ಕೊಳ್ಳೇಗಾಲ: ರಾಜ್ಯ ಕಂಡ ದಲಿತರ ಆಶಾಕಿರಣ ಹಾಗೂ ಹಿಂದುಳಿದ ವರ್ಗಗಳ ನೇತಾರ ಡಾ.ಎಚ್.ಸಿ.ಮಹದೇವಪ್ಪ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ನಗರಸಭೆ ಮಾಜಿ ಸದಸ್ಯ ಮುಡಿಗುಂಡ ಶಾಂತರಾಜು ಒತ್ತಾಯ ಮಾಡಿದರು.
ಪಟ್ಟಣದ ಕೆಯುಸಿ ಕ್ಲಬ್ ನಲ್ಲಿ ಹೆಚ್.ಸಿ.ಮಹದೇವಪ್ಪ ಅಭಿಮಾನಿಗಳು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಡಾ.ಹೆಚ್.ಸಿ.ಮಹದೇವಪ್ಪ ರವರು ಆರು ಬಾರಿ ಶಾಸಕರಾಗಿ, ನಾಲ್ಕು ಸಚಿವರಾಗಿ ಉನ್ನತವಾದ ಸೇವೆಗಳನ್ನು ಸಲ್ಲಿಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೇಸ್ ಪಕ್ಷ ಅಧಿಕಾರ ಹಿಡಿಯಲು ಅವರ ಕೊಡುಗೆ ಇದೆ. ಆದ್ದರಿಂದ ಮಹದೇವಪ್ಪ ರವರ ಸೇವೆಯನ್ನು ಮನಗಂಡು ಉಪಮುಖ್ಯಮಂತ್ರಿ ಸ್ಥಾನವನ್ನು ನೀಡಬೇಕೆಂದು ನಮ್ಮ ನಾಯಕರಾದ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಹಾಗೂ ವರಿಷ್ಠರಲ್ಲಿ ಮನವಿ ಮಾಡಿದರು.
ಅವರ ಸುದೀರ್ಘವಾದ ರಾಜಕೀಯದಲ್ಲಿ ದೀನ ದಲಿತರ ಪರ, ಹಿಂದುಳಿದ ಪರವಾಗಿ ಸೇವೆ ಮಾಡುತ್ತಾ ಬಂದಿದ್ದಾರೆ. ಸಮಾಜ ಕಲ್ಯಾಣ ಮಂತ್ರಿಯಾಗಿ ತುಳಿತಕ್ಕೆ ಒಳಗಾದವರಿಗೆ ಮೇಲೆತ್ತುವ ಕೆಲಸ ಮಾಡಿರುವ ನಮ್ಮ ನಾಯಕರಾದ ಮಹದೇವಪ್ಪ ಉಪಮುಖ್ಯಮಂತ್ರಿ ಸ್ಥಾನ ಕಲ್ಪಿಸಬೇಕೆಂದು ಈ ಮೂಲಕ ಒತ್ತಾಯ ಮಾಡಿದರು.
ಇದರ ಜೊತೆಗೆ ಚಾ.ನಗರ ಕ್ಷೇತ್ರದಲ್ಲಿ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಪುಟ್ಟರಂಗಶೆಟ್ಟಿ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವರಾಗಿ ಮಾಡಬೇಕೆಂದು ಮನವಿ ಮಾಡಿದರು.
ಕಂಠೀರವ ಸ್ಟೇಡಿಯಂ ಮಾಜಿ ನಿರ್ದೇಶಕ ಪುಟ್ಟರಾಜು ಮಾತನಾಡಿ, ನಮ್ಮ ಈ ಭಾಗದ ದಲಿತ ನಾಯಕರಾದ ಶ್ರೀನಿವಾಸ್ ಪ್ರಸಾದ್ ಹಾಗೂ ದೃವನಾರಾಯಣ್ ರವರ ಸಮಕಾಲೀನರಾದ ಹೆಚ್.ಸಿ.ಮಹದೇವಪ್ಪ ರವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವ ಮೂಲಕ ಕಾಂಗ್ರೇಸ್ ಪಕ್ಷವನ್ನು ಮತ್ತಷ್ಟು ಬಲಪಡಿಸಲು ಸಹಕರಿಸಬೇಕೆಂದು ಮನವಿ ಮಾಡಿದರು.
ನಗರಸಭೆ ಮಾಜಿ ಉಪಾಧ್ಯಕ್ಷರು ನಂಜುಂಡ ಮಾತನಾಡಿ, ರಾಜ್ಯದ ದೀನದಲಿತರ ಏಳಿಗೆಗಾಗಿ ಶ್ರಮಿಸುವ ಡಾ.ಹೆಚ್.ಸಿ. ಮಹದೇವಪ್ಪರನ್ನು ಉಪಮುಖ್ಯಮಂತ್ರಿ ಸ್ಥಾನ ಎಂದು ಒತ್ತಾಯಿಸಿದರು.
ಈ ಸಂಧರ್ಭದಲ್ಲಿ ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯ ಕಾರ್ಯದರ್ಶಿ ಗೋವಿಂದರಾಜು, ಮುಖಂಡರು ಶಾಂತರಾಜು ಬಸ್ತೀಪುರ, ಖಿಜರ್ ಪಾಷ, ರಾಜೇಶ್, ಗುರುದೇವು, ಸಂಪತ್ತು ಕುಮಾರ್ ಇದ್ದರು.