ಕೊಳ್ಳೇಗಾಲದಲ್ಲಿ ವಿಶ್ವ ದಾದಿಯರ ದಿನಾಚರಣೆ 

ಮಣಿಕಂಠ ಜನತಾ ರಾಯಭಾರಿ
0 Min Read

ಕೊಳ್ಳೇಗಾಲ: ಪಟ್ಟಣದ ಸರ್ಕಾರಿ ಉಪವಿಭಾಗ ಆಸ್ಪತ್ರೆಯಲ್ಲಿ ವಿಶ್ವ ದಾದಿಯರ ದಿನವನ್ನು ಮಂಗಳವಾರ ಆಚರಣೆ ಮಾಡಲಾಯಿತು.

ಈ ಕಾರ್ಯಕ್ರಮದಲ್ಲಿ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಲೋಕೇಶ್ವರಿ ಅವರು ಶುಶ್ರೂಷಾಕಿಯರ ಕುರಿತು ಮಾತನಾಡಿ ಶುಭ ಹಾರೈಸಿದರು.

ಇದೇ ವೇಳೆ ಶುಶ್ರೂಷಾಕಾಧೀಕ್ಷರಾದ ಡಾ.ರತಿ ಅವರಿಗೆ ಸನ್ಮಾನಿಸಿ ಅಭಿನಂದಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಶುಶ್ರೂಷಕರಾದ ಅಭಿಲಾಷ್ ಅವರು ನಡೆಸಿಕೊಟ್ಟರು.

ಈ ಸಂಧರ್ಭದಲ್ಲಿ ಆಸ್ಪತ್ರೆಯ ವೈದ್ಯರಾದ ಡಾ.ಬಸವರಾಜು, ಡಾ.ಕಾವ್ಯ, ಡಾ.ಚೇತನ್, ಆಡಳಿತ ಸಿಬ್ಬಂದಿ, ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಹಾಗೂ ಇತರರು ಇದ್ದರು.

Share this Article
Leave a comment