ಚಾಮರಾಜನಗರ: ಸ್ನೇಕ್ ಅಶೋಕ್ ಅವರು ಉಗನೆಹುಂಡಿ ಗ್ರಾಮದ ಪಂಪ್ ಹೌಸ್ ಒಂದರಲ್ಲಿ ಸೇರಿಕೊಂಡಿದ್ದ ಉಡಾ ಸಂರಕ್ಷಣೆ ಮಾಡಿದ್ದಾರೆ.
ತಾಲೂಕಿನ ಉಗನೆಹುಂಡಿ ಗ್ರಾಮದ ಪಂಪ್ ಹೌಸ್ ನಲ್ಲಿ ಅಪರೂಪದ ವನ್ಯಜೀವಿಯಾದ ಉಡಾ ಸೇರಿಕೊಂಡಿತ್ತು. ಈ ಸಂದರ್ಭದಲ್ಲಿ ಗ್ರಾಮದ ನಿವಾಸಿ ಪೃಥ್ವಿ ಎಂಬುವವರನ್ನು ಉಡಾ ಇರುವ ಕುರಿತು ಸ್ನೇಕ್ ಅಶೋಕ್ ಅವರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದಾರೆ.

ತಕ್ಷಣ ಉಗನೇಹುಂಡಿ ಗ್ರಾಮದ ಪಂಪ್ ಹೌಸ್ ಗೆ ಭೇಟಿ ನೀಡಿದ ಸ್ನೇಕ್ ಅಶೋಕ್ ಅವರು ಉಡಾ ಸಂರಕ್ಷಣೆ ಮಾಡುವ ಮೂಲಕ ಕಾಡಿಗೆ ಬಿಟ್ಟಿದ್ದಾರೆ. ಈ ವೇಳೆ ಅವರು ಮಾತನಾಡಿ, ಹಾವು, ಉಡಾ, ಚಿಪ್ಪು ಹಂದಿ ಅಂತಹ ಅಪರೂಪದ ವನ್ಯಜೀವಿಗಳು ಕಾಣಿಸಿಕೊಂಡಾಗ ಅದನ್ನು ಸಾಯಿಸಬಾರದು. ವನ್ಯಜೀವಿಗಳ ಸಂರಕ್ಷಣೆ ಎಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು.
“ಜನತಾ ರಾಯಭಾರಿ” ಓದುಗರೇ ನಿಮ್ಮ ಸುತ್ತಮುತ್ತಲಿನಲ್ಲಿ ಇಂತಹ ಅಪರೂಪದ ಪ್ರಾಣಿಗಳು ಕಂಡರೇ ಸ್ನೇಕ್ ಅಶೋಕ್: 9980034125 ಅವರನ್ನು ಸಂಪರ್ಕಿಸಿ.