ಜಿಲ್ಲೆಯ ಅಭಿವೃದ್ಧಿಗೆ ಎ.ಆರ್‌.ಕೃಷ್ಣಮೂರ್ತಿಗೆ ಸಚಿವ ಸ್ಥಾನನೀಡಿ- ದಸಂಸ ಒತ್ತಾಯ‌

ಮಣಿಕಂಠ ಜನತಾ ರಾಯಭಾರಿ
2 Min Read

ಚಾಮರಾಜನಗರ: ಜಿಲ್ಲೆಯ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರಿಗೆ ಸಚಿವ ಸ್ಥಾನವನ್ನು ನೀಡಬೇಕು ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಯರಿಯೂರು ರಾಜಣ್ಣ ಒತ್ತಾಯಿಸಿದರು.

ರಾಜ್ಯದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್ ಸರ್ಕಾರ, ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಶಾಸಕರಿಗೆ ಸಚಿವ ಸ್ಥಾನವನ್ನು ನೀಡಿರುವುದಿಲ್ಲ. ಕ್ಷೇತ್ರದಲ್ಲಿ ಅನುಭವಿ ಶಾಸಕರುಗಳು ಸುಮಾರು ಜನರು ಕ್ಷೇತ್ರದ ಅಭಿವೃದ್ಧಿಗೆ ಶ್ರಮ ವಹಿಸಿರುವುದು ಶ್ಲಾಘನೀಯ. ಈ ಕ್ಷೇತ್ರದ ಶಾಸಕರಾದ ಮಾಜಿ ರಾಜ್ಯಪಾಲರು, ದಿವಂಗತ ಬಿ. ರಾಚಯ್ಯ ರವರ ಪುತ್ರರಾದ ಎ.ಆರ್.ಕೃಷ್ಣಮೂರ್ತಿ ಅವರು ರಾಜಕೀಯವಾಗಿ ತಮ್ಮ ತಂದೆಯ ಎಲ್ಲಾ ಮಜಲುಗಳನ್ನು ಹತ್ತಿರದಿಂದ ಬಲ್ಲವರಾಗಿರುತ್ತಾರೆ. ಈ ನಿಟ್ಟಿನಲ್ಲಿ ಎ.ಆರ್.ಕೃಷ್ಣಮೂರ್ತಿ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ರಾಜ್ಯದ ಕೊಳ್ಳೇಗಾಲ ಮೀಸಲು ಕ್ಷೇತ್ರದಲ್ಲಿ ಎಸ್ಸಿ, ಎಸ್ಟಿ ಹಾಗೂ ಓ.ಬಿ.ಸಿ. ಸಮುದಾಯದ ಜನರು ಹೆಚ್ಚಿನ ಸಂಖ್ಯೆಯಲ್ಲಿ ವಾಸವಾಗಿದ್ದ, ಇಲ್ಲಿನ ಜನರು ಕೃಷಿಯನ್ನೇ ಜೀವನಕ್ಕಾಗಿ ಅವಲಂಭಿಸಿರುತ್ತಾರೆ. ಇಲ್ಲಿ ಕೈಗಾರಿಕಾ ಪ್ರದೇಶಗಳಿಗೆ ಸ್ಥಳಾವಕಾಶಗಳಿದ್ದರೂ ಬರಿ ಶಾಸಕತ್ವದಲ್ಲಿ ಹೆಚ್ಚಿನ ಅಧಿಕಾರ ಲಭ್ಯವಿಲ್ಲದ ಕಾರಣ ಇನ್ನೂ ಹಿಂದುಳಿದ ಕ್ಷೇತ್ರವಾಗಿಯೇ ಉಳಿದಿದೆ. ಇಲ್ಲಿನ ಬಡತನ, ನಿರುದ್ಯೋಗ, ಉದ್ಯೋಗ ಅವಕಾಶಗಳನ್ನು ಕಲ್ಪಿಸುವ ಸಲುವಾಗಿ ಈ ಕ್ಷೇತ್ರದ ಶಾಸಕರುಗಳಿಗೆ ಹೆಚ್ಚಿನ ಅಧಿಕಾರ ಸೌಲಭ್ಯಗಳು ಬೇಕಾಗಿರುವುದರಿಂದ ಸಚಿವ ಸ್ಥಾನದ ಅವಶ್ಯಕತೆ ಎದ್ದು ಕಾಣುತ್ತದೆ ಎಂದರು.

ಕಳೆದ ಮೂರು ವರ್ಷಗಳಲ್ಲಿ ಕೊಳ್ಳೇಗಾಲ ತಾಲ್ಲೂಕು ವಿಭಾಗೀಯ ಸರ್ಕಾರಿ ಆಸ್ಪತ್ರೆ, ರಸ್ತೆಗಳ ಅಭಿವೃದ್ಧಿ, ಸಂತೇಮರಹಳ್ಳಿಯಲ್ಲಿ ಎಳನೀರು ಮಾರುಕಟ್ಟೆ ಮುಡಿಗುಂಡ ರೇಷ್ಮೆ ಪಾರ್ಕ್, ಬಸ್ ನಿಲ್ದಾಣಗಳು, ಸಮುದಾಯ ಭವನಗಳು ಹಾಗೂ ಇನ್ನೂ ಮುಂತಾದ ಅಭಿವೃದ್ಧಿ ಕಾರ್ಯಗಳಿಗಾಗಿ ಸುಮಾರು 500 ಕೋಟಿ ರೂ ಗಳಿಗೂ ಹೆಚ್ಚು ಅನುದಾನವನ್ನು ತಂದು ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಲು ಶ್ರಮಿಸಿರುತ್ತಾರೆ. ಹೆಚ್ಚಿನ ರಾಜಕೀಯ ಅನುಭವವನ್ನು ಹೊಂದಿರುವುದರಿಂದ ಇವರಿಗೆ ಕರ್ನಾಟಕ ರಾಜ್ಯ ಸರ್ಕಾರದಲ್ಲಿ ಸಚಿವ ಸ್ಥಾನವನ್ನು ನೀಡಿ ಕ್ಷೇತ್ರ ಮತ್ತು ಜಿಲ್ಲೆಯನ್ನು ಅಭಿವೃದ್ಧಿ ಪಡಿಸಲು ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ಗೋಷ್ಠಿಯಲ್ಲಿ ದಸಂಸ ತಾಲೂಕು ಸಂಚಾಲಕ ಅನಿಲ್ ಕುಮಾರ್, ಮದ್ದೂರು ಉಮಾಶಂಕರ್, ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ಯರಗಂಬಳ್ಳಿ ಮಲ್ಲು, ವಸಂತ್ ಕುಮಾರ್, ವೈ.ಕೆ.ಮೋಳೆ ನಂಜುಂಡಸ್ವಾಮಿ ಹಾಜರಿದ್ದರು.

Share this Article
Leave a comment