ಅಪಾಯಕ್ಕೆ ಆಹ್ವಾನ ನೀಡುತ್ತಿದೆ ಅಂಗನವಾಡಿ ಸಮೀಪವಿರುವ ಬಾವಿ 

ಮಣಿಕಂಠ ಜನತಾ ರಾಯಭಾರಿ
1 Min Read

ಯಳಂದೂರು: ತಾಲ್ಲೂಕಿನ ಕೆಸ್ತೂರು ಗ್ರಾಮದ ಅಂಬೇಡ್ಕರ್ ಬಡಾವಣೆಯಲ್ಲಿರುವ ಅಂಗನವಾಡಿ ಕೇಂದ್ರ 1 ಸಮೀಪವಿರುವ ತೆರೆದ ಬಾವಿ ಅನಾಹುತಕ್ಕೆ ಆಹ್ವಾನ ನೀಡುತ್ತಿದೆ.

ಮಕ್ಕಳ ಹಕ್ಕುಗಳಿಗೆ ಧಕ್ಕೆಯಾಗುವಂತಹ ವಾತಾವರಣ ಸೃಷ್ಟಿಯಾಗಿದೆ. ಅಂಗನವಾಡಿ ಕೇಂದ್ರ1 ರಲ್ಲಿ ಸುಮಾರು 15 ಕ್ಕೂ ಹೆಚ್ಚು ಮಕ್ಕಳಿದ್ದಾರೆ. ಇದರ ಹಿಂಭಾಗ ಯಾವುದೇ ಭದ್ರತೆ ಇಲ್ಲದೆ ತೆರದ ಬಾವಿಯೊಂದು ಇದ್ದು ನೀರು ಇಲ್ಲದೆ ನಿರುಪಯುಕ್ತವಾಗಿದೆ. ಗ್ರಾಮದಲ್ಲಿ ಏನಾದರೂ ಮದುವೆ ಕಾರ್ಯಗಳಾದರೆ ಮಾತ್ರ ಇಲ್ಲಿಗೆ ಪೂಜೆ ಮಾಡುತ್ತಾರೆ ಉಳಿದ ದಿನಗಳಲ್ಲಿ ನಿರುಪಯುಕ್ತವಾಗಿದೆ.

ಇದರ ಸಮೀಪದಲ್ಲಿಯೇ ಅಂಗನವಾಡಿ ಕೇಂದ್ರವಿರುವುದರಿಂದ ಮಕ್ಕಳು ವಿರಾಮ ಸಂದರ್ಭದಲ್ಲಿ ಬಾವಿ ಬಳಿ ಬಂದು ಆಟವಾಡುತ್ತಾರೆ ಹಾಗೂ ಬಾವಿಯನ್ನು ಇಣುಕಿ ನೋಡುತ್ತಾರೆ. ಬಾವಿ ಸುತ್ತ ಕಾಂಕ್ರೀಟ್ ಹಾಕಿರುವುದರಿಂದ ಬಾವಿ ಮೇಲೆ ಹತ್ತುವುದಕ್ಕೆ ಮಕ್ಕಳು ಪ್ರಯತ್ನಮಾಡುತ್ತಿದ್ದಾರೆ ಅಂಗನವಾಡಿ ಶಿಕ್ಷಕಿಯರು ಎಷ್ಟೇ ಜಾಗೃತ ವಹಿಸಿದರು ಕೆಲವು ಸಂದರ್ಭದಲ್ಲಿ ಕೆಲ ಘಟನೆಗಳು ನಡೆಯಬಹುದು ಈ ತೆರದ ಬಾವಿ ದೊಡ್ಡ ಅನಾಹುತಕ್ಕೆ ಆಹ್ವಾನ ನೀಡುವಂತಾಗಿದೆ.

ಅಂಗನವಾಡಿ ಶಿಕ್ಷಕಿಯರು ಅನೇಕ ಬಾರಿ ಇದರ ಬಗ್ಗೆ ಗ್ರಾಮಪಂಚಾಯತಿಗೆ ದೂರು ನೀಡಿದರು ಯಾವುದೇ ಕ್ರಮವನ್ನು ವಹಿಸಿಲ್ಲ ಕೂಡಲೇ ಗ್ರಾಮಪಂಚಾಯತಿ ಅಧಿಕಾರಿಗಳು ಇತ್ತ ಗಮನಿಸಿ ಬಾವಿ‌ ಮೇಲೆ ಕಬ್ಬಿಣ ಸಲಕೆಗಳನ್ನು ಹಾಕಿ ಭದ್ರತೆ ಮಾಡಿ, ಅನಾಹುತ ಆಗದಂತೆ ಎಚ್ಚರವಹಿಸಬೇಕಾಗಿದೆ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದರು. ಅದಲ್ಲದೇ ಗ್ರಾಮದಲ್ಲಿ ತೆರೆದ ಬಾವಿಗಳು ಹೆಚ್ಚಾಗಿವೆ ಇಲ್ಲಿಗೂ ಭದ್ರತೆ ಮಾಡಿ ಎಂದು ಗ್ರಾಮದ ವಾಸಿ ನವೀನ್ ತಿಳಿಸಿದರು.

Share this Article
Leave a comment