ಅಂಬೇಡ್ಕರ್ ಭಾವಚಿತ್ರವಿಡಿದು ಭಾರತಕ್ಕೆ ಕಾಲಿಟ್ಟ ಕಾಕ್ರೋಚ್ ಜನತಾ ಪಾರ್ಟಿ ಸಂಸ್ಥಾಪಕ 

ಮಣಿಕಂಠ ಜನತಾ ರಾಯಭಾರಿ
1 Min Read

ದೆಹಲಿ: ಸಾಮಾಜಿಕ ಮಾಧ್ಯಮಗಳಲ್ಲಿ “ಕಾಕ್ರೋಚ್‌ ಜನತಾ ಪಾರ್ಟಿ” (ಸಿಜೆಪಿ) ಖಾತೆಯ ಮೂಲಕ ಸಂಚಲನವನ್ನು ಸೃಷ್ಟಿಸಿರುವ ಅಭಿಜೀತ್ ದೀಪ್ಕೆ ಅವರು ಕೈಯಲ್ಲಿ ಅಂಬೇಡ್ಕರ್ ಅವರ ಭಾವಚಿತ್ರವಿಡಿದು ಭಾರತದ ನೆಲಕ್ಕೆ ಕಾಲಿಟ್ಟಿದ್ದಾರೆ.

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಹಾಗೂ NEET ಪರೀಕ್ಷೆಯ ಅಕ್ರಮಗಳ ವಿರುದ್ಧ ಪ್ರತಿಭಟನೆ ನಡೆಸಲು ಅವರು ಅಮೆರಿಕದಿಂದ ಭಾರತಕ್ಕೆ ಆಗಮಿಸಿದ್ದಾರೆ. ದೆಹಲಿ ಪೊಲೀಸರು ಜಂತರ್ ಮಂತರ್ ನಲ್ಲಿ ಹೋರಾಟಕ್ಕೆ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಪ್ರತಿಭಟನೆಗೆ ಹೆಚ್ಚಿನ ಸಂಖ್ಯೆಯಲ್ಲಿ ಯುವಜನಾಂಗ ಜಮಾಯಿಸುವಂತೆ ಅವರು ತಮ್ಮ ಬೆಂಬಲಿಗರಿಗೆ ಕರೆ ನೀಡಿದ್ದಾರೆ.

ಪುಣೆ ಮೂಲದವರು ಎಂದು ಹೇಳಲಾದ ಮಹಾರಾಷ್ಟ್ರದ ದಲಿತ ಯುವಕ ಅಭಿಜೀತ್ ದೀಪ್ಕೆ. ಬೋಸ್ಟನ್ ವಿಶ್ವವಿದ್ಯಾಲಯದಲ್ಲಿ ಪಬ್ಲಿಕ್ ರಿಲೇಷನ್ಸ್ ಮಾಸ್ಟರ್ಸ್ ಮಾಡುತ್ತಿದ್ದಾರೆ. 2020-2023ರಲ್ಲಿ AAP ಸೋಶಿಯಲ್ ಮೀಡಿಯಾ ತಂಡದಲ್ಲೂ ಕೆಲಸ ಮಾಡಿದ್ದರು. ಮೇ 16ರಂದು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರು ನಿರುದ್ಯೋಗಿ ಯುವಕರನ್ನು “ಜಿರಳೆ”ಗಳಿಗೆ ಹೋಲಿಸಿದ ಹೇಳಿಕೆಯ ನಂತರ ಅಭಿಜೀತ್ ದೀಪ್ಕೆ ವ್ಯಂಗ್ಯ ರಾಜಕೀಯ ವೇದಿಕೆಯಾಗಿ CJP ಶುರು ಮಾಡಿದರು. 4 ದಿನದಲ್ಲೇ ಇನ್‌ಸ್ಟಾಗ್ರಾಮ್‌ನಲ್ಲಿ 22 ಮಿಲಿಯನ್ ಫಾಲೋವರ್ಸ್ ಪಡೆದು BJPಗಿಂತ ಹೆಚ್ಚು ಫಾಲೋವರ್ಸ್ ಪಡೆದಿತ್ತು.

ಪ್ರಸ್ತುತ ದೀಪ್ಕೆ ಅವರು NEET, CBSE, CUET ಪರೀಕ್ಷೆಗಳಲ್ಲಿನ ಅಕ್ರಮ/ಲೋಪಗಳಿಗಾಗಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಲು ಅಮೇರಿಕಾದಿಂದ ದೆಹಲಿಗೆ ಬಂದಿದ್ದಾರೆ. ಅದರಂತೆ ಇಂದು ದೆಹಲಿಯ ಜಂತರ್ ಮಂತರ್‌ನಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದಾರೆ.

“ನನ್ನ ಹಣೆಬರಹವನ್ನು ಸಂವಿಧಾನ ಮತ್ತು ನ್ಯಾಯಾಂಗದ ಕೈಗೆ ಬಿಟ್ಟಿದ್ದೇನೆ” ಎನ್ನುವ ದೀಪ್ಕೆ ಅವರು ವ್ಯಂಗ್ಯದಿಂದ ಶುರುಮಾಡಿದ ಕಾಕ್ರೋಚ್ ಜನತಾ ಪಾರ್ಟಿ ಇಂದು ಯುವಕರ ನಿರುದ್ಯೋಗ, ಪರೀಕ್ಷಾ ಅಕ್ರಮದ ವಿರುದ್ಧದ ಆಂದೋಲನವಾಗಿ ಬೆಳೆದಿದೆ. ಇದು ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಪ್ರಜಾಪ್ರಭುತ್ವ ಮತ್ತು ಬಹುಜನ ಚಳುವಳಿಯ ಶಕ್ತಿಯಾಗಿದೆ ಎಂದು ಹಲವಾರು ಹೋರಾಟಗಾರರು ಹೇಳುತ್ತಿದ್ದಾರೆ.

Share this Article
Leave a comment