ಎಸ್ಸಿಎಸ್ಟಿ ದೌರ್ಜನ್ಯ ಕಾಯ್ದೆಯಡಿ ನಾಲ್ವರ ಮೇಲೆ ಪ್ರಕರಣ ದಾಖಲು

ಮಣಿಕಂಠ ಜನತಾ ರಾಯಭಾರಿ
1 Min Read

ಗುಂಡ್ಲುಪೇಟೆ: ತಾಲೂಕಿನ ಬೇರಂಬಾಡಿ ಗ್ರಾಮದ ನಾಯಕ ಸಮುದಾಯದ ದಾಸನಾಯಕ‌ ಮತ್ತು ಲಕ್ಷ್ಮಮ್ಮ ಎಂಬುವರಿಗೆ ಹಲ್ಲೆ ‌ಮಾಡಿ ಜಾತಿನಿಂದನೆ‌ ಸಂಬಂಧ 4 ಮಂದಿ ಸವರ್ಣೀಯರ ವಿರುದ್ಧ ಪಟ್ಟಣದ ‌ಪೊಲೀಸ್ ಠಾಣೆಯಲ್ಲಿ ಎಸ್ಸಿಎಸ್ಟಿ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಬೇರಂಬಾಡಿ ಗ್ರಾಮದ ಬೀಚನಹಳ್ಳಿ ಸರ್ವೇ ನಂಬರ್ 283/1 ರಲ್ಲಿ ಎರಡು ಎಕರೆ ಜಮೀನು ಇದ್ದು, ಪಕ್ಕದ ಜಮೀನನ್ನು ಬೇರಂಬಾಡಿ ಗ್ರಾಮದ ಲಿಂಗಾಯತ ಸಮುದಾಯದ ನಂದೀಶ್ ಎಂಬುವರು ಖರೀದಿ ಮಾಡಿದ್ದರು. ಅದರಲ್ಲಿ ಬೆಳೆದಿರುವ ಕಳೆಯನ್ನು ದಾಸನಾಯಕ ಎಂಬುವರಿಗೆ ಸೇರಿದ ಜಮೀನಿಗೆ ಅತಿಕ್ರಮ ಪ್ರವೇಶ ಮಾಡಿ ಸುರಿದು ಹೋಗಿರುತ್ತಾರೆ. ಇದರಿಂದ ಅನುಮಾನಗೊಂಡು ದಾಸನಾಯಕ ಜೂ.4ರಂದು ಸರ್ವೇಯರ್ ಮೂಲಕ ಸರ್ವೇ ಮಾಡಿಸಿ ಮನೆಗೆ ಹೊರಡುವ ಸಂದರ್ಭದಲ್ಲಿ ನಂದೀಶ್, ಶಿವಾನಂದ್, ಮಣಿಕಂಠ, ನಿಂಗರಾಜು ಎಂಬುವವರು ತಗಾದೆ ತೆಗೆದು ಅವಾಚ್ಯ ಪದಗಳಿಂದ ನಿಂದಿಸಿ, ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ನಂತರ ಪಟ್ಟಣದ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಹಲ್ಲೆಗೊಳಗಾದ ದಾಸನಾಯಕ ಹಾಗೂ ಆತನ ಪತ್ನಿ ಲಕ್ಷ್ಮಮ್ಮ ಚಿಕಿತ್ಸೆ ಪಡೆದು, ಗುಂಡ್ಲುಪೇಟೆ ಪೊಲೀಸ್ ಠಾಣೆಗೆ ಜಾತಿನಿಂದನೆ ಹಾಗೂ ಕೊಲೆ ಬೆದರಿಕೆ ದೂರು ನೀಡಿ, ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ್ದಾರೆ.

ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಅಟ್ರಾಸಿಟಿ ಪ್ರಕರಣ ದಾಖಲಾಗುತ್ತಿದ್ದಂತೆ 4 ಮಂದಿ ತಲೆಮರೆಸಿಕೊಂಡಿದ್ದಾರೆ. ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

Share this Article
Leave a comment