ಚಾಮರಾಜನಗರ: ರಾಜ್ಯದಲ್ಲಿ ಅಪಾರವಾದ ಜನ ಮೆಚ್ಚುಗೆ ಪಡೆದು ಮುನ್ನುಗ್ಗುತ್ತಿರುವ “ಲೋ ನವೀನ” ಚಿತ್ರತಂಡದವರು ಇಂದು ಭಾನುವಾರ ಸಂಜೆ 4 ಗಂಟೆಗೆ ಶ್ರೀಭ್ರಮರಾಂಭ ಚಿತ್ರಮಂದಿರಕ್ಕೆ ಭೇಟಿ ನೀಡಲಿದ್ದಾರೆ.
ಲೋ ನವೀನ ಚಿತ್ರತಂಡದ ನಾಯಕ ಹಾಗೂ ಖ್ಯಾತ ಗಾಯಕ ನವೀನ್ ಸಜ್ಜು ಅವರೊಂದಿಗೆ ಚಿತ್ರದ ನಾಯಕಿ, ಸಹ ಕಲಾವಿದರು ಚಿತ್ರಮಂದಿರಕ್ಕೆ ಭೇಟಿ ನೀಡಿ, ಅಭಿಮಾನಿಗಳೊಂದಿಗೆ ಲೋ ನವೀನ ಸಿನಿಮಾವನ್ನು ವೀಕ್ಷಣೆ ಮಾಡಲಿದ್ದಾರೆ.
ಲೋ ನವೀನ ಚಿತ್ರ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, 25 ನೇ ದಿನದತ್ತ ಮುನ್ನುಗ್ಗುತ್ತಿದೆ. ಈ ಚಿತ್ರದಲ್ಲಿ ಚಾಮರಾಜನಗರದ ಸಿದ್ದಯ್ಯನಪುರ ಗ್ರಾಮದ ರಂಗಭೂಮಿ ಯುವ ಕಲಾವಿದ ರಮೇಶ್ ಪಾಪಯ್ಯ ಅವರು ಕೂಡ ಪ್ರಧಾನ ಪಾತ್ರದಲ್ಲಿ ಅಭಿನಯಿಸಿದ್ದು, ಜಿಲ್ಲೆಯಲ್ಲೂ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಲೋ ನವೀನ ಚಿತ್ರತಂಡವನ್ನು ಸ್ವಾಗತಿಸಿಲು ಚಾಮರಾಜನಗರದ ಸಿನಿ ಪ್ರೇಮಿಗಳು ಕಾತುರರಾಗಿದ್ದಾರೆ.