ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಲಿ ಎಂದು ವಿಶೇಷ ಪೂಜೆ

ಮಣಿಕಂಠ ಜನತಾ ರಾಯಭಾರಿ
1 Min Read

ಚಾಮರಾಜನಗರ: ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಲಿ ಎಂದು ಶ್ರೀಚಾಮರಾಜೇಶ್ವರಸ್ವಾಮಿಗೆ ಶುಕ್ರವಾರ ವಿಶೇಷ ಪೂಜೆ ಸಲ್ಲಿಸಲಾಯಿತು.

ನಗರದ ಶ್ರೀ ಚಾಮರಾಜೇಶ್ವರಸ್ವಾಮಿ ದೇವಸ್ಥಾನದ ಮುಂಭಾಗ ಜಮಾಯಿಸಿದ ಡಿ‌.ಕೆ.ಶಿವಕುಮಾರ್ ಅಭಿಮಾನಿ ಬಳಗದವರು ಶ್ರೀಚಾಮರಾಜೇಶ್ವರನಿಗೆ ವಿಶೇಷ ಪೂಜೆ ನೆರವೇರಿಸಿದರು. ಬಳಿಕ ಇಡುಗಾಯಿ ಹೊಡೆದು, ವಿವಿಧ ಘೋಷಣೆಗಳನ್ನು ಕೂಗುವ ಮೂಲಕ ಡಿ.ಕೆ.ಶಿವಕುಮಾರ್ ಅವರು ರಾಜ್ಯದ ಮುಖ್ಯಮಂತ್ರಿಯಾಗಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್ ಅಭಿಮಾನಿ ಬಳಗದ ಅಧ್ಯಕ್ಷ ಕೆ.ಪುಟ್ಟಸ್ವಾಮಿಗೌಡ ಮಾತನಾಡಿ, ಪ್ರಯತ್ನ ವಿಫಲವಾದರೂ, ಪ್ರಾರ್ಥನೆ ವಿಫಲವಾಗುವುದಿಲ್ಲ ಎಂಬ ಡಿ.ಕೆ.ಶಿವಕುಮಾರ್ ಅವರ ಮಾತು ಸತ್ಯವಾಗುತ್ತಿದೆ. ಅವರು ಅಪಾರ ದೈವಭಕ್ತರಾಗಿದ್ದು, ಅವರ ಪ್ರಾರ್ಥನೆಗೆ ಫಲ ದೊರಕಿದಂತಾಗಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ರಾಜಕಾರಣ ಮಾಡುವ ಪ್ರತಿಯೊಬ್ಬರಿಗೂ, ಡಿ.ಕೆ.ಶಿವಕುಮಾರ್ ಮಾದರಿಯಾಗಿದ್ದಾರೆ. ಹಿಂದುತ್ವದ ಹೆಸರಿನಲ್ಲಿ ರಾಜಕಾರಣ ಮಾಡುವವರೂ ಕೂಡ ಇವರನ್ನು ನೋಡಿ ಕಲಿಯಬೇಕಿದೆ. ರಾಜ್ಯದ ಒಕ್ಕಲಿಗ ಸಮುದಾಯದಲ್ಲಿ ಎಚ್.ಡಿ.ದೇವೆಗೌಡ ಮತ್ತು ಕುಮಾರಸ್ವಾಮಿ ಅವರಿಗಿಂತಲೂ ಒಂದು ಕೈ ಮೇಲಾಗಿದ್ದಾರೆ ಎಂದರು.

ಕನ್ನಡಪರ ಸಂಘಟನೆ ಮುಖಂಡ ಚಾ.ರಂ.ಶ್ರೀನಿವಾಸ್ ಗೌಡ ಮಾತನಾಡಿ, ಡಿ.ಕೆ.ಶಿವಕುಮಾರ್ ಅವರು ರಾಜ್ಯದ ಮುಖ್ಯಮಂತ್ರಿಯಾಗಲಿ ಎಂದು ಕನ್ನಡಪರ ಸಂಘಟನೆಗಳ ವತಿಯಿಂದ ಶ್ರೀ ಚಾಮರಾಜೇಶ್ವರನಿಗೆ ವಿಶೇಷ ಪೂಜೆ ನೆರವೇರಿಸಲಾಗಿತ್ತು. ಅದು ಇಂದಿಗೆ ಫಲ ನೀಡಿದೆ ಎಂದರೇ ತಪ್ಪಾಗಲಾರದು. ಅವರ ಅವಧಿಯಲ್ಲಿ ಕರ್ನಾಟಕ ಸರ್ವತೋಮುಖ ಅಭಿವೃದ್ಧಿ ಹೊಂದಲಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ಪಣ್ಯದಹುಂಡಿ ರಾಜು, ಕರಿಯನಕಟ್ಟೆ ಚೆನ್ನಮುತ್ತು, ರಘು, ಸೋಮಣ್ಣ, ಪ್ರಕಾಶ್, ಚಿನ್ನಸ್ವಾಮಿ, ಗೋವಿಂದೇಗೌಡ, ಶಿವಲಿಂಗೇಗೌಡ, ಮಹೇಶ್ ಗೌಡ, ನಾಗೇಂದ್ರ, ಸೋಮು, ದೊಡ್ಡರಾಯಪೇಟೆ ರವಿ, ನಿಜ ಧ್ವನಿ ಗೋವಿಂದರಾಜು, ಸಿ.ಕೆ.ರವಿಕುಮಾರ್, ರವಿಚಂದ್ರ ಪ್ರಸಾದ್ ಕಹಳೆ ಹಾಗೂ ಇತರರು ಹಾಜರಿದ್ದರು.

Share this Article
Leave a comment