುಗಾಟಿ ನಾಯಕರನ್ನು ಸೋಲಿಸಿ ನಾಲ್ಕು ಬಾರಿ ಗೆದ್ದು ಸೋಲಿಲ್ಲದ ಸರದಾರರಾಗಿದ್ದಾರೆ. ಇಂತಹ ಹಿಂದುಳಿದ ಸಮಾಜದ ನಾಯಕ ಉಪ್ಪಾರ ಸಮುದಾಯದ ಧ್ವನಿ ಆಗಿರುವ ಪುಟ್ಟರಂಗ ಶೆಟ್ಟಿ ರವರಿಗೆ ಸಚಿವಸ್ಥಾನವನ್ನು ನೀಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಪುಟ್ಟರಂಗ ಶೆಟ್ಟಿ ಅಭಿಮಾನಿಬಳಗದ ತಾಲೂಕು ಅಧ್ಯಕ್ಷ ಯರಿಯೂರು ಕಿರಣ್, ಯಜಮಾನರಾದ ನಂಜುಂಡ ಶೆಟ್ಟಿ, ಮಹಾದೇವ, ಶಾಂತರಾಜು, ರಾಚಶೆಟ್ಟಿ, ಸ್ವಾಮಿ, ಪಿ.ಮಾದೇಶ್, ನಂಜುಂಡಸ್ವಾಮಿ, ನಾಗರಾಜು, ನಾಗೇಗೌಡ, ಮಂಜುನಾಥ್, ಚಂದ್ರುಗೌಡ ಹಾಜರಿದ್ದರು.

Share this Article
Leave a comment