ಕಾಂಗ್ರೆಸ್ ನಂಬಿಕೆಗೆ ಯೋಗ್ಯವಲ್ಲದ ಪಕ್ಷ- ನಟ ಚೇತನ್ 

ಮಣಿಕಂಠ ಜನತಾ ರಾಯಭಾರಿ
1 Min Read

ಬೆಂಗಳೂರು: ತಮಿಳುನಾಡಿನಲ್ಲಿ ವಿಜಯ್ ನೇತೃತ್ವದ ಟಿವಿಕೆ ಪಕ್ಷಕ್ಕೆ ಬೆಂಬಲ ಸೂಚಿಸುವ ಮೂಲಕ ಕಾಂಗ್ರೆಸ್ ನಂಬಿಕೆಗೆ ಅರ್ಹವಲ್ಲದ ಪಕ್ಷ ಎಂಬುದನ್ನು ಸಾಬೀತುಪಡಿಸಿದೆ ಎಂದು ನಟ ಚೇತನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪ್ರಸ್ತುತ ತಮಿಳುನಾಡಿನ ರಾಜಕಾರಣದ ಬಗ್ಗೆ ಅಭಿಪ್ರಾಯ ಹಂಚಿಕೊಂಡಿರುವ ಅವರು, ವಿಜಯ್‌ ನೇತೃತ್ವದ ಟಿವಿಕೆ ಪಕ್ಷಕ್ಕೆ ಅವಕಾಶವಾದಿ ಕಾಂಗ್ರೆಸ್ ಮಾತ್ರ ಬೆಂಬಲ ನೀಡಿದಂತಿದೆ. ಇದರಲ್ಲಿ ಯಾವುದೇ ಆಶ್ಚರ್ಯವೇ ಇಲ್ಲ ಎಂದು ಹೇಳಿದ್ದಾರೆ.

ವಿಜಯ್‌ಗೆ ಜನರಿಂದ ಭಾರೀ ಬೆಂಬಲ ಸಿಕ್ಕಿದ್ದರೂ, ತಮಿಳುನಾಡಿನ ರಾಜಕೀಯ ನಾಯಕರು ಅವರನ್ನು ಆ ಜನರ ವಿಶ್ವಾಸಕ್ಕೆ ಅರ್ಹನಾಗಿ ಪರಿಗಣಿಸುತ್ತಿಲ್ಲ. ಕಾಂಗ್ರೆಸ್ ಎಂದಿನಂತೆ ನಂಬಿಕೆಗೆ ಯೋಗ್ಯವಲ್ಲದ ಪಕ್ಷ ಎಂಬುದನ್ನು ಸಾಬೀತುಪಡಿಸಿದೆ. ವಿಜಯ್ ಅವರು ಗೆಲುವು ಸಾಧಿಸಿದ್ದರೂ, ಅವರು ನಾಯಕನಲ್ಲ ಎಂದು ಹೇಳಿದ್ದಾರೆ.

 

Share this Article
Leave a comment