ಚಾಮರಾಜನಗರ: ಜಿಲ್ಲೆಯಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳನ್ನು ರೇಷ್ಮೆ, ಪಶು ಸಂಗೋಪನೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಸನ್ಮಾನಿಸಿದರು.
ನಗರದ ಜಿಲ್ಲಾ ಪಂಚಾಯಿತಿ ಕೆಡಿಪಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ವಿದ್ಯಾರ್ಥಿಗಳನ್ನು ಸಚಿವ ಕೆ.ವೆಂಕಟೇಶ್ ಸನ್ಮಾನಿಸಿದರು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಜಿಲ್ಲೆಯ ಟಾಪರ್‌ಗಳಾಗಿ ಹೊರಹೊಮ್ಮಿದ ಎಂ.ರಿಷಿತಾ(623), ಎಂ.ನಿಹಾರಿಕಾ(620), ಸಂಚನಾ ಸತೀಶ್(620), ಎನ್.ದೀಪಿಕಾ(619), ಆರ್.ಪ್ರತಿಭಾ(618), ಎಸ್.ತನ್ಮಯಿ(618), ಎಸ್.ಶಬರಿ(618) ಸನ್ಮಾನ ಸ್ವೀಕರಿಸಿದರು.

ಪಿಯುಸಿ ಪರೀಕ್ಷೆಯ ಕಲಾ ವಿಭಾಗದಲ್ಲಿ ಅಧಿಕ ಅಂಕ ಪಡೆದ ಎಂ.ಚೈತ್ರಾ(586), ಅಫ್ರೀನ್(583), ಎಂ.ಗೌತಮಿ(582), ವಾಣಿಜ್ಯ ವಿಭಾಗದಲ್ಲಿ ಉಷಾ(593), ಬಿ.ಎಸ್.ಸಂಜನಾ(592), ಎಸ್.ನೇತ್ರಾ(592), ಶ್ರೀಯಾ(590), ವಿಜ್ಞಾನ ವಿಭಾಗದಲ್ಲಿ ಐ.ಭೂಮಿಕಾ(587), ನಿಶ್ಚಯ(586), ಅಶೋಕ್‌ಕುಮಾರ್(586), ಎನ್.ಸಜಿನಿ(585), ಮನುಶ್ರೀ(585) ಗೌರವ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಎಂ.ಆರ್.ಮಂಜುನಾಥ್, ಎಚ್.ಎಂ.ಗಣೇಶ್ ಪ್ರಸಾದ್, ಮಹಮ್ಮದ್ ಅಸ್ಗರ್ ಮುನ್ನಾ, ಎಚ್.ವಿ.ಚಂದ್ರು, ಸೈಯ್ಯದ್ ಮುಸೈಬ್, ಶ್ರೀ ರೂಪಾ, ಮೋನಾರೋತ್, ಎಂ.ಮುತ್ತುರಾಜು ಹಾಗೂ ಇತರರು ಉಪಸ್ಥಿತರಿದ್ದರು.