ಜೊತೆಗೆ ಕುಳಿತು ಊಟ ಮಾಡಿದ ಸಿದ್ದು-ಡಿಕೆಶಿ

ಮಣಿಕಂಠ ಜನತಾ ರಾಯಭಾರಿ
1 Min Read

ದೆಹಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಿ ದೆಹಲಿಗೆ ಹೊರಟಿದ್ದು, ಡಿಕೆಶಿ ಜೊತೆಗೆ ಊಟ ಮಾಡುವ ಪೋಟೋ ಸಖತ್ ವೈರಲ್ ಆಗಿದೆ.

ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗುತ್ತಾರಾ? ಯಾರು ಸಚಿವರಾಗುತ್ತಾರೆ? ಎಂಬ ಪ್ರಶ್ನೆಗಳಿಗೆ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರು ಜೊತೆಗೆ ಕುಳಿತು ಊಟ ಮಾಡುವ ಪೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ತಮ್ಮ ಪಕ್ಷ ನಿಷ್ಠೆ ಹಾಗೂ ಒಗ್ಗಟ್ಟಿನ ಮಂತ್ರವನ್ನು ಸಾರಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರೊಂದಿಗೆ ಕೆ.ಎಚ್.ಮುನಿಯಪ್ಪ ಹಾಗೂ ಯತೀಂದ್ರ ಸಿದ್ದರಾಮಯ್ಯ ಅವರು ಕುಳಿತು ಊಟ ಮಾಡುತ್ತಿದ್ದು, ಮುಂದಿನ 2 ವರ್ಷದ ಸರ್ಕಾರ ಯಾರ ಅಣತಿಯಂತೆ ನಡೆಯಲಿದೆ ಎಂಬುದಕ್ಕೆ ಈ ಪೋಟೋ ಉದಾಹರಣೆಯಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಜೋರಾಗಿದೆ.

Share this Article
Leave a comment