ಅಮಚವಾಡಿ ಬಳಿ ಹುಲಿ ದಾಳಿಗೆ 2 ಕುರಿ ಮತ್ತು 2 ಮೇಕೆ ಬಲಿ 

ಮಣಿಕಂಠ ಜನತಾ ರಾಯಭಾರಿ
1 Min Read

ಚಾಮರಾಜನಗರ: ತಾಲೂಕಿನ ಅಮಚವಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿದ್ಧಲಿಂಗಪುರ ಗ್ರಾಮದಲ್ಲಿ ಕುರಿ ಮತ್ತು ಮೇಕೆಗಳ ಮೇಲೆ ಹುಲಿ ದಾಳಿ ನಡೆಸಿದ್ದು, 2 ಕುರಿ ಮತ್ತು 2 ಮೇಕೆ ಮರಿಗಳು ಮೃತಪಟ್ಟಿದೆ.

ಸಿದ್ದಲಿಂಗಪುರ ಗ್ರಾಮದ ಮಹೇಶ್ ಮತ್ತು ಶೇಷ ಎಂಬ ಸಹೋದರರಿಗೆ ಸೇರಿದ ಕುರಿ ಮತ್ತು ಮೇಕೆಗಳ ಮೇಲೆ ಹುಲಿ ದಾಳಿ ನಡೆಸಿದ್ದು, ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಶೇಷ ಅವರು ಕಾಡಂಚಿನಲ್ಲಿ ಕುರಿ ಮತ್ತು ಮೇಕೆಗಳನ್ನು ಮೇಯಿಸುವಾಗ ದಾಳಿ ನಡೆಸಿದೆ ಎನ್ನಲಾಗಿದೆ.

ಇತ್ತೀಚೆಗೆ ಇದೇ ಗ್ರಾಮದಲ್ಲಿ ಮೇಕೆಯೊಂದನ್ನು ಹುಲಿ ಬಲಿ ಪಡೆದಿತ್ತು. ಈಗ ಒಮ್ಮೆಲೇ ನಾಲ್ಕೂ ಕುರಿ ಮತ್ತು ಮೇಕೆಗಳನ್ನು ಬಲಿ ಪಡೆದಿರುವುದರಿಂದ ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಅರಣ್ಯ ಇಲಾಖೆಯವರು ಬೋನ್ ಇರಿಸಿ ಹುಲಿಯನ್ನು ಶೀಘ್ರದಲ್ಲೇ ಸೆರೆ ಹಿಡಯಬೇಕು ಎಂದು ಒತ್ತಾಯಿಸಿದ್ದಾರೆ.

Share this Article
Leave a comment