ನಾಲ್ಕು ಕುರಿಗಳನ್ನು ಬಲಿಪಡೆದು ಪರಾರಿಯಾದ ಕಾರು 

ಮಣಿಕಂಠ ಜನತಾ ರಾಯಭಾರಿ
1 Min Read

ಚಾಮರಾಜನಗರ: ಗುಂಡ್ಲುಪೇಟೆ ಮುಖ್ಯರಸ್ತೆಯಲ್ಲಿ ಬಿಳಿ ಬಣ್ಣದ ಕಾರೊಂದು ನಾಲ್ಕು ಕುರಿಗಳಿಗೆ ಅಪಘಾತ ಮಾಡಿ ಪರಾರಿಯಾಗಿದೆ.

ತಾಲೂಕಿನ ಉತ್ತುವಳ್ಳಿ ಗ್ರಾಮದ ನಿವಾಸಿಯೊಬ್ಬರು ಫ್ಯಾಕ್ಟರಿ ಮುಂಭಾಗ ಕುರಿಗಳನ್ನು ಮೇಯಿಸಲು ಹೋಗುವಾಗ ಚಾಮರಾಜನಗರ ದಿಂದ ಗುಂಡ್ಲುಪೇಟೆ ಕಡೆಗೆ ಹೋಗುವ ಬಿಳಿಬಣ್ಣದ ಕಾರೊಂದು 4 ಕುರಿಗಳಿಗೆ ಅಪಘಾತ ಮಾಡಿ ಹೋಗಿರುತ್ತದೆ. ಈ ವಿಚಾರವನ್ನು ಗೋವಿಂದರಾಜು ಎಂಬುವವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಸಂಚಾರಿ ಠಾಣೆಯ ಪೊಲೀಸರು ಬಂದು ಪರಿಶೀಲನೆ ನಡೆಸಿದರು.

ಪೊಲೀಸರು ತಕ್ಷಣ ಗುಂಡ್ಲುಪೇಟೆ-ಚಾಮರಾಜನಗರ ಮುಖ್ಯರಸ್ತೆಯಲ್ಲಿರುವ ವಿವಿಧ ಸಿಸಿಟಿವಿ ಗಳನ್ನು ಪರಿಶೀಲಿಸಿದ್ದು, ಯಾವುದೇ ಉಪಯುಕ್ತ ವಾದ ಮಾಹಿತಿ ಲಭ್ಯವಾಗಿರುವುದಿಲ್ಲ ಎಂದು ತಿಳಿದುಬಂದಿದೆ. ಕುರಿಗಳ ಮಾಲೀಕರು ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಮುಂದಾಗಿದ್ದಾರೆ ಎಂಬ ಮಾಹಿತಿ ಜನತಾ ರಾಯಭಾರಿಗೆ ಲಭ್ಯವಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Share this Article
Leave a comment