ಚಾಮರಾಜನಗರ: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಪರಿಷತ್ತಿನ ಗೌರವಾಧ್ಯಕ್ಷರೂ ಮತ್ತು ಸಮ್ಮೇಳನದ ಮಹಾಪೋಷಕರೂ ಆದ ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರ ಮಾರ್ಗದರ್ಶನದಲ್ಲಿ ಇದೇ ಜುಲೈ 7 ಮತ್ತು 8ರಂದು ಬೆಂಗಳೂರಿನ ವಿಜಯನಗರದ ‘ಶ್ರೀ ಬಸವೇಶ್ವರ ಸುಜ್ಞಾನ ಮಂಟಪ’ದಲ್ಲಿ ಅಖಿಲ ಭಾರತ 14ನೆಯ ಶರಣ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲಾಗಿದೆ.
ನಾಡಿನ ಹಿರಿಯ ಸಾಹಿತಿಗಳೂ, ಪ್ರಖ್ಯಾತ ವಿದ್ವಾಂಸರೂ ಆದ ನಾಡೋಜ ಗೊ.ರು. ಚನ್ನಬಸಪ್ಪ ಅವರು ಸಮ್ಮೇಳನದ ಅಧ್ಯಕ್ಷತೆ ವಹಿಸಲಿದ್ದಾರೆ. ವಿವಿಧ ಜಿಲ್ಲೆಗಳಲ್ಲಿ ಇದುವರೆಗೆ 13 ಸಮ್ಮೇಳನಗಳು ಅಖಿಲ ಭಾರತ ಮಟ್ಟದಲ್ಲಿ ತುಂಬ ಯಶಸ್ವಿಯಾಗಿ ಆಯೋಜಿಸಲ್ಪಟ್ಟಿರುತ್ತದೆ. ಇದೇ ಜುಲೈ 7 ಮತ್ತು 8ರಂದು ನಡೆಯಲಿರುವ ಈ ಸಮ್ಮೇಳನದಲ್ಲಿ ನಾಡಿನ ಹಿರಿಯ ಗುರುವರೇಣ್ಯರು, ಸಾಹಿತ್ಯ ಸಾಧಕರುಗಳು, ಹಿರಿಯ ಗಣ್ಯರು ಪಾಲ್ಗೊಳ್ಳಲಿದ್ದು ಶರಣ / ವಚನ ಸಾಹಿತ್ಯದ ವಿವಿಧ ಆಯಾಮಗಳ ಬಗ್ಗೆ ವಿಚಾರಗೋಷ್ಠಿ ಹಾಗೂ ಸಂವಾದ ನಡೆಯಲಿವೆ.
ಸಮ್ಮೇಳನದ ಪ್ರತಿನಿಧಿಗಳಾಗಲು ಬಯಸುವವರಿಗೆ ಪ್ರತಿನಿಧಿ ಶುಲ್ಕ 500 ಆಗಿದ್ದು ಶರಣ ಸಾಹಿತ್ಯ ಪರಿಷತ್ತಿನ ಸದಸ್ಯರು, ಆಸಕ್ತರು ಮತ್ತು ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಕೋರಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಬಿ.ಕೆ. ರವಿಕುಮಾರ್, ಅಧ್ಯಕ್ಷರು, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು -99017 98974, ನಾಗರಾಜು ಕೊಳ್ಳೇಗಾಲ 99725 92022, ಜ್ಯೋತಿಪ್ರಕಾಶ್ ಗುಂಡ್ಲುಪೇಟೆ 97435 83165, ಬೇಡುಗುಳಿ ಸುಂದರ್ 94486 38281, ಲಿಂಗರಾಜು 99868 93076, ಎಂ. ವೀರಭದ್ರಸ್ವಾಮಿ, ಯಳಂದೂರು 94486 02813, ವಸಂತಮ್ಮ, ಅಧ್ಯಕ್ಷರು, ಕದಳಿ ಮಹಿಳಾ ವೇದಿಕೆ 99728 73208, ಬಿ.ಎಸ್. ವಿನಯ್ 948004933 ಇವರನ್ನು ಸಂಪರ್ಕಿಸಬೇಕಾಗಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.