ಗುಂಡ್ಲುಪೇಟೆ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲ್ಲೂಕು ಘಟಕ, ಯುವ ಘಟಕ, ತಾಲ್ಲೂಕು ಎಲ್ಲಾ ವೀರಶೈವ ಲಿಂಗಾಯತ ಸಂಘ ಸಂಸ್ಥೆಗಳು ಹಾಗೂ ವೀರಶೈವ ಲಿಂಗಾಯತ ಸಮಾಜದ ವತಿಯಿಂದ ಪಟ್ಟಣದಲ್ಲಿ ತಾಲ್ಲೂಕು ಮಟ್ಟದ ಅದ್ದೂರಿ ಬಸವ ಜಯಂತಿ ಆಚರಿಸಲಾಯಿತು,
ಸೋಮಹಳ್ಳಿ ಮಠದ ಶ್ರೀ ಸಿದ್ದಮಲ್ಲ ಸ್ವಾಮೀಜಿ,ಪಡಗೂರು ಅಡವಿ ಮಠದ ಶಿವಲಿಂಗೇಂದ್ರ ಸ್ವಾಮೀಜಿ, ಮಾದಾಪಟ್ಟಣ ಮಠದ ತೋಂಟದಾರ್ಯ ಸ್ವಾಮೀಜಿ ಇನ್ನಿತರೆ ಮಠದ ಸ್ವಾಮೀಜಿಗಳು ಹಾಲಿ ಶಾಸಕ ಎಚ್ ಎಂ ಗಣೇಶ್ ಪ್ರಸಾದ್, ಹಾಗೂ ಮಾಜಿ ಶಾಸಕ ಸಿ ಎಸ್ ನಿರಂಜನ್ ಕುಮಾರ್ ರವರು ಬೆಳ್ಳಿ ರಥದಲ್ಲಿ ಕೂರಿಸಿದ್ದ ಬಸವೇಶ್ವರ ಪುತ್ಥಳಿಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.
ಪಟ್ಟಣದ ಜೆಎಸ್ ಎಸ್ ಕಾಲೇಜಿನಿಂದ ಬಸವೇಶ್ವರ ಬೆಳ್ಳಿ ರಥ ಹೊರಟು ಕೆಎಸ್ ಆರ್ ಟಿಸಿ ಸರ್ಕಲ್ ಮಾರ್ಗವಾಗಿ ಬಸವೇಶ್ವರ ವೃತ್ತ, ಹಳೆ ಬಸ್ ನಿಲ್ದಾಣ ಕೆಆರ್ ಸಿ ರಸ್ತೆ ಮೂಲಕ ಕೋಡಹಳ್ಳಿ ಸರ್ಕಲ್ ಮಾರ್ಗವಾಗಿ ಸಾಗಿ ತಾಲ್ಲೂಕು ಕಚೇರಿ ವರೆಗೆ ಸಾಗಿಬಂತು.
ವಿವಿಧ ಕಲಾತಂಡಗಳು ಭಾಗಿ: ಬಸವೇಶ್ವರ ಜಯಂತಿ ಹಿನ್ನಲೆ ಡಿಜೆಗೆ ಸಹಸ್ರ ಸಂಖ್ಯೆಯ ಯುವಕರು ಹುಚ್ಚೆದ್ದು ಕುಣಿದರು, ಕಂಸಾಳೆ ನಾದ, ಹಳ್ಳಿಕಾರ್ ಜೊಡೆತ್ತುಗಳ ಮೆರವಣಿಗೆ ಅಕರ್ಶಕವಾಗಿತ್ತು, ನಂದಿಕಂಬ, ಗೊರವರ ಕುಣಿತ, ಡೋಳು. ಕೇರಳ ಚೆಂಡಾ ನಗಾರಿ ಸೇರಿದಂತೆ ವಿವಿಧ ಕಲಾತಂಡಗಳು ಭಾಗಿಯಾಗಿದ್ದವು.
ಪಟ್ಟಣದಲ್ಲಿ ನಡೆದ ಬಸವ ಜಯಂತಿಗೆ ಸಹಸ್ರಾರು ಸಂಖ್ಯೆಯಲ್ಲಿ ಶರಣರು ಹರಿದು ಬಂದರು, ಜೆಎಸ್ ಎಸ್ ಕಾಲೇಜಿನಿಂದ ಪಟ್ಟಣದ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದ ವರೆಗು ಜನಸ್ತೋಮ ಸಮಾಗಮವಾಗಿದ್ದು ಕಂಡುಬಂತು, ಎಲ್ಲರು ಬಸವ ಧ್ವಜ ಹಿಡಿದು ಕುಣಿದು ಕುಪ್ಪಳಿಸಿದರು.
ಸಾವಿರಾರು ಜನರಿಗೆ ಅನ್ನಸಂತರ್ಪಣೆ: ಬಸವ ಜಯಂತಿ ಕಾರ್ಯಕ್ರಮಕ್ಕೆ ಆಗಮಿಸಿದ ಸಾವಿರಾರು ಜನರಿಗೆ ಶಾಸಕ ಗಣೇಶ್ ಪ್ರಸಾದ್ ಅನ್ನ ಸಂತರ್ಪಣೆ ಏರ್ಪಡಿಸಲು ಸಹಕಾರ ನೀಡಿದರು ಸುಮಾರು ಹದಿನೈದು ಸಾವಿರಕ್ಕೂ ಹೆಚ್ಚು ಜನರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಯಿತು.
ಈ ಸಂದರ್ಭದಲ್ಲಿ ತಾಲ್ಲೂಕಿನ ವಿವಿಧ ಮಠದ ಶ್ರೀಗಳಾದ ಸಿದ್ದಮಲ್ಲಸ್ವಾಮಿಗಳು, ಶಿವಲಿಂಗೇಂದ್ರ ಸ್ವಾಮಿಗಳು, ತೊಂಟದಾರ್ಯ ಸ್ವಾಮಿಗಳು, ಮೂಡಗೂರು ಇಮ್ಮಡಿ ಉದ್ದಾನಸ್ವಾಮಿಗಳು, ಗೋಪಾಲಪುರ, ಹಂಗಳ, ಕಬ್ಬಹಳ್ಳಿ, ಸೇರಿದಂತೆ ವಿವಿಧ ಮಠಾಧಿಪತಿಗಳು ಶಾಸಕ ಎಚ್ ಎಂ ಗಣೇಶ್ ಪ್ರಸಾದ್, ಮಾಜಿ ಶಾಸಕ ಸಿ ಎಸ್ ನಿರಂಜನ್ ಕುಮಾರ್, ವಾಭಾವೀಲಿಂ ಮಹಾಸಭೆ ತಾಲ್ಲೂಕು ಅಧ್ಯಕ್ಷ ಶಿವಪ್ರಸಾದ್, ಜಿಲ್ಲಾ ಅಧ್ಯಕ್ಷ ನಂದೀಶ್, ಮಾಜಿ ವೀರಶೈವ ಮಹಾಸಭೆ ಅಧ್ಯಕ್ಷ ಹಂಗಳ ನಂಜಪ್ಪ, ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ನಂಜುಂಡಪ್ರಸಾದ್,ಮಾಜಿ ಅಧ್ಯಕ್ಷ ಕಮರಹಳ್ಳಿ ರವಿ, ಯುವ ಘಟಕ ಅಧ್ಯಕ್ಷ ಗುರುಪ್ರಸಾದ್, ರಾಜ್ಯ ಘಟಕದ ಪ್ರಣಯ್, ಸೇರಿದಂತೆ ಜಿಲ್ಲಾ ನಿರ್ದೇಶಕರು, ತಾಲ್ಲೂಕು ನಿರ್ದೇಶಕರು, ಪದಾದಿಕಾರಿಗಳು ಸಮುದಾಯದ ಮುಖಂಡರು, ಯುವಕರು ಮತ್ತಿತರರಿದ್ದರು.