ಮೈಸೂರು: ಅಂಚೆ ಇಲಾಖೆಯ ನೌಕರರೊಬ್ಬರನ್ನು ಸನ್ಮಾನಿಸುವ ಮೂಲಕ ರಾಷ್ಟ್ರೀಯ ಅಂಚೆ ನೌಕರರ ದಿನಾಚರಣೆಯನ್ನು ಆಚರಿಸಲಾಯಿತು.
ರಾಧಾಕೃಷ್ಣ ನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಕ್ತಿನಗರ ಅಂಚೆ ನೌಕರರಾದ ಟಿ.ಪಿ.ಸುನೀಲ್ ಅವರಿಗೆ ನಿವೃತ್ತ ಮುಖ್ಯ ಶಿಕ್ಷಕರಾದ ವಿ.ರಾಜೇಂದ್ರ ಹೆಬ್ಬಸೂರು ಅವರು ಸನ್ಮಾನಿಸುವ ಮೂಲಕ ಅಂಚೆ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ನಿವಾಸಿಗಳಾದ ರಾಧಾಕೃಷ್ಣ ನಗರದ ನಿವಾಸಿಗಳಾದ ರಾಜಶೇಖರ್, ಅರ್ಚಕರಾದ ನಾಗರಾಜ್, ಎಸ್.ನಾಗಿಣಿ ಹಾಗೂ ಇತರರು ಉಪಸ್ಥಿತರಿದ್ದರು.