ಹನೂರು: ವಿಧಾನಸಭಾ ವಿವಿಧ ಗ್ರಾಮಗಳ ಪ್ರಭಾವಿ ಮುಖಂಡರುಗಳು ಕಾಂಗ್ರೆಸ್, ಬಿಜೆಪಿ ಪಕ್ಷಗಳನ್ನು ತೊರೆದು ಶಾಸಕ ಎಂ.ಆರ್.ಮಂಜುನಾಥ್ ಅವರ ಸಮ್ಮುಖದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಪಟ್ಟಣದ ಜೆಡಿಎಸ್ ಪಕ್ಷದ ಕಚೇರಿ ಮುಂಭಾಗ ಶುಕ್ರವಾರ ಆಯೋಜನೆ ಮಾಡಲಾಗಿದ್ದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಹಲವು ಪ್ರಭಾವಿ ಮುಖಂಡರು ಜೆಡಿಎಸ್ ಸೇರ್ಪಡೆಯಾದರು. ಈ ಸಂದರ್ಭದಲ್ಲಿ ಶಾಸಕ ಎಂ.ಆರ್.ಮಂಜುನಾಥ್ ಮಾತನಾಡಿ, ಹಲವಾರು ಅನುಭವಿ ಪ್ರಭಾವಿ ಕಾರ್ಯಕರ್ತರು ಕಾಂಗ್ರೆಸ್, ಬಿಜೆಪಿ ಪಕ್ಷವನ್ನು ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿರುವುದು ನನಗೆ ತುಂಬಾ ಸಂತೋಷವಾಗಿದೆ. ಮುಂದಿನ ಪೀಳಿಗೆಗೆ ಒಂದು ಉತ್ತಮ ಸಮಾಜ ನಿರ್ಮಾಣ ಮಾಡುವುದೇ ನಮ್ಮ ಗುರಿಯಾಗಬೇಕು. ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ನಾನು ಕೆಲಸ ಮಾಡುತ್ತೇನೆ ಎಂದರು.
ಹನೂರು ಕ್ಷೇತ್ರದಲ್ಲಿ ಇನ್ನು ಹೆಚ್ಚಿನ ಅಭಿವೃದ್ಧಿ ಕಾರ್ಯ ನಡೆಯಲಿದೆ. ಇವತ್ತು ಸೇರ್ಪಡೆಯಾಗಿರುವ ಎಲ್ಲಾ ಕಾರ್ಯಕರ್ತರಿಂದ ನನಗೆ ಆನೆ ಬಲ ಬಂದಂತಾಗಿದೆ. ನಾವೆಲ್ಲ ಒಟ್ಟಾರೆ ಸೇರಿಕೊಂಡು ಅಭಿವೃದ್ಧಿ ಕೆಲಸ ಮಾಡೋಣ ಎಂದರು.
ಹನೂರು ವಿಧಾನಸಭಾ ಕ್ಷೇತ್ರದ ಹುತ್ತೂರು ಗ್ರಾಮದ ನಾಯಕ ಸಮುದಾಯದ ಪುಟ್ಟ ವೀರ ನಾಯಕ, ಕೌದಳ್ಳಿ ಗ್ರಾಮದ ರಾಚಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಹುತ್ತೂರು ಬಾಲಕೃಷ್ಣ, ಮಾಜಿ ಅಧ್ಯಕ್ಷ ಹುತ್ತೂರು ನಾಗರಾಜು, ಬಾಲು, ರಾಮಾಂಜಯ್ಯ ಕೌದಳ್ಳಿ, ರಾಚಪ್ಪಾಜಿ ಕೌದಳ್ಳಿ, ವೆಂಕಟಮಾಧು ಹುತ್ತೂರು, ಶಾಗ್ಯ ಕೆಂಚಪ್ಪ, ದೊಡ್ಡಿ ನಾಗಣ್ಣ, ರಂಗಸ್ವಾಮಿ ಹುತ್ತೂರು, ಮುತ್ತುರಾಜು ಕೌದಳ್ಳಿ, ಸಿದ್ದೇಶ್ ಹಾಗೂ ಇನ್ನು ಮುಂತಾದ ಮುಖಂಡರುಗಳು ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳನ್ನು ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ಬಾಬಣ್ಣ,ರಾಜಶೇಖರ್ ಮೂರ್ತಿ, ಸೀನಣ್ಣ, ತಿರುಪತಿ ನಾಯಕ್, ವಸಂತ ಕುಮಾರ್, ಗುರುಮಲ್ಲಪ್ಪ, ರಾಜು ಗೌಡ, ಮಹಾದೇವ, ವಿಜಯ್ ಕುಮಾರ್, ತಂಗವೇಲು, ಶಿವಪ್ಪ, ಸಿಂಗನಲ್ಲೂರು ರಾಜಣ್ಣ, ಗೋಪಾಲ್ ನಾಯಕ, ನಬಿ, ಚಿನ್ನಸ್ವಾಮಿ, ಹುಚ್ಚೇ ಗೌಡ, ನಟರಾಜ್ ಗೌಡ,ಸಿದ್ದರಾಜು, ಬಸವರಾಜು ಮಾಲಯ್ಯ, ಮಣಿ, ಅಸ್ಲಾಂ, ರಂಗಶೆಟ್ಟಿ, ಮಹಾದೇವ,ಜೆಸ್ಸಿಮ್,ಇನ್ನು ಹಲವಾರು ಜೆಡಿಎಸ್ ಪಕ್ಷದ ಮುಖಂಡರುಗಳು ಇದ್ದರು.

“ಹಲವಾರು ವರ್ಷಗಳಿಂದ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳಲ್ಲಿ ಅಪ್ಪಟ ಕಾರ್ಯಕರ್ತರಾಗಿ ಕೆಲಸ ಮಾಡಿ ಇದೀಗ ನಮ್ಮ ಕ್ಷೇತ್ರದ ಶಾಸಕ ಎಂ.ಆರ್.ಮಂಜುನಾಥ್ ಅವರ ಅಭಿವೃದ್ಧಿ ಕೆಲಸಗಳನ್ನು ನೋಡಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿರುವುದು ತುಂಬಾ ಒಳ್ಳೆಯ ಬೆಳವಣಿಗೆಯಾಗಿದೆ. ನಮ್ಮ ಕ್ಷೇತ್ರದ ಸಮಗ್ರ ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಶಾಸಕ ಮಂಜುನಾಥ್ ಅವರಿಗೆ ಬಲ ತುಂಬಲು ಪ್ರಭಾವಿ ಮುಖಂಡರುಗಳು ಸೇರ್ಪಡೆಯಾಗಿದ್ದಾರೆ. ನಮ್ಮ ಶಾಸಕರು ಎಲ್ಲರನ್ನು ಒಗ್ಗೂಡಿಸಿಕೊಂಡು ಹೋಗುವ ಸಮಾನ ಮನಸ್ಕರು. ಅವರಿಗೆ ನಾವೆಲ್ಲರೂ ಬೆಂಬಲ ನೀಡುವ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ಮುಂದಾಗೋಣ.”
|ಉದ್ದನೂರು ಮಹಾದೇವ ಪ್ರಸಾದ್, ಚಾಮುಲ್ ಹಾಲು ಒಕ್ಕೂಟದ ನಿರ್ದೇಶಕ, ಹನೂರು
“70 ವರ್ಷದಿಂದ ಕಾಂಗ್ರೆಸ್ ಪಕ್ಷದಲ್ಲಿ ಕೆಲಸ ಮಾಡಿದ್ದೇವೆ ನಿಷ್ಠಾವಂತರಾಗಿ ಸೇವೆ ಸಲ್ಲಿಸಿದ್ದೇವೆ. ನಮಗೆ ಬೆಲೆ ಸಿಗದ ಕಾರಣ ಹನೂರು ಕಾಂಗ್ರೆಸ್ ನಲ್ಲಿ ನಿಷ್ಠಾವಂತರನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ಪಕ್ಷಕ್ಕೆ ಅರ್ಹತೆ ಇಲ್ಲ. ಆಗಾಗಿ ನಾವೆಲ್ಲ ಬೇಸತ್ತು ಶಾಸಕರ ಸೇವೆ, ಅಭಿವೃದ್ಧಿ ಕಾರ್ಯವನ್ನು ಬೆಂಬಲಿಸಿ ಶಾಸಕ ಮಂಜುನಾಥ್ ರವರ ನೇತೃತ್ವದಲ್ಲಿ ನಾವೆಲ್ಲ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ ಯಾಗಿದ್ದೇವೆ. ಯಾವ ಆಸೆ ಆಮಿಷಗಳಿಲ್ಲದೆ ಪ್ರಾಮಾಣಿಕವಾಗಿ ನಾವೆಲ್ಲ ಅವರ ಜೊತೆ ದುಡಿಯುತ್ತೇವೆ. ಮುಂದಿನ ದಿನಗಳಲ್ಲಿ ನಾವೆಲ್ಲರೂ ಒಟ್ಟಾಗಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಶ್ರಮಿಸೋಣ”.
|ನಾಗರಾಜು ಕೌದಳ್ಳಿ, ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ,ಹನೂರು