ಉತ್ತಮ ಪರಿಸರ ಇದ್ದರೆ ಮಾತ್ರ ಮಾನವ ಸಂಕುಲ ವೃದ್ಧಿ; ಪ್ರೊ.ಕೆ.ಆರ್.ಮಲ್ಲಿಕಾರ್ಜುನಪ್ಪ

ಮಣಿಕಂಠ ಜನತಾ ರಾಯಭಾರಿ
2 Min Read

ಚಾಮರಾಜನಗರ: ಉತ್ತಮ ಪರಿಸರ, ಅರಣ್ಯ ಮತ್ತು ಸುತ್ತಮುತ್ತಲಿನಲ್ಲಿ ಹಸಿರಿನ ವಾತಾವರಣ ನಿರ್ಮಾಣಕೊಂಡರೆ ಮಾತ್ರ ಮಾನವ ಸಂಕುಲ ಉಳಿಯಲು ಸಾಧ್ಯವಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಪ್ರೊ.ಕೆ.ಆರ್.ಮಲ್ಲಿಕಾರ್ಜುನಪ್ಪ ತಿಳಿಸಿದರು.

ತಾಲೂಕಿನ ಕೊತ್ತಲವಾಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅವರಣದಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಬಿಜೆಪಿ ಗ್ರಾಮಾಂತರ ಮಂಡಲ ವತಿಯಿಂದ ನಡೆದ ವಿಶ್ವಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಸಸಿ ನೆಟ್ಟು ನೀರೆರೆದು ಬಳಿಕ ಅವರು ಮಾತನಾಡಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ದೇಶದಲ್ಲಿ ಜಾಗತಿಕ ಮಟ್ಟದಲ್ಲಿ ಪರಿಸರ ಸಂರಕ್ಷಣೆ ಮತ್ತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ದೊಡ್ಡ ಮಟ್ಟದ ಅಭಿಯಾನಗಳು ನಡೆದಿವೆ. ಅವುಗಳು ದೇಶದ ಜನರಲ್ಲಿ ಪರಿಸರ ಜಾಗೃತಿ ಉಂಟು ಮಾಡುವಲ್ಲಿ ಯಶಸ್ವಿಯಾಗಿದೆ. ನರೇಂದ್ರಮೋದಿ ಅವರು ಮೊಟ್ಟಮೊದಲ ಪ್ರಧಾನಿಮಂತ್ರಿಯಾಗಿ ಪದಗ್ರಹಣ ಸ್ವೀಕರಿಸಿದ ಮೇಲೆ ಒಂದು ದೃಢ ವಿರ್ಧಾರ ತೆಗೆದುಕೊಂಡು, ಸ್ವಚ್ಚಭಾರತ ಅಭಿಯಾನದ ಮೂಲಕ ಪರಿಸರ ಉಳಿಸಬೇಕು ಎಂದು ಹೇಳಿದರು.

ಪರಿಸರ ಉಳಿದರೆ ಪ್ರತಿಯೊಬ್ಬರ ಜೀವನ ಉಳಿಯುತ್ತದೆ ಎಂಬ ಧ್ಯೇಯವಾಕ್ಯದಲ್ಲಿ ತಮ್ಮ ಆಡಳಿತ ಅರಂಭ ಮಾಡಿದರು. ದೇಶದಲ್ಲಿ ಶೌಚಾಲಯಗಳನ್ನು ನಿರ್ಮಿಸುವ ಮೂಲಕ ಪರಿಸರ, ಪ್ರತಿಯೊಬ್ಬರ ಗೌರವ ಕಾಪಾಡಬೇಕು ಎಂಬ ಉದ್ದೇಶನ್ನಿಟ್ಟುಕೊಂಡು ಸ್ವಚ್ಚಭಾರತ ಅಭಿಯಾನದಡಿಯಲ್ಲಿ ದೇಶದಲ್ಲಿ ಸುಮಾರು 12 ಕೋಟಿ ರೂ, ಗೂ ಹೆಚ್ಚು ಶೌಚಾಲಯ ನಿರ್ಮಿಸುವ ಮೂಲಕ ಜನರಲ್ಲಿ ಪರಿಸರದ ಜಾಗೃತಿ ಮೂಡಿಸಿದ ಕೀರ್ತಿ ನರೇಂದ್ರಮೋದಿ ಅವರಿಗೆ ಸಲ್ಲುತ್ತದೆ ಎಂದರು.

ಪ್ರಧಾನಿ ನರೇಂದ್ರಮೋದಿಯವರ ಆಶಯದಂತೆ ಪ್ರತಿಯೊಬ್ಬರೂ ಒಂದೊಂದು ಗಿಡನೆಟ್ಟು ಪರಿಸರ ಉಳಿಸಿ ಬೆಳೆಸಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ, ಗ್ರಾಮಾಂತರ ಮಂಡಲ ಅಧ್ಯಕ್ಷ ಕಾಡಹಳ್ಳಿ ಕುಮಾರ್, ಕಾರ್ಯಕ್ರಮದ ಜಿಲ್ಲಾ ಸಂಚಾಲಕರಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ವೃಷಬೇಂದ್ರಪ್ಪ, ನಟರಾಜ್ ಗೌಡ, ಅರಕಲವಾಡಿ ನಾಗೇಂದ್ರ, ಸಾಹಿತಿ ಕೋಡಿಉಗನೆ ಮಂಜು, ನಿಕಟಪೂರ್ವ ಅಧ್ಯಕ್ಷ ಅರಕಲವಾಡಿ ಮಹೇಶ, ಗ್ರಾಮಾಂತರ ಮಂಡಲ ಪ್ರಧಾನ ಕಾರ್ಯದರ್ಶಿ ಮಾದಪ್ಪ ಕೊತ್ತಲವಾಡಿ, ಉಪಾಧ್ಯಕ್ಷ ಎಂ.ಎಸ್.ಮಹಾದೇವಸ್ವಾಮಿ, ಕಾರ್ಯದರ್ಶಿ ಮೋಹನ್ ಕುಮಾರ್, ಪ್ರಜ್ವಲ್, ನಾಗರಾಜು ಬಸಪ್ಪನಪಾಳ್ಯ, ಅಮಚವಾಡಿ ಮಹಾಶಕ್ತಿ ಕೇಂದ್ರ ಅಧ್ಯಕ್ಷ ಬೆಳ್ಳಪ್ಪ, ಉಡಿಗಾಲ ಮಹಾಶಕ್ತಿ ಅಧ್ಯಕ್ಷ ಮಂಜು ಡಿ, ಮಾದಾಪುರ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಎಂ.ಕುಮಾರಸ್ವಾಮಿ , ಡಿ.ಮಂಜು, ಕೊತ್ತಲವಾಡಿ ಶಕ್ತಿಕೇಂದ್ರ ಅಧ್ಯಕ್ಷ ಕಟ್ನವಾಡಿ ಶೇಖರ್ ಮೊದಲಾದವರು ಇದ್ದರು.

Share this Article
Leave a comment