ತೆರಕಣಾಂಬಿಹುಂಡಿಯಲ್ಲಿ ಬಾರ್ ತೆರೆದರೆ ಉಗ್ರಹೋರಾಟ: ಶಶಿಅವ್ವ

ಮಣಿಕಂಠ ಜನತಾ ರಾಯಭಾರಿ
1 Min Read

ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ ತೆರೆಕಣಾಂಬಿಹುಂಡಿಯಲ್ಲಿ ಎಂಎಸ್ ಐಎಲ್ ಮದ್ಯಂಗಡಿ ತೆರೆದರೆ ಗ್ರಾಮಸ್ಥರೊಂದಿಗೆ  ಬೀದಿಗಿಳಿದು ಹೋರಾಟ ಮಾಡಲಾಗುವುದು ಎಂದು ಗ್ರಾ.ಪಂ.ಮಾಜಿ ಸದಸ್ಯ ಶಶಿ ಅವ್ವ ಎಚ್ಚರಿಸಿದರು.

ತೆರಕಣಾಂಬಿ ಹುಂಡಿ ಗ್ರಾಮದಲ್ಲಿ ಬಾರ್ ತೆರೆಯಲು ಉದ್ದೇಶಿಸಿರುವ ಜಾಗದ ಅಕ್ಕಪಕ್ಕ ಮನೆಗಳು ಹಾಗೂ ಖಾಲಿ ನಿವೇಶನಗಳಿವೆ. ಬಾರ್ ತೆರೆದರೆ ಶಾಲಾ ಮಕ್ಕಳು, ಹೆಂಗಸರು ಓಡಾಡಲು ತೊಂದರೆಯಾಗಲಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಈಗಾಗಲೇ ತೆರಕಣಾಂಬಿ ಗ್ರಾಮದಲ್ಲಿ 4 ಬಾರ್‌ಗಳಿದ್ದು ಕುಡುಕರ ಹಾವಳಿ ಹೆಚ್ಚಾಗಿದೆ.ಈ ನಡುವೆ ತೆರಕಣಾಂಬಿಹುಂಡಿಯಲ್ಲಿ ಮತ್ತೊಂದು ಬಾರ್ ತೆರೆದರೆ ನಿವಾಸಿಗಳಿಗೆ ತೊಂದರೆಯಾಗಲಿದೆ ಎಂದರು. ಗ್ರಾಪಂ ಸದಸ್ಯರು ಹಾಗೂ ಅಧ್ಯಕ್ಷರ ಅವಧಿ ಮುಗಿದಿರುವುದರಿಂದ ಪಿಡಿಒ ಸ್ವಂತ ತೀರ್ಮಾನದಿಂದ ಮದ್ಯದ ಅಂಗಡಿಗೆ ಜನರಲ್ ಲೈಸೆನ್ಸ್ ಹಾಗೂ ಎನ್‌ಒಸಿ ನೀಡಿದ್ದಾರೆ. ಈ ಸಂಬಂಧ ಅಬಕಾರಿ ಡಿಸಿ ಹಾಗೂ ಇನ್ಸ್ಪೆಕ್ಟರ್‌ಗೆ ಮನವಿ ಸಲ್ಲಿಸಲಾಗಿದೆ. ಅಬಕಾರಿ ಇನ್ಸ್‌ಪೆಕ್ಟರ್ ನಮಗೆ ಮಾಹಿತಿ ನೀಡದೆ ಸ್ಥಳ ಮಹಜರು ನಡೆಸಿದ್ದಾರೆ ಎಂದು ತಿಳಿಸಿದರು.ಸಂಬಂಧಪಟ್ಟ ಅಬಕಾರಿ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ಇತ್ತ ಗಮನಹರಿಸಿ ಹೊಸ ಬಾರ್ ತೆರೆಯಲು ಅನುಮತಿ ನೀಡಬಾರದು. ಒಂದು ವೇಳೆ ಅನುಮತಿ ನೀಡಿದರೆ ಗ್ರಾಮಸ್ಥರೆಲ್ಲರೂ ಸೇರಿ ಉಗ್ರ ಪ್ರತಿಭಟನೆಯನ್ನು ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಗೋಷ್ಠಿಯಲ್ಲಿ ಸುರೇಶ್, ನಂದೀಶ್, ಪ್ರದೀಪ್, ವಿನೋದ್, ಮಂಜು, ಪ್ರತಾಪ್, ಶಂಭು, ಜಗದೀಶ್ ಮನೋಜ್, ಅಶೋಕ ಹಾಜರಿದ್ದರು.

Share this Article
1 Comment