ಕೊಳ್ಳೇಗಾಲ ಬೈಪಾಸ್ ನಲ್ಲಿ ಆಟೋ ಅಪಘಾತ ಇಬ್ಬರು ಸಾವು 

ಮಣಿಕಂಠ ಜನತಾ ರಾಯಭಾರಿ
1 Min Read

ಕೊಳ್ಳೇಗಾಲ: ತಾಲೂಕಿನ ನರೀಪುರ-ಮಧುವನಹಳ್ಳಿ ಬೈಪಾಸ್ ಮುಖ್ಯರಸ್ತೆಯಲ್ಲಿ ಆಟೋ ಮಗುಚಿ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ್ದಾರೆ.

ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ನರೀಪುರ-ಮಧುವನಹಳ್ಳಿ ಬೈಪಾಸ್ ಮುಖ್ಯ ರಸ್ತೆಯಲ್ಲಿರುವ ಮಧುವನಹಳ್ಳಿ ಪ್ರದೀಪ್ ಎಂಬುವವರ ಜಮೀನಿನ ಹತ್ತಿರ ಬೆಳ್ಳಂಬೆಳಗ್ಗೆ ಆಟೋ ಅಪಘಾತವಾಗಿದೆ. ಬೆಂಗಳೂರು ರಾಜಗೋಪಾಲನಗರದ ನಿವಾಸಿ ಮನೋಜ್ ಎಂಬುವವರು ಮೆತಪಟ್ಟಿದ್ದಾರೆ ಎಂದು ತಿಳಿದು ಬಂದಿದ್ದು, ಮತ್ತೋರ್ವನ ಹೆಸರು ತಿಳಿಯಬೇಕಿದೆ. ಮತ್ತೋರ್ವನಿಗೆ ಸಣ್ಣಪುಟ್ಟ ಗಾಯಗಳಾಗಿದೆ.

ಅಪಘಾತದ ವಿಷಯ ತಿಳಿಯುತ್ತಿದ್ದಂತೆ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, 112 ವಾಹನದಲ್ಲಿ ಲಕ್ಷ್ಮಿಕಾಂತ್ ಎಂಬ ವ್ಯಕ್ತಿಗೆ ಸಣ್ಣಪುಟ್ಟ ಗಾಯಗಳಾಗಿದ್ದುಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿರುತ್ತದೆ.

ಈ ಸಂದರ್ಭದಲ್ಲಿ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ಐ ಚೆಲುವರಾಜು ಹಾಗೂ ಸರ್ಕಲ್ ಇನ್ಸ್ಪೆಕ್ಟರ್ ರವೀಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Share this Article
Leave a comment